ಸಾಮಾಜಿಕ ಕಳಕಳಿಯಿಂದ ಸಂಘದ ಅಭಿವೃದ್ಧಿ: ಸರಿತಾ ಸಂತೋಷ್

Upayuktha
0

ಉಡುಪಿ : ಸಂಘ ಸಂಸ್ಥೆಯ ಅಭಿವೃದ್ಧಿಗೆ ಸಾಮಾಜಿಕ ಕಳಕಳಿಯಿಂದ ಕೂಡಿದ ಕಾರ್ಯಗಳು ಕಾರಣವಾಗುತ್ತದೆ ಎಂದು ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಆರೋಗ್ಯಇಲಾಖೆಯ ಪ್ಯಾನಲಿಸ್ಟ್ ಪವರ್ ಪ್ಲಾಟ್ಫಾರ್ಮ್ ಆಫ್ ವಿಮೆನ್ ಎಂಟ್ರಪ್ರೇನಿಯರ್ಸ್ ಸ್ಥಾಪಕ ಸದಸ್ಯರಾದ ಸರಿತಾ ಸಂತೋಷ್ ಹೇಳಿದರು.


ಉಪ್ಪೂರಿನ ಸ್ಪಂದನಾ ಭೌತಿಕ ಭಿನ್ನ ಸಾಮಥ್ಯ್  ಪುನರ್ವಸತಿ ಕೇಂದ್ರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಆರ್ಗನೈಸೇಷನ್ ಫಾರ್‍ರೂರಲ್ ಡೆವಲಪ್ಮೆಂಟ್ ಎಜ್ಯುಕೇಶನ್ ಆಂಡ್ ರಿಸರ್ಚ್‍ ಇದರ 2023ನೇ ವರ್ಷದ ಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.


ಸ್ಪಂದನಾ ಸಂಸ್ಥೆಯ ಸ್ಥಾಪಕ ಪ್ರಾಂಶುಪಾಲರಾದ ಜನರ್ಧನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರ್ತವ್ಯನಿಷ್ಠೆ ಇದ್ದರೆ ಇಟ್ಟ ಗುರಿಗಳನ್ನು ಕ್ಲಪ್ತ ಸಮಯದಲ್ಲಿ ಪರಿಣಾಮಕಾರಿಯಾಗಿ ಸಾಧಿಸಲು ಸಾಧ್ಯ. ದಿವ್ಯಾಂಗರ ಸೇವೆ ನಡೆಸಿದರೆ ಅವರ ಶುಭ ಹಾರೈಕೆ ಮತ್ತು ಆಶೀರ್ವಾದದಿಂದ ಜೀವನದಲ್ಲಿ ನೆಮ್ಮದಿ ಸಿಗುತ್ತದೆ ಎಂದರು. ಮುಖ್ಯ ಅತಿಥಿ ದೇವಕಿ ಶುಭ ಹಾರೈಸಿದರು.


ಆರ್ಗನೈಸೇಷನ್ ಫಾರ್‍ರೂರಲ್ ಡೆವಲಪ್ಮೆಂಟ್ ಎಜ್ಯುಕೇಶನ್ ಆಂಡ್ ರಿಸರ್ಚ್ ಸದಸ್ಯ ಗಣೇಶ್ ಪ್ರಸಾದ್ ಸಂಸ್ಥೆ ನಡೆಸಿದ ಚಟುವಟಿಕೆಗಳ ವರದಿ ವಾಚಿಸಿದರು. ಪಡಿಜಿಲ್ಲಾ ಸಂಯೋಜಕ ಮತ್ತು ಆರ್ಡರ್ ಸದಸ್ಯರಾದ ವಿವೇಕ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪಲ್ಲವಿ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top