'ಗೆಲುವು ಗುರಿಯಿರಲಿ ಆದರೆ ಸೋಲಿಗೆ ಹೆದರದಿರಿ' : ಮಂಜುನಾಥ್ ರೇವಣ್ಕರ್

Chandrashekhara Kulamarva
0

ಉಡುಪಿ :  'ಗೆಲ್ಲದಿರುವುದು ಎಂದರೆ ಸೋಲುವುದು ಎಂದಲ್ಲ. ನಿಂದಿಸುವವರ ಮಂದಿ ಸಮಾಜದಲ್ಲಿ ಇದ್ದೇ ಇರುತ್ತಾರೆ. ಅವರ ಬಗ್ಗೆ ತಲೆಕೆಡಿಸಿಕೊಳ್ಳಬಾರದು' ಎಂದು ಸೂರಜ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಡಾ. ಮಂಜುನಾಥ್ ರೇವಣ್ಕರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.


ಅವರು ಭಾನುವಾರ ಮಂಗಳೂರಿನ ಫಿಜಾ ಬೈ ನೆಕ್ಸಸ್ ಮಾಲ್ ನಲ್ಲಿ 'ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ' ಇವರು ಪಾಂಡೇಶ್ವರದ ಫಿಜಾ ಬೈ ನೆಕ್ಸಸ್ ಮಾಲ್ ಸಹಯೋಗದೊಂದಿಗೆ ಆಯೋಜಿಸಿದ 'ಕಲಾರೂಪಂ' ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.


'ಸೋಲು ಕೊನೆಯ ಹೆಜ್ಜೆಯಲ್ಲ ಗೆಲ್ಲುವುದಕ್ಕೆ ಇರುವ ಮೊದಲ ಹೆಜ್ಜೆ. ವಿದ್ಯಾರ್ಥಿಗಳಲ್ಲಿ ಸೃಜನಾಶೀಲ ಪ್ರತಿಭೆ ಮೂಡಲು ಪೂರಕ ಪ್ರೋತ್ಸಾಹ ಮುಖ್ಯ. ಆ  ನಿಟ್ಟಿನಲ್ಲಿ ಕಾರ್ಯಕ್ರಮದ ಸಂಯೋಜಕರು ಅಭಿನಂದನಾರ್ಹರು' ಎಂದು ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು ಅಭಿಪ್ರಾಯ ವ್ಯಕ್ತಪಡಿಸಿದರು.


ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕರ್ತರ ಪತ್ರಕರ್ತರ ಸಂಘದ ಕಾರ್ಯದರ್ಶಿ ಭಾಸ್ಕರ್ ರೈ ಕಟ್ಟ  ಎರಡೂ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹವನ್ನು ಶ್ಲಾಘಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನದ ಸ್ಥಾಪಕಾಧ್ಯಧ್ಯಕ್ಷ ಕಾ. ವೀ.ಕೃಷ್ಣದಾಸ್ ವಹಿಸಿದ್ದರು.  ಫಿಜಾ ಬೈ ನೆಕ್ಸಸ್ ಮಾಲ್ ನ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಸುನಿಲ್ ಕೊರಗಪ್ಪ, ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕಿ ಲತಾ, ತೀರ್ಪುಗಾರರಾದ ಹಿರಿಯ ಚಿತ್ರ ಕಲಾವಿದ ಚಂದ್ರಯ್ಯ, ಚಿತ್ರ ಕಲಾವಿದ ಲಕ್ಷ್ಮೀ ನಾರಾಯಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.


ನಮ್ಮ ಕುಡ್ಲ ವಾಹಿನಿಯ ಜನಪ್ರಿಯ ವಾರ್ತಾ ವಾಚಕಿ ಡಾ. ಪ್ರಿಯಾ ಹರೀಶ್ ಅವರು ವಿದ್ಯಾರ್ಥಿಗಳ ಪೋಷಕರಿಗೆ ವಿಶೇಷ ಕಾರ್ಯಕ್ರಗಳನ್ನು ನಡೆಸಿಕೊಟ್ಟು ರಂಜಿಸಿದರು.


ಫಿಜಾ ಬೈ ನೆಕ್ಸಸ್ ನ ಆಪರೇಷನ್ ವಿಭಾಗದ ಸ್ವಾತಿ ಪಿ, ಉಲ್ಲಾಸ್, ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನದ ಗೀತಾ ಲಕ್ಷ್ಮೀಶ್,ನೀಲಾಧರ್ ಚೆನ್ನದಾಸ್, ರಂಜನ್ ದಿಡುಪೆ, ರಾಜೇಶ್ವರಿ ಮಂಜುನಾಥ್, ಸ್ನೇಹ, ವನಿತಾ ರಂಗಣ್ಣ, ವಿಮಲ ದಾಸ್, ವಸುಧಾ, ಕವನ, ರಜತ್ ಕೆ. ದಾಸ್, ಯುರೇಖಾ ಮತ್ತಿತರರು ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ಜೂನಿಯರ್ ರಾಜ್ ಕುಮಾರ್ ಖ್ಯಾತಿಯ ಜಗದೀಶ್ ಶಿವಪುರ ಅವರಿಂದ ಗಾಯನ ಕಾರ್ಯಕ್ರಮ ನಡೆಯಿತು.


ಮೈಸೂರು, ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಇದೇ ಹಂತದ ಕಲಾರೂಪಂ ಸ್ಪರ್ಧೆಗಳು ನಡೆದು ಬಳಿಕ ರಾಜ್ಯಮಟ್ಟದ ಸ್ಪರ್ಧೆ ಉಡುಪಿ ಜಿಲ್ಲೆಯಲ್ಲಿ ನಡೆಯಲಿದೆ.ಒಟ್ಟು ಎರಡು ಲಕ್ಷ ರೂಪಾಯಿ ಮೊತ್ತದ ನಗದು ಬಹುಮಾನ ಇರಲಿದೆ ಎಂದು ಸಮಾರಂಭದಲ್ಲಿ ಘೋಷಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top