ಉಜಿರೆ: ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರತಿಯೊಬ್ಬರಲ್ಲೂ ಸಾಮರ್ಥ್ಯವಿರುತ್ತದೆ. ಆ ಸಾಮರ್ಥ್ಯ ವಿದ್ಯಾರ್ಥಿಗಳಲ್ಲಿ ಅಡಗಿರುತ್ತದೆ. ಅದನ್ನು ನಾವು ಪ್ರತಿಭೆಯ ಮೂಲಕ ತೋರ್ಪಡಿಸುವ ಕೆಲಸ ಮಾಡಬೇಕೆಂದು ಎಸ್‌ಡಿಎಂ ಸಂಸ್ಥೆಯ ಪ್ರಾಂಶುಪಾಲ ಡಾ. ಎ. ಜಯಕುಮಾರ ಶೆಟ್ಟಿ ಮಾತನಾಡಿದರು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರದಲ್ಲಿ ಜರುಗಿದ 'ಟ್ರಿವಿಯಾ' 2023 ಬಿ.ವೊಕ್ ನ ರಿಟೈಲ್ ಮತ್ತು ಸಪ್ಲೈ ಚೈನ್ ಮ್ಯಾನೇಜ್ಮೆಂಟ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ಪರ್ಧೆ ಎಂಬುದು ಭೂಮಿ ಮೇಲಿನ ಪ್ರತಿ ಜೀವಿಯಲ್ಲೂ ಕಂಡುಬರುವ ಸ್ವಾಭಾವಿಕ ಗುಣ. ಆದರೆ ಅದೇ ಸ್ಪರ್ಧೆ ಮನುಷ್ಯನಲ್ಲಿ ಆತ್ಮ ವಿಶ್ವಾಸದ ಕಾರಣ ಹುಟ್ಟಿಕೊಳ್ಳುತ್ತದೆ. ಎಲ್ಲರಲ್ಲೂ ಸಾಮಥ್ರ್ಯವಿರುತ್ತದೆ. ಅದು ಒಂದು ಹಂತಕ್ಕೆ ಹೋದಾಗ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಸ್ಥಳ ಯಾವುದಿರಲಿ ಹಿಂಜರಿಯದೇ ಮುನ್ನುಗ್ಗುತ್ತಿರಬೇಕೆಂದು ಸ್ಪರ್ಧೆಯಲ್ಲಿ ಭಾಗವಹಿಸಿದ ಯು ಜಿ ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಕಿವಿ ಮಾತು ನೀಡಿದರು.
ಕ್ಲಾಸ್ ರೂಮ್ ನಲ್ಲಿ ದಿನವಿಡಿ ಇರುವುದು ಸ್ವಾಭಾವಿಕ. ಆದರೆ ಕಲಿಕೆಯ ಜೊತೆಗೆ ಮನರಂಜನೆಯೂ ಬೇಕಾಗುತ್ತದೆ. ಅಂತಹ ಪ್ರಯತ್ನಕ್ಕೆ ಬಿ.ವೊಕ್ ವಿಭಾಗ ಸಾಕ್ಷಿಯಾಗಿದೆ ಎಂದರು.
ಈ ವೇಳೆ ಬಿ ವೊಕ್ ವಿಭಾಗದ ಸಂಯೋಜಕ ಸುವಿರ್ ಜೈನ್ ಮಾತನಾಡಿ, ಇಂತಹ ವೇದಿಕೆಯ ಮೂಲಕ ಈ ಹಂತದಲ್ಲಿ ಪ್ರತಿಭೆಗಳ ಸೃಜನಶೀಲತೆ ಕಂಡುಬರುತ್ತದೆ. ಅವರು ಅವಕಾಶಗಳನ್ನು ಕೊಟ್ಟಾಗ ನಾವು ಹೇಗೆ ಸದುಪಯೋಗ ಪಡಿಸಿಕೊಳ್ಳುತ್ತೇವೆ ಎಂಬುದು ಮುಖ್ಯವಾಗುತ್ತದೆ. ನಮ್ಮ ಕೌಶಲ್ಯವನ್ನು ಇಲ್ಲಿ ಸಾದರಪಡಿಸಿಕೊಳ್ಳಿ ಎಂದು ಹೇಳಿದರು.
ವೇದಿಕೆಯಲ್ಲಿ ಅಶ್ವಿತ್ ಎಚ್.ಆರ್, ಶಶಾಂಕ್ ಬಿ.ಎಸ್, ಹಾಗೂ ವಿದ್ಯಾರ್ಥಿ ಸಂಯೋಜಕರಾದ ಸ್ಪರ್ಶ, ಶೋಬಿಕ ಕಾರ್ಯಕ್ರಮದಲ್ಲಿ ಉಸ್ಥಿತರಿದ್ದರು. ಮನೋಜ್, ದೀಕ್ಷಾ ನಿರೂಪಣೆ ಮಾಡಿದರು. ಶಶಾಂಕ್ ಬಿ.ಎಸ್ ವಂದಿಸಿದರು.
ವರದಿ: ರಂಜಿತ್ ಕುಮಾರ್ ಕೆ ಎಸ್
ದ್ವಿತೀಯ ವರ್ಷ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ., ಎಸ್‌ಡಿಎಂ ಉಜಿರೆ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ