ಉಡುಪಿ: ಅರೆಹೊಳೆ ರಂಗ ಸಂಭ್ರಮ ಇಂದು ಸಂಜೆ 4:30ಕ್ಕೆ ಉದ್ಘಾಟನೆಗೊಳ್ಳಲಿದೆ. ಇದೇ ಸಂದರ್ಭದಲ್ಲಿ ನಂದಗೋಕುಲ ರಂಗ ಶಾಲೆ, ಮ್ಯಾಗ್ಸೆಸೆ ಪುರಸ್ಕೃತ ಸೌರ ವಿಜ್ಞಾನಿ ಡಾ. ಹಂದಟ್ಟು ಹರೀಶ್ ಹಂದೆ ರಂಗ ಮಂದಿರದ ಜನಾರ್ಪಣೆ, ಶಾಂತಾ ರತ್ನಾಕರ್ ವನವೇದಿಕೆ ಉದ್ಘಾಟನೆಗಳು ನಡೆಯಲಿವೆ.
ಬೈಂದೂರು ತಾಲೂಕಿನ ಅರೆಹೊಳೆ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಎದುರು ಈ ಕಾರ್ಯಕ್ರಮವನ್ನು ಅರೆಹೊಳೆ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗಿದೆ.
ಸಂಜೆ 5 ಗಂಟೆಗೆ ನಂದಗೋಕುಲ ಕಲಾವಿದೆ ಬಂಟ್ವಾಳದ ಆಕರ್ಷಣಾ ಕಾರ್ತಿಕ್ ಅವರಿಂದ ಕೋಳೂರು ಕೊಡಗೂಸು- ಹರಿಕಥೆ, ಸಂಜೆ 5:30ಕ್ಕೆ ಸಾತ್ವಿಕ ರಂಗಪಯಣ ಬೆಂಗಳೂರು ಇವರಿಂದ ರಂಗ ಗೀತೆಗಳು, 7 ಗಂಟೆಗೆ ನಂದಗೋಕುಲ ಕಲಾವಿದೆ ಶ್ವೇ ತಾ ಅರೆಹೊಳೆ ಅವರಿಂದ 'ಗೆಲ್ಲಿಸಬೇಕು ಅವಳ' ಏಕವ್ಯಕ್ತಿ ನಾಟಕ ಪ್ರದರ್ಶನವಿದೆ.
ರಂಗ ಸಂಭ್ರಮದ ಉದ್ಘಾಟಕರಾಗಿ ಹಿರಿಯ ರಂಗ ಕಲಾವಿದರಾದ ಗಣೇಶ್ ಕಾರಂತ್ ಪಾಲ್ಗೊಳ್ಳಲಿದ್ದಾರೆ. ಬೈಂದೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ರಘು ನಾಯ್ಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅರೆಹೊಳೆಯ ಪುರೋಹಿತರಾದ ವೆಂಕಟೇಶ ಶಾಸ್ತ್ರಿ, ಬೆಂಗಳೂರಿನ ರಂಗ ಕಲಾವಿದೆ ಶ್ರೀಮತಿ ನಯನಾ ಸೂಡ ಪಾಲ್ಗೊಳ್ಳಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ