ಬೆಂಗಳೂರು: ಶಿಕ್ಷಣ ಕ್ಷೇತ್ರದಲ್ಲಿ 23 ವರ್ಷಗಳ ಸಮೃದ್ಧ ಇತಿಹಾಸವುಳ್ಳ ಯುನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ಸ್ ಜನವರಿ 28 ಮತ್ತು 29ರಂದು ಯುನಿವರ್ಸಲ್ ಪ್ರೀಮಿಯರ್ ಲೀಗ್ - 30 ಯಾರ್ಡ್ ಟೆನ್ನಿಸ್ ಬಾಲ್ ಟೂರ್ನಮೆಂಟ್ ಅನ್ನು ಆಯೋಜಿಸಿದೆ. ಇದು ಆರು ಓವರ್‌ಗಳ ಕ್ರಿಕೆಟ್ ಪಂದ್ಯಾಟ ಆಗಿರುತ್ತದೆ.
ಪಂದ್ಯ ಗೆದ್ದವರಿಗೆ 25,000 ರೂ. ಬಹುಮಾನ ಮತ್ತು ಟ್ರೋಫಿ ನೀಡಲಾಗುತ್ತದೆ. ರನ್ನರ್ ಅಪ್ ಗಳಿಗೆ 15,000 ರೂ ನಗದು ಮತ್ತು ಟ್ರೋಫಿ ಬಹುಮಾನ ನೀಡಲಾಗುತ್ತದೆ. ಅಲ್ಲದೆ ಟೂರ್ನಮೆಂಟ್‌ನ ಅತ್ಯುತ್ತಮ ಆಟಗಾರ, ಅತ್ಯುತ್ತಮ ಬ್ಯಾಟ್ಸ್‌ಮನ್, ಅತ್ಯುತ್ತಮ ಬೌಲರ್ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಅಟಗಾರರ ತಂಡಕ್ಕೆ ಪ್ರವೇಶ ಶುಲ್ಕ 2,500 ರೂ ನಿಗದಿಪಡಿಸಲಾಗಿದೆ.
ಅಂಪೈರ್ ತೀರ್ಮಾನವೇ ಅಂತಿಮವಾಗಿರುತ್ತದೆ. 2+2+1+1 ರಂತೆ 4 ಬೌಲರ್‌ಗಳಿಗೆ ಬೌಲಿಂಗ್ ಕಡ್ಡಾಯವಾಗಿರುತ್ತದೆ. ತಂಡವನ್ನು ಅಂತಿಮಗೊಳಿಸುವ ಹಂತದಲ್ಲಿ ನಿಯಮಾವಳಿಗಳಲ್ಲಿ ಬದಲಾವಣೆ ಮಾಡಿಕೊಳ್ಳುವ ಹಕ್ಕನ್ನು ಸಂಘಟಕರು ಕಾಯ್ದಿರಿಸಿಕೊಂಡಿದ್ದಾರೆ.
ನಿಯಮಗಳು ಮತ್ತು ಷರತ್ತುಗಳು ಇಂತಿವೆ:
ಪ್ರವೇಶ ಶುಲ್ಕ ಪಾವತಿಸಿದ ನಂತರ ಯಾವುದೇ ಕಾರಣಕ್ಕೂ ಮರುಪಾವತಿ ಇರುವುದಿಲ್ಲ.
ನಾಕೌಟ್ ಆಧಾರದಲ್ಲಿ ಮ್ಯಾಚ್‌ಗಳು ನಡೆಯುತ್ತವೆ. ಒಬ್ಬ ಆಟಗಾರ ಒಂದು ತಂಡವನ್ನು ಮಾತ್ರ ಪ್ರತಿನಿಧಿಸಬಹುದು.
ತಂಡಗಳು ಪ್ರವೇಶ ಶುಲ್ಕ ಮತ್ತು ಆಟಗಾರರ ಪಟ್ಟಿಯೊಂದಿಗೆ ನೋಂದಾಯಿಸಿಕೊಳ್ಳಬೇಕು.
ಇ-ಮೇಲ್ ಅಥವಾ ವಾಟ್ಸಪ್ ಮೂಲಕ ನೋಂದಾಯಿಸಿಕೊಳ್ಳಲು ಕೊನೆಯ ದಿನ ಹಾಗೂ ಸಮಯ: ಜನವರಿ 14. ಸಂಜೆ 5 ಗಂಟೆ.
ತಂಡವು 9+2 ಆಟಗಾರರ (ಎಕ್ಸ್ಟಾ ಪ್ಲೇಯರ್ಸ್) ಹೊಂದಿರಬೇಕು. ಎಲ್‌ಬಿ, ಲೆಗ್ ಬೈಸ್, ಓವರ್ ತ್ರೋಗಳನ್ನು ಪರಿಗಣಿಸಲಾಗುವುದಿಲ್ಲ.
ಸಿಕ್ಸ್‌ಗಳ ಪರಿಗಣನೆ ಇರುವುದಿಲ್ಲ. ಒಂದು ವೇಳೆ ಅಟಗಾರ ಬೌಂಡರಿಯಿಂದ ಹೊರಗೆ ಚೆಂಡನ್ನು ಅಟ್ಟಿದಲ್ಲಿ 1 ರನ್ ಮಾತ್ರ ನೀಡಲಾಗುತ್ತದೆ ಹಾಗೂ ಆಟಗಾರನನ್ನು ನಾಟ್‌ಔಟ್ ಎಂದು ಪರಿಗಣಿಸಲಾಗುತ್ತದೆ.
ಯಾವುದೇ ಅಶಿಸ್ತು ತಂಡದ ಅನರ್ಹತೆಗೆ ಕಾರಣವಾಗಬಹುದು. ಅಂತಹ ಸಂದರ್ಭದಲ್ಲಿ ಪ್ರವೇಶ ಶುಲ್ಕ ಹಿಂತಿರುಗಿಸಲಾಗುವುದಿಲ್ಲ.
ಪಂದ್ಯಾಟ ಎಲ್ಲರಿಗೂ ಮುಕ್ತವಾಗಿದ್ದು, ವಯೋಮಿತಿಯ ನಿರ್ಬಂಧ ಇರುವುದಿಲ್ಲ.
ನೋಂದಾಯಿಸಿಕೊಳ್ಳಲು ವಾಟ್ಸಪ್ ಸಂಖ್ಯೆಗಳು: 9108629844 / 9591965859 / 9845896655
ಇಮೇಲ್: admin@universalinstitutions.com
ಸ್ಥಳ: ಯುನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ಸ್ ಕ್ಯಾಂಪಸ್
ಕೋಲೂರು, ಲಕ್ಕಯನಪಾಳ್ಯ, ತಾವರಕೆರೆ ಹೋಬಳಿ, ರಾಮೋಹಳ್ಳಿ ಅಂಚೆ, ಬೆಂಗಳೂರು- 560074
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: 9845896655, 9591965859, 9945940112
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ