ವಿಕಲಚೇತನರ ರಿಯಾಯತಿ ಬಸ್ ಪಾಸ್‍ ನವೀಕರಣಕ್ಕೆ ಅರ್ಜಿ ಆಹ್ವಾನ

Upayuktha
0

ಮಂಗಳೂರು: ನವೀಕರಣಗೊಳ್ಳಬೇಕಿರುವ ವಿಕಲಚೇತನರ ರಿಯಾಯತಿ ಬಸ್ ಪಾಸ್‍ಗಾಗಿ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.


2023ರ ಜ.1ರಿಂದ ಡಿ.31ರ ವರೆಗೆ ಮಾನ್ಯತೆ ಇರುವಂತೆ ವಿಕಲಚೇತನರಿಗೆ ಬಸ್‍ಪಾಸ್ ವಿತರಿಸಲಾಗುತ್ತದೆ. ಆನ್‍ಲೈನಲ್ಲಿ ವಿವರ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಜೆ.ಪಿ.ಜೆ ಅಥವಾ ಪಿ.ಡಿ.ಎಫ್ ನಮೂನೆಯಲ್ಲಿ ಆನ್‍ಲೈನಲ್ಲಿ ಅಡಕಗೊಳಿಸಬೇಕು. ಬಸ್ ಪಾಸ್ ನವೀಕರಿಸುವವರು ಕ.ರಾ.ರ.ಸಾ ನಿಗಮದ ಬಸ್ ನಿಲ್ದಾಣದ ಪಾಸ್ ಕೌಂಟರ್‍ಗಳಲ್ಲಿ ಹಾಗೂ ಹೊಸದಾಗಿ ಪಾಸ್ ಪಡೆಯುವವರು ವಿಭಾಗೀಯ ಕಚೇರಿಯಲ್ಲಿ ಹಣ ಪಾವತಿಸಲು ಅವಕಾಶವಿರುತ್ತದೆ.


ಹೆಚ್ಚಿನ ಮಾಹಿತಿಯನ್ನು ಸಮೀಪದ ಕೆ.ಎಸ್‍.ಆರ್.ಟಿ.ಸಿ ಘಟಕಗಳಿಂದ ಪಡೆಯುವಂತೆ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top