ಬೆಂಗಳೂರು: ಅಂಚೆ ಇಲಾಖೆಯು ಹೆರಿಟೇಜ್ ಬೇಕು ಸಹಯೋಗದೊಂದಿಗೆ 2023 ರ ಜನವರಿ 16ರಂದು ಪೋಸ್ಟಲ್ ಹೆರಿಟೇಜ್ ವಾಕ್/ ಅಂಚೆ ಪರಂಪರೆ ಜಾಡು ನಡಿಗೆಯನ್ನು ಆಯೋಜಿಸುತ್ತಿದೆ. ಹೆರಿಟೇಜ್ ನಡಿಗೆಯು 15:00 ಗಂಟೆಗೆ O/o ಮೇಲ್ ಮೋಟಾರ್ ಸರ್ವಿಸ್, ಮಿಲ್ಲರ್ಸ್ ರಸ್ತೆಯಿಂದ ಹೊರಟು ಬ್ರಿಟಿಷರ ಅವಧಿಯಲ್ಲಿ ಸ್ಥಾಪಿಸಲಾದ ದೇಶದ ಅತ್ಯಂತ ಹಳೆಯ ಅಂಚೆ ಪೆಟ್ಟಿಗೆಯಿರುವ ತಾಜ್ ವೆಸ್ಟ್ ಎಂಡ್ ಹೋಟೆಲ್‌ಗೆ ಮುಂದುವರಿಯುತ್ತದೆ. ಅಂಚೆ ಪೆಟ್ಟಿಗೆಗೆ ಭೇಟಿ ನೀಡಿದ ನಂತರ, ಅರಮನೆ ರಸ್ತೆಯಲ್ಲಿಯ ಪ್ರಸ್ತುತ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ರವರ ಕಚೇರಿಯಿರುವ 'Beaulieu' ಕಟ್ಟಡಕ್ಕೆ ವಾಕ್ ಮುಂದುವರಿಯುತ್ತದೆ.
ಅಲ್ಲಿಂದ, ಹೆರಿಟೇಜ್ ವಾಕಥಾನ್ ಬೆಂಗಳೂರು ಮೆಟ್ರೋಪಾಲಿಟನ್ ನಗರದ ಮಧ್ಯಭಾಗದಲ್ಲಿರುವ ವಿಧಾನಸೌಧದ ಎದುರು ಇರುವ ಭವ್ಯವಾದ ಅಂಚೆ ಕಚೇರಿಗಳಲ್ಲಿ ಒಂದಾದ ಬೆಂಗಳೂರು ಜನರಲ್ ಪೋಸ್ಟ್ ಆಫೀಸ್ (ಜಿಪಿಒ) ಗೆ 1985 ರಿಂದ ಪ್ರಸ್ತುತ ರೂಪದಲ್ಲಿ ಅಸ್ತಿತ್ವದಲ್ಲಿರುವ ರೋಸ್ ಗಾರ್ಡನ್ ಮೂಲಕ ಮುಂದುವರಿಯುತ್ತದೆ.
ಜನರಲ್ ಪೋಸ್ಟ್ ಆಫೀಸ್ನಿಂದ ಕಬ್ಬನ್ ಪಾರ್ಕ್ ಮೂಲಕ ಸೇಂಟ್ ಮಾರ್ಕ್ಸ್ ಕ್ಯಾಥೆಡ್ರಲ್ ಚರ್ಚ್ನ ಪಕ್ಕದಲ್ಲಿ ಹಾದು ಅಂತಿಮವಾಗಿ 1865 ರಲ್ಲಿ ಡಾ. ಎಡ್ವರ್ಡ್ ಬಾಲ್ಫೋರ್ ಸ್ಥಾಪಿಸಿದ 150 ವರ್ಷಗಳಷ್ಟು ಹಳೆಯದಾದ ಸರ್ಕಾರಿ ವಸ್ತುಸಂಗ್ರಹಾಲಯ ದ ಐತಿಹಾಸಿಕ ಕಟ್ಟಡದಲ್ಲಿರುವ “ಸಂದೇಶ ಮ್ಯೂಸಿಯಂ ಆಫ್ ಕಮ್ಯುನಿಕೇಶನ್” ನಲ್ಲಿ ಕೊನೆಗೊಳ್ಳುತ್ತದೆ.
ಹೆರಿಟೇಜ್ ವಾಕಥಾನ್ ಮುಕ್ತಾಯದ ನಂತರ, ಮ್ಯೂಸಿಯಂ ರೋಡ್ ಪೋಸ್ಟ್ ಆಫೀಸ್‌ನಲ್ಲಿ "ಸಂಜೆ ಅಂಚೆ ಕಚೇರಿ" ಉದ್ಘಾಟನೆ ನಡೆಯಲಿದೆ. ಸಾರ್ವಜನಿಕರಿಗೆ ನೋಂದಾಯಿತ ಮತ್ತು ಸ್ಪೀಡ್ ಪೋಸ್ಟ್ ಸೇವೆಗಳನ್ನು ಪಡೆಯಲು ಮತ್ತು ಅಂಚೆ ಚೀಟಿಗಳ ಪೂರಕ ಸೇವೆಗಳ ಮಾರಾಟ ಅಂದರೆ ನನ್ನ ಸ್ಟಾಂಪ್, ಪುಸ್ತಕಗಳು, ಚಿತ್ರ ಪೋಸ್ಟ್ ಕಾರ್ಡ್‌ಗಳು ಇತ್ಯಾದಿಗಳ ಮಾರಾಟ ಸಮಯವನ್ನು ವಿಸ್ತರಿಸುತ್ತದೆ. ಈ ಸಂದರ್ಭದಲ್ಲಿ ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್ ರಾಜೇಂದ್ರ ಕುಮಾರ್ ಅವರಿಂದ ವರ್ಧಿತ ರಿಯಾಲಿಟಿ (Augmented Reality) ಪೋಸ್ಟ್ ಕಾರ್ಡ್‌ಗಳ ಬಿಡುಗಡೆ ಮತ್ತು ಅಂಚೆ ನಿರ್ದೇಶನಾಲಯದ ನಿವೃತ್ತ ಸದಸ್ಯ ಡಾ. ಚಾರ್ಲ್ಸ್ ಲೋಬೋ ರವರು ರಚಿಸಿರುವ ಕೊಡಗು (ಅಂಚೆ ಕಚೇರಿ ಮತ್ತು ವಿಪತ್ತು ಅಪಾಯ ನಿರ್ವಹಣೆ) ಕುರಿತು ಇ-ಪುಸ್ತಕದ ಬಿಡುಗಡೆ ಸಹ ನಡೆಯಲಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ