ಬೆಂಗಳೂರು ಸಹೋದರರಿಂದ ಧನುರ್ಮಾಸ ಸಂಗೀತ ಸೇವೆ

Upayuktha
0

ಬೆಂಗಳೂರು: ಬಳೇಪೇಟೆಯ ಓಟಿಸಿ ರಸ್ತೆಯಲ್ಲಿರುವ ಪುರಾತನ ದೇವಸ್ಥಾನವಾದ ಶ್ರೀ ಲಾಲ್ ದಾಸ್ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಲಾಲ್ ದಾಸ್ ಭಕ್ತ ಆಂಜನೇಯ ಸ್ವಾಮಿ ಭಜನಾ ಮಂಡಳಿಯವರು ನಡೆಸುತ್ತಿರುವ ಧನುರ್ಮಾಸ ಸಂಗೀತೋತ್ಸವದಲ್ಲಿ ಜನವರಿ 5ರಂದು ಬೆಳಗ್ಗೆ ಬೆಂಗಳೂರಿನ ಸಹೋದರರು ಎಂದೇ ಖ್ಯಾತರಾದ ವಿ. ಶ್ರೀ ಎಂ.ಬಿ. ಹರಿಹರನ್ ಮತ್ತು ವಿ. ಶ್ರೀ ಎಸ್. ಅಶೋಕ್ ಇವರು ಗಾಯನ ಸೇವೆ ಸಲ್ಲಿಸಿದರು.


ಇವರಿಗೆ ಪಕ್ಕವಾದ್ಯದಲ್ಲಿ: ಹಿರಿಯ ಕಲಾವಿದರಾದ ವಿ. ಶ್ರೀ ಎಂ.ಎಸ್. ಗೋವಿಂದಸ್ವಾಮಿ (ಪಿಟೀಲು), ವಿ. ಶ್ರೀ ಸುನೀಲ್ ಸುಬ್ರಹ್ಮಣ್ಯ (ಮೃದಂಗ), ವಿ. ಶ್ರೀ ಶ್ರೀನಿವಾಸ್ ಅನಂತರಾಮಯ್ಯ (ಮೋರ್ಚಿಂಗ್) ವಾದ್ಯಗಳಲ್ಲಿ ಸಾಥ್ ನೀಡಿದರು. ಈ ವಿಶೇಷ ಕಾರ್ಯಕ್ರಮದಲ್ಲಿ ಅನೇಕ ಭಕ್ತಾದಿಗಳು ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾದರು ಎಂದು ಮಂಡಳಿಯ ಮುಖ್ಯಸ್ಥರಾದ ಶ್ರೀ ಶ್ರೀನಿವಾಸ್ ಅನಂತರಾಮಯ್ಯ ಅವರು ತಿಳಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top