ಎಕ್ಸಾಂ ವಾರಿಯರ್ಸ್‌: ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು ಚಿತ್ರರಚನಾ ಸ್ಪರ್ಧೆ

Upayuktha
0

ಪ್ರಧಾನಿ ಮೋದಿ ಅವರ ಪ್ರೇರಣೆಯಿಂದ ಶಾಸಕ ಕಾಮತ್‌ ಅವರಿಂದ ಆಯೋಜನೆ



ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರು ವಿಧ್ಯಾರ್ಥಿಗಳು ಪರೀಕ್ಷೆಯನ್ನು ಹೇಗೆ ಎದುರಿಸಬೇಕು ಎಂಬ ಪರಿಕಲ್ಪನೆಯಲ್ಲಿ ತರುಣ ಸಮುದಾಯಕ್ಕಾಗಿ ಬರೆದಿರುವ "ಎಕ್ಸಾಮ್ ವಾರಿಯರ್ಸ್" ಕೃತಿಯ ಅನುಸಾರ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಪೂರಕವಾಗಿ ಮಂಗಳೂರು ನಗರ ದಕ್ಷಿಣದಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರ ನೇತೃತ್ವದಲ್ಲಿ ವಿನೂತನವಾಗಿ ಚಿತ್ರ ಕಲಾ ಸ್ಪರ್ಧೆಯನ್ನು ಬುಧವಾರ ಹಮ್ಮಿಕೊಳ್ಳಲಾಯಿತು. 


ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯು ಶಕ್ತಿನಗರ ಶಕ್ತಿ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಿತು. 9,10 ಹಾಗೂ ಪಿಯುಸಿ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಸ್ಪರ್ಧೆ ನಡೆಯಲಿದೆ‌. ಜಿಲ್ಲೆಯಿಂದ ಸರಿ ಸುಮಾರು 500ಕ್ಕೂ ಅಧಿಕ ವಿಧ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸುವ‌ ನಿರೀಕ್ಷೆಯಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಊಟ ಉಪಹಾರದ ವ್ಯವಸ್ಥೆ ಹಾಗೂ ಪ್ರಧಾನಿ ಅವರು ರಚಿಸಿದ ಎಕ್ಸಾಮ್ ವಾರಿಯರ್ಸ್ ಕೃತಿಯನ್ನು ಮತ್ತು ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.


ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿಗೆ ವಿಶೇಷವಾಗಿ ಟ್ರೋಫಿ ಹಾಗೂ 8 ಗ್ರಾಂ ಚಿನ್ನದ ಪದಕ, ದ್ವಿತೀಯ 6 ಗ್ರಾಂ ಚಿನ್ನದ ಪದಕ, ಹಾಗೂ ತೃತೀಯ 4 ಗ್ರಾಂ ಚಿನ್ನದ ಪದಕ ಹಾಗೂ ಟ್ರೋಫಿ ಬಹುಮಾನವಾಗಿ ನೀಡಲಾಗುವುದು. ಮಾತ್ರವಲ್ಲದೆ ಸಮಾಧಾನಕರ ಬಹುಮಾನವಾಗಿ 25 ಜನರಿಗೆ ಬೆಳ್ಳಿಯ ಪದಕ ಹಾಗೂ ಎಕ್ಸಾಂ ವಾರಿಯರ್ಸ್ ಪುಸ್ತಕ ನೀಡಲಾಗುತ್ತದೆ. 


ಚಿತ್ರಕಲೆಯ ಕುರಿತು ಆಸಕ್ತರಾಗಿರುವ ಸಾರ್ವಜನಿಕರಿಗೂ ಕೂಡ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದ್ದಾರೆ.  


ಸ್ಪರ್ಧೆಯ ಪ್ರಥಮ ಬಂಗಾರದ ಬಹುಮಾನವನ್ನು ಕೆ.ಎಸ್ ರಾವ್ ರೋಡ್ ಎಸ್.ಎಲ್ ಶೇಟ್ ಮಾಲಕರಾದ ಪ್ರಶಾಂತ್ ಶೇಟ್ ಹಾಗೂ ಸಹೋದರರು, ದ್ವಿತೀಯ ಬಹುಮಾನ ಬಂಗಾರದ ಪದಕ ಬಹುಮಾನವನ್ನು ಜೋಸ್ ಆಲುಕಾಸ್ ಬಂಗಾರದ ಮಳಿಗೆ, ತೃತೀಯ ಬಹುಮಾನದ ಚಿನ್ನದ ಪದಕವನ್ನು ಲೇಡಿಹಿಲ್ ಎಸ್.ಎಲ್ ಶೇಟ್ ಬಂಗಾರದ ಮಳಿಗೆಯ ರವೀಂದ್ರ ಪೈ ಹಾಗೂ ಮಕ್ಕಳು, 25 ಬೆಳ್ಳಿಯ ಪದಕವನ್ನು ಕದ್ರಿ‌ ಸ್ವರ್ಣ ಜ್ಯುವೆಲ್ಲರಿ ನೀಡುತ್ತಿದ್ದಾರೆ.


ಮಕ್ಕಳಲ್ಲಿ ಮನೋಬಲ ಹೆಚ್ಚಿಸುವ ಪ್ರಯತ್ನ:

ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳಲ್ಲಿ ಮನೋಬಲ ಹೆಚ್ಚಿಸಿ, ಆತ್ಮಸ್ಥೈರ್ಯ ತುಂಬಲು ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರ 'ಎಕ್ಸಾಂ ವಾರಿಯರ್ಸ್‌' ಕೃತಿಯಲ್ಲಿ ನೀಡಿರುವವ ಸಲಹೆಗಳಂತೆ ನಾವೂ ಸಹ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿದ್ದೇವೆ. ಪರೀಕ್ಷೆಯ ಒತ್ತಡವನ್ನು ಕಡಿಮೆ ಮಾಡುವುದರ ಜತೆಗೆ ವಿನೂತನವಾದ ಯೋಚನೆಗಳನ್ನು ಮಕ್ಕಳಲ್ಲಿ ಮೂಡಿಸುವ ಸಲುವಾಗಿ ಸೃಜನಶೀಲವಾದ ಚಿತ್ರಗಳ ರಚನೆಗೆ ಪ್ರೋತ್ಸಾಹಿಸುತ್ತಿದ್ದೇವೆ. ಈ ಸರಣಿಯಲ್ಲಿ ಮೊದಲ ಕಾರ್ಯಕ್ರಮವನ್ನು ಇಂದು ಯಶಸ್ವಿಯಾಗಿ ಆಯೋಜಿಸಿದ್ದೇವೆ.

- ಡಿ. ವೇದವ್ಯಾಸ ಕಾಮತ್‌,  ಶಾಸಕರು, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top