ಡಾ.ಎಚ್.ಜಿ ಶ್ರೀಧರ್ ಸಾಹಿತ್ಯದ ಅನೇಕ ಮಜಲುಗಳಲ್ಲಿ ಕೈ ಆಡಿಸಿದವರು : ಐತಪ್ಪ ನಾಯ್ಕ್

Upayuktha
0


ಪುತ್ತೂರು :
ಡಾ.ಎಚ್.ಜಿ ಶ್ರೀಧರ್ ಅವರು ಎಲೆ ಮರೆಯ ಕಾಯಿಯಂತೆ ಉಳಿದವರು. ಯಾವತ್ತಿಗೂ ತಮ್ಮಇರುವನ್ನು ಪ್ರದರ್ಶಿಸದೇ ನಾಟಕ, ಕಾದಂಬರಿ, ಸಂಶೋಧನೆ, ಸಂಘಟನೆ  ಹೀಗೆ ಅನೇಕ ಕ್ಷೇತ್ರಗಳಲ್ಲಿ ಕೈ ಆಡಿಸಿ, ಸಮಾಜಕ್ಕೆ, ಸಾಹಿತ್ಯ ಕ್ಷೇತ್ರಕ್ಕೆ, ಶಿಕ್ಷಣ ಕ್ಷೇತ್ರಕ್ಕೆ, ಉತ್ತಮ ರೀತಿಯಲ್ಲಿ ಕೊಡುಗೆ ನೀಡಿದ ಇವರು ನಮಗೊಂದು ಹೆಮ್ಮೆ ಮತ್ತು ಇಂದಿನ ಯುವ ಸಾಹಿತಿಗಳಿಗೆ ಆದರ್ಶ ಎಂದು ಪುತ್ತೂರು ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಐತಪ್ಪ ನಾಯ್ಕ್ ಹೇಳಿದರು.


ಅವರು ಇಲ್ಲಿನ ಪುತ್ತೂರು ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾಲಯ (ಸ್ವಾಯತ್ತ)ದಲ್ಲಿಕನ್ನಡ ವಿಭಾಗ ಮತ್ತು ಐಕ್ಯೂಎಸಿ  ಘಟಕದ  ಸಹಯೋಗದಲ್ಲಿ ನಡೆದಡಾ.ಎಚ್ ಜಿ ಶ್ರೀಧರ ಇವರ ಬದುಕು- ಬರೆಹ ಕುರಿತ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ.ಶ್ರೀಪತಿ ಕಲ್ಲೂರಾಯ ಮಾತನಾಡಿ, ಸಾಹಿತ್ಯ ಎನ್ನುವುದು ಅನುಭವದಿಂದ ಬರುವಂತದ್ದು, ಬದುಕನ್ನುಅನುಭವಿಸದೇ ಇರುವ ಜೀವಕ್ಕೆ ಜ್ಞಾನದ ಕೊಡುಗೆಯನ್ನು ನೀಡಲು ಸಾಧ್ಯವಿಲ್ಲ. ಅನುಭವದಿಂದ ಪಾಠಗಳನ್ನು ಕಲಿತು ಇತರರಿಗೆ ತಿಳಿಸಿ ಕೊಟ್ಟಾಗ ಮಾತ್ರ ಸಾರ್ಥಕ್ಯಭಾವ ಮೂಡುತ್ತದೆ ಎಂದು ಹೇಳಿದರು.


ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ಹೆಚ್ ಜಿ ಮಾತನಾಡಿ ಓರ್ವ ಗುರು ಉಳಿಯುವುದು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮಾತ್ರ. ವಿದ್ಯಾರ್ಥಿಗಳ ಜೊತೆಗಿನ ಭಾವನಾ ಬೆಸುಗೆ ಅಗತ್ಯವಾದುದು. ಸಂಸ್ಥೆ ನನಗೆ ನೀಡಿರುವ ಪ್ರೀತಿ ಅಪಾರವಾದದ್ದು, ಇದಕ್ಕೆ ನಾನು ಸದಾ ಚಿರಋಣಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.


ಉದ್ಘಾಟಕರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕನ್ನಡ ಸಂಘದ ವತಿಯಿಂದ ನಡೆಸಲಾದರಸಪ್ರಶ್ನಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.


ಕಾರ್ಯಕ್ರಮದಲ್ಲಿ ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ.ಕೆ.ಎನ್ , ಐಕ್ಯೂಎಸಿ ಘಟಕದ ಸಂಯೋಜಕ ಪ್ರೋ.ಶಿವಪ್ರಸಾದ್.ಕೆ.ಎಸ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ದೀಪ, ಸೌಮ್ಯ ಆಶಯ ಗೀತೆಯನ್ನು ಹಾಡಿದರು .  ಕಾಲೇಜಿನ ಪ್ರಾಂಶುಪಾಲ ಪ್ರೋ. ವಿಷ್ಣುಗಣಪತಿ ಭಟ್ ಸ್ವಾಗತಿಸಿದರು.  ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮನಮೋಹನ್‍ ಎಂ  ವಂದಿಸಿ, ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಗೀತಾಕುಮಾರಿ ಟಿ  ಕಾರ್ಯಕ್ರಮವನ್ನು ನಿರ್ವಹಿಸಿದರು.


ಉದ್ಘಾಟನಾ ಕಾರ್ಯಕ್ರಮದ ನಂತರ ಸಾಹಿತಿ ಡಾ.ಎಚ್ ಜಿ ಶ್ರೀಧರ್ ಅವರ ಕೃತಿಗಳು ಹಾಗೂ ಅವರ ಜೀವನದ ಬಗೆಗೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಂದ ವಿವಿಧ ವಿಚಾರಗೋಷ್ಠಿಗಳು ನಡೆಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top