ಎಕ್ಸ್‌ಪರ್ಟ್ ಟೈಮ್‌ಸ್ಕ್ವೇರ್‌ ಡ್ಯಾನ್ಸ್‌ ಆಂಡ್‌ ಮ್ಯೂಸಿಕ್‌ ಫೆಸ್ಟ್ - 22

Chandrashekhara Kulamarva
0

ಶಿಕ್ಷಣದ ಜತೆಗೆ ಸಾಂಸ್ಕೃತಿಕ ಅಭಿರುಚಿ ಮೂಡಿಸುವ ಕಾಳಜಿ ಅನನ್ಯ: ಸಂಗೀತ ನಿರ್ದೇಶಕ ಗುರುಕಿರಣ್‌


ಮಂಗಳೂರು: ವಿದ್ಯಾರ್ಥಿಗಳ ಕನಸನ್ನು ನನಸಾಗಿಸಲು ಎಕ್ಸ್‌ಪರ್ಟ್ ಅವಿರತ ಶ್ರಮಿಸುತ್ತಿದೆ. ಶಿಕ್ಷಣದ ಜತೆಗೆ ಸಾಂಸ್ಕೃತಿಕ ಅಭಿರುಚಿಯನ್ನೂ ಮೂಡಿಸುವ ಸಂಸ್ಥೆಯ ಕಾಳಜಿ ಅನನ್ಯವಾಗಿದೆ ಎಂದು ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್‌ ಅಭಿಪ್ರಾಯಪಟ್ಟರು.


ವಳಚ್ಚಿಲ್‌ ಎಕ್ಸ್‌ಪರ್ಟ್‌ ಪದವಿಪೂರ್ವ ಕಾಲೇಜಿನ ಕ್ಯಾಂಪಸ್ಸಿನಲ್ಲಿ ನಡೆದ ಎಕ್ಸ್‌ಪರ್ಟ್‌ ಟೈಮ್‌ಸ್ಕ್ವೇರ್‌ ಡ್ಯಾನ್ಸ್‌ ಆಂಡ್‌ ಮ್ಯೂಸಿಕ್‌ ಫೆಸ್ಟ್ - 22 ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಭಾರತೀಯ ಸಂಗೀತ ಮತ್ತು ನೃತ್ಯ ವೈವಿಧ್ಯಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ ಅದರ ಬಗ್ಗೆ ಅಭಿರುಚಿ ಮೂಡಿಸುತ್ತಿರುವ ಎಕ್ಸ್‌ಪರ್ಟ್‌ ಶಿಕ್ಷಣ ಸಂಸ್ಥೆಯು ಉತ್ತಮ ಯುವಪೀಳಿಗೆಯನ್ನು ರೂಪಿಸುತ್ತಿದೆ ಎಂದು ಶ್ಲಾಘಿಸಿದರು. ಬಳಿಕ ಗುರುಕಿರಣ್‌ ಅವರು ತಮ್ಮ ಕಂಠಸಿರಿಯ ಮೂಲಕ ವಿವಿಧ ಹಾಡುಗಳನ್ನು ಹಾಡಿ ವಿದ್ಯಾರ್ಥಿಗಳ ಮನರಂಜಿಸಿದರು.


ಎಕ್ಸ್‌ಪರ್ಟ್‌ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್‌ ಅವರು ಅಧ್ಯಕ್ಷತೆ ವಹಿಸಿದರು.


ಉಪಾಧ್ಯಕ್ಷೆ ಡಾ.ಉಷಾಪ್ರಭಾ ಎನ್.ನಾಯಕ್‌, ಟ್ರಸ್ಟಿ ಉಸ್ತಾದ್‌ ರಫೀಕ್‌ ಖಾನ್‌, ವಾಸ್ತುಶಿಲ್ಪ ತಜ್ಞೆ ದೀಪಿಕಾ ಎ. ನಾಯಕ್‌, ನಮ್ಮ ಟಿವಿ ಆಡಳಿತ ನಿರ್ದೇಶಕ ಡಾ. ಶಿವಶರಣ್‌, ಪ್ರಾಂಶುಪಾಲ ಡಾ. ಎನ್.ಕೆ. ವಿಜಯನ್‌ ಕರಿಪ್ಪಾಲ್‌ ಉಪಸ್ಥಿತರಿದ್ದರು.


ಸಮಾರಂಭದಲ್ಲಿ ಕಳೆದ ಶೈಕ್ಷಣಿಕ ಸಾಲಿನ ರೇಂಕ್‌ ವಿಜೇತರನ್ನು ಸನ್ಮಾನಿಸಲಾಯತು. ಮಧುಪ್ರಿಯ (ಸೂಪರ್‌ ಸ್ಟಾರ್‌ ಆಫ್‌ ಎಕ್ಸ್‌ಪರ್ಟ್) ಪ್ರಜ್ವಲ್‌ ರೂಡಿಗಿ (ಪಾಂಡಿತ್ಯೇತರ ತಾರೆ), ಭೈರೇಶ್ (ಅತ್ಯುತ್ತಮ ಗಮನಸೆಳೆದ ವಿದ್ಯಾರ್ಥಿ) 2022-23ನೇ ಶೈಕ್ಷಣಿಕ ಸಾಲಿನ ಪುರಸ್ಕಾರಕ್ಕೆ ಪಾತ್ರರಾದರು.


ಮಾಹಿತಿ ತಂತ್ರಜ್ಞಾನ ನಿರ್ದೇಶಕ ಅಂಕುಶ್‌ ಎನ್. ನಾಯಕ್‌ ಸ್ವಾಗತಿಸಿ, ಕಾರ್ಯಕ್ರಮ ನಿರ್ದೇಶಕಿ ಧೃತಿ ವಿ. ಹೆಗ್ಡೆ ವಂದಿಸಿದರು.


ಗಮನಸೆಳೆದ ಕಥಕ್‌ ನೃತ್ಯ:


ಸಮಾರಂಭದ ಬಳಿಕ ಬೆಂಗಳೂರಿನ ಅಭಿನವ ಡ್ಯಾನ್ಸ್‌ ಕಂಪೆನಿಯ ನಿರುಪಮಾ ರಾಜೇಂದ್ರನ್‌ ಅವರ ತಂಡದಿಂದ ಆಕರ್ಷಕ ಕಥಕ್‌ ನೃತ್ಯ ಕಾರ್ಯಕ್ರಮ ನಡೆಯಿತು. ಪಾಂಡುರಂಗ ವಿಠಲ ಅಭಂಗ, ಶಿವ ತಾಂಡವ ಸ್ತೋತ್ರ, ವೀರ ಅಭಿಮನ್ಯು ಮತ್ತು ಮದನಾಂಜಲಿ ಮೊದಲಾದ ನೃತ್ಯ ಪ್ರಯೋಗಗಳು ನೃತ್ಯ ರಸಿಕರ ಕಣ್ಮನ ಸೆಳೆಯಿತು.


ಎಕ್ಸ್‌ಪರ್ಟ್‌ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್‌ ಮತ್ತು ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್.ನಾಯಕ್‌ ನೃತ್ಯಪಟುಗಳನ್ನು ಸನ್ಮಾನಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top