ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ 74ನೇ ಗಣರಾಜ್ಯೋತ್ಸವ ಸಂಭ್ರಮ
ಬೆಂಗಳೂರು: ‘1947ರಲ್ಲಿ ನಾವು ಪರಕೀಯ ಆಳ್ವಿಕೆಯಿಂದ ಬಿಡುಗಡೆ ಆಗಿದ್ದೆವು, ಅಷ್ಟೆ. ಆದರೆ ನಾವು ಪರಿಪೂರ್ಣ ಸ್ವತಂತ್ರರಾದುದು ನಮ್ಮ ಸಂವಿಧಾನವನ್ನು ಅಳವಡಿಸಿಕೊಂಡು ಭಾರತದ ಗಣರಾಜ್ಯ ಸ್ಥಾಪಿತವಾದ ನಂತರ ಮಾತ್ರ. ಸಂವಿಧಾನ ನಮಗೆ ದೃಢವಾದ ಮಾರ್ಗ ತೊರಿಸಿತು. ಇಂದು ನಾವು ಇಡೀ ಜಗತ್ತಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಂತ ಪ್ರತಿಭಾನ್ವಿತರು ಅನ್ನಿಸಿಕೊಂಡಿರುವುದಕ್ಕೆ ನಮ್ಮ ಸಂವಿಧಾನ ನೀಡಿದ ಸಮಾನತೆಯನ್ನು ಉಸಿರಾಡುವ ಅಧಿನಿಯಮಗಳಿಂದ ಎಂಬುದು ನನ್ನ ದೃಢ ನಂಬಿಕೆ. ಮಾಹಿತಿ ತಂತ್ರಜ್ಞಾನವನ್ನು ನಮ್ಮ ಬುದ್ದಿವಂತ ಮಕ್ಕಳು ಸವಾಲಾಗಿ ಸ್ವೀಕರಿಸಿದರು, ಇದರಿಂದ 40 ಮಿಲಿಯನ್ ಕುಟುಂಬಗಳು ಬಡತನದ ಕನಿಷ್ಠ ರೇಖೆಯನ್ನು ದಾಟಿದವು ಹಾಗೂ ಹೊಸ ಮಧ್ಯಮ ವರ್ಗ ಸೃಷ್ಟಿಯಾಯಿತು. ಕಳೆದ ಒಂದು ವರ್ಷದಲ್ಲಿ ಡಿಜಿಟಲ್ ವಹಿವಾಟಿನಲ್ಲಿ ಭಾರತ ವಿಶ್ವಕ್ಕೇ ಗುರುವಾಗಿದೆ; 1500 ಬಿಲಿಯನ್ ವಹಿವಾಟು ನಡೆದಿದೆ. ಇದು ವಿಶ್ವದಾಖಲೆ. ನಾವು ಮತ್ತಷ್ಟು ಕಾರ್ಯ ತತ್ಪರರಾದರೆ ದೇಶ ಮುಂಬರುವ ದಶಕದಲ್ಲಿ ವಿಶ್ವದಲ್ಲಿಯೇ ಪ್ರಬಲ ರಾಷ್ಟ್ರವಾಗುತ್ತದೆ’, ಎಂದು ವಿಪ್ರೋ ಕಂಪನಿಯ ಕೌಶಲ್ಯ ಪರಿವರ್ತನ ವಿಭಾಗದ ಮುಖ್ಯಸ್ಥ ಹಾಗೂ ಪ್ರಸಿದ್ಧ ಲೇಖಕರಾದ ಪಿ.ಬಿ. ಕೊಟೂರ್ ಅಭಿಪ್ರಾಯ ಪಟ್ಟರು.
ಅವರು ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೊಜಿಸಿದ್ದ 74ನೇ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ ಮಾತನಾಡಿ, ‘ನಾವು ದೇಶದ ಸಮಗ್ರ ಅಭಿವುದ್ಧಿಗೆ ಸದಾ ಬದ್ದರಗಿರಬೇಕು, ಸರ್ವ ಕ್ಷೇತ್ರಗಳಲ್ಲೂ ನಮ್ಮ ಪಾತ್ರವಿದೆ ಎಂದು ಕಾರ್ಯ ತತ್ಪರರಾಗಬೇಕು’ ಎಂದರು.
ಸಂಸ್ಥೆಯ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್ ಮಾತನಾಡಿ, ‘ನಾವು ಭಾರತದಂತಹ ಉಜ್ವಲ ರಾಷ್ಟ್ರದ ಪ್ರಜೆಗಳಾಗಿರುವುದು ನಿಜಕ್ಕೂ ಸೌಭಾಗ್ಯ’ ಎಂದು ನುಡಿದರು.
ಸಂಸ್ಥೆಯ ಎನ್.ಸಿ.ಸಿ. ಮುಖಸ್ಥ ಡಾ. ರಾಜೇಶ್ ನಂದಳಿಕೆ ಪ್ರಾರಂಭದಲ್ಲಿ ಸರ್ವರನ್ನೂ ಸ್ವಾಗತಿಸಿದರು. ನಂತರ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ