ಗಿರಿನಗರ ಸಂಗೀತ ಸಭಾ: ಕಲಾಂಬಿಕ ಸಹೋದರಿಯರಿಂದ ಆಕರ್ಷಣೀಯ ಗಾಯನ

Upayuktha
0


ಬೆಂಗಳೂರು: ಗಿರಿನಗರ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಗಿರಿನಗರದ ಶ್ರೀ ವಿಮಲಶ್ರೀ ಪ್ರವಚನ ಮಂದಿರದಲ್ಲಿ ಜನವರಿ 7 ರಂದು ಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಕಲಾಂಬಿಕ ಸಹೋದರಿಯರಾದ ವಿ|| ಕಲಾಧರಿ ಭವಾನಿ ಮತ್ತು ವಿ|| ಅಂಬಿಕಾ ದತ್ ಅವರು ಕಛೇರಿ ನೀಡಿದರು.


"ಏರಾನಾಪೈ" ಎಂಬ ಕೃತಿಯೊಂದಿಗೆ ತಮ್ಮ ಗಾಯನ ಕಾರ್ಯಕ್ರಮವನ್ನು  ಪ್ರಾರಂಭಿಸಿ, ಮುತ್ತುಸ್ವಾಮಿ ದೀಕ್ಷಿತರ "ವಲ್ಲಭ ನಾಯಕಸ್ಯ", "ಶ್ರೀ ವೆಂಕಟ ಗಿರೀಶ", ಶ್ರೀ ತ್ಯಾಗರಾಜರ "ತೊಲಿ ಜನ್ಮ ಮುನಜೇಯು", "ಏತಾ ಉನ್ನಾರ", ಶ್ರೀ ಉಡುಪ ಶಾಸ್ತ್ರಿಗಳ "ನಾನರಿಯೆನಮ್ಮ", ತಿರುನಾಳ್ ಮಹಾರಾಜ ರ "ಶಂಕರ ಗಿರಿನಾಥರ ಪ್ರಭು",  ಶ್ರೀ ಪುರಂದರದಾಸರ "ನಾರಾಯಣ ನಿನ್ನ ನಾಮದ ಸ್ಮರಣೆ", "ರಾಮ ಮಂತ್ರವ ಜಪಿಸೋ" ಕೃತಿಗಳನ್ನು ಸುಶ್ರಾವ್ಯವಾಗಿ ಹಾಡಿದರು. "ಭಾಗ್ಯದ ಲಕ್ಷ್ಮಿ ಬಾರಮ್ಮ" ಎಂಬ ಹಾಡಿನೊಂದಿಗೆ ಅಂದಿನ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು. 


ವಾದ್ಯ ಸಹಕಾರದಲ್ಲಿ, ವಿ|| ಎಸ್.ಹ ಯಶಸ್ವಿ (ಪಿಟೀಲು), ವಿ|| ಡಾ|| ಸಿ. ಎ. ಗುರುದತ್ (ಮೃದಂಗ), ವಿ|| ಶ್ರೀಧರ್ ಶಿವಶಂಕರ್ (ಖಂಜೀರ) ಸಹಕಾರ ನೀಡಿದರು. ಸಂಗೀತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ



web counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top