ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಪ್ರಶಾಂತ ನಗರದಲ್ಲಿರುವ ಶ್ರೀ ಪ್ರಶಾಂತ ಗಣಪತಿ ದೇವಸ್ಥಾನದಲ್ಲಿ ಜನವರಿ 20ರಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಜನಾ ಮಂಡಳಿಯ ಸದಸ್ಯರಿಂದ ಕುಂಕುಮ ಪೂಜೆ ಜರುಗಿ,
ನಂತರ ಕು|| ಅನನ್ಯಾ ಬೆಳವಾಡಿ ಅವರು "ಹರಿನಾಮ ಸಂಕೀರ್ತನೆ" ಗಾಯನ ಕಾರ್ಯಕ್ರಮದಲ್ಲಿ, ಮೊದಲಿಗೆ "ಗಜವದನ ಬೇಡುವೆ" ಎಂಬ ಪುರಂದರದಾಸರ ಕೃತಿಯೊಂದಿಗೆ ಕಾರ್ಯಕ್ರಮ ಆರಂಭಿಸಿ, ನಂತರ ಇಂದು ಪುರಂದರದಾಸರ ಆರಾಧನೆಯ ವಿಶೇಷ ದಿನವೂ ಆಗಿದ್ದುದರಿಂದ ಅವರ ಸ್ಮರಣೆಗಾಗಿ ವಿಜಯದಾಸರ ರಚನೆಯಾದ "ಗುರು ಪುರಂದರದಾಸರೇ" ಎಂಬ ಕೃತಿಯನ್ನು ಹಾಡಿ,
ನಂತರ ನರಸಿಂಹದಾಸರ "ಬಾರೋ ಬಾರೋ ಪಾಂಡುರಂಗ", ಮಂತ್ರಾಲಯ ಪ್ರಭುಗಳನ್ನು ಕುರಿತು ವೆಂಕಟದಾಸರು ರಚಿಸಿದ "ವೃಂದಾವನ ನೋಡಿರೋ", ಪುರಂದರದಾಸರ "ನಂದತನಯ ಗೋವಿಂದ", "ತಾರಕ್ಕ ಬಿಂದಿಗೆ", "ನಾನೇನ ಮಾಡಿದೆನೋ", "ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು", "ಹಾಲುಕ್ಕಿತೋ ರಂಗ ಹಾದಿಯ ಬಿಡೋ", , ವಾದಿರಾಜರ "ಎದ್ದುನಿಂತ ಹನುಮಂತ ಎದ್ದುನಿಂತ" ಅನ್ನಮಾಚಾರ್ಯರ "ಬ್ರಹ್ಮಮೊಕ್ಕಟೇ ಪರಬ್ರಹ್ಮಮೊಕ್ಕಟೇ" ಕೃತಿಗಳನ್ನು ಪ್ರಸ್ತುತ ಪಡಿಸಿ, ಕೊನೆಯಲ್ಲಿ ಪುರಂದರದಾಸರ ಕೃತಿಯೊಂದಿಗೆ ಅಂದಿನ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು.
ವಾದ್ಯ ಸಹಕಾರದಲ್ಲಿ, ಶ್ರೀ ಅಮಿತ್ ಶರ್ಮಾ ಕೀ-ಬೋಡ್೯ ವಾದನದಲ್ಲಿ, ಶ್ರೀ ಸುದರ್ಶನ್ ತಬಲಾ ವಾದನದಲ್ಲಿ ಸಾಥ್ ನೀಡಿದರು. ಇದೇ ಸಂದರ್ಭದಲ್ಲಿಟಿ ಟಿ ಡಿ ಹೆಚ್ ಡಿ ಪಿ ಪಿ ಯ ಕಾರ್ಯಕ್ರಮಗಳ ನಿರ್ವಹಣಾಧಿಕಾರಿ ಡಾ|| ಪಿ. ಭುಜಂಗ ರಾವ್ ಅವರು ದೇವಸ್ಥಾನದ ಪದಾಧಿಕಾರಿಗಳನ್ನು ಮತ್ತು ಕಲಾವಿದರುಗಳನ್ನು ಟಿ ಟಿ ಡಿ ಪರವಾಗಿ ಸನ್ಮಾನಿಸಿದರು. ಈ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ