ಮಂಗಳೂರು: ಈಗಾಗಲೆ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, ಹತ್ತು-ಹಲವು ವೈವಿಧ್ಯಮಯ ಚಟುವಟಿಕೆಗಳಿಂದ ನಾಡಿನ ಜನತೆಯ ಗಮನಸೆಳೆದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಮಿತಿಗೆ ಇನ್ನಷ್ಟು ಬಲ ತುಂಬಲು ಹೊಸ ಸದಸ್ಯರುಗಳ ಸೇರ್ಪಡೆಗೊಳಿಸಲಾಗಿದೆ.
ಈ ನಿಟ್ಟಿನಲ್ಲಿ ಮುಲ್ಕಿ ಕನ್ನಡ ಸಾಹಿತ್ಯ ಪರಿಷತ್ತಿನ ಆಧ್ಯಕ್ಷರಾಗಿ ಮಿಥುನ್ ಉಡುಪರವರನ್ನು ನೇಮಕ ಮಾಡಲಾಗಿದೆ.
ಜೊತೆಗೆ ಹೆಚ್ಚುವರಿಯಾಗಿ ತುಂಬಬಹುದಾದಂತಹ ಸಂಘಟನಾ ಕಾರ್ಯದರ್ಶಿಯಾಗಿ ಚಂದ್ರಹಾಸ ಶೆಟ್ಟಿ ಮಂಗಳೂರು, ಜಗದೀಶ್ ಕೆ. ಬಂಟ್ವಾಳ, ಸಹ ಕಾರ್ಯದರ್ಶಿಯಾಗಿ ಖಾಲಿದ್ ಯು. ಎಚ್. ಮಂಗಳೂರು ಮತ್ತು ಸದಸ್ಯರಾಗಿ ಸನತ್ ಕುಮಾರ್ ಜೈನ್ ಮಂಗಳೂರು ಇವರನ್ನು ನೇಮಕಾತಿಗೊಳಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ