ಅಕ್ಕ ಮಹಾದೇವಿ ವೀರಶೈವ ಮಹಿಳಾ ಸಂಘದ 8ನೇ ವಚನ ಸಂಭ್ರಮ ಕಾರ್ಯಕ್ರಮ

Upayuktha
0

ಮಂಗಳೂರು: ದಿನಾಂಕ 19.1.2023ರಂದು ಅಕ್ಕ ಮಹಾದೇವಿ ವೀರಶೈವ ಮಹಿಳಾ ಸಂಘದ 8ನೇ ವಚನ ಸಂಭ್ರಮ ಕಾರ್ಯಕ್ರಮವು ವಾತ್ಸಲ್ಯ ಧಾಮ, ಕೊಡಿಯಾಲ್ ಬೈಲ್ ಮಂಗಳೂರಿನಲ್ಲಿ ಆಚರಿಸಲಾಯಿತು. ಉದ್ಘಾಟಕರಾಗಿ ಡಾ.ಮಂಜುನಾಥ್ .ಎಸ್. ರೇವಣ ಕರ್ ಚೇರ್ಮನ್ ಸೂರಜ್ ಎಜುಕೇಷನ್ ಅಂಡ್ ಚಾರಿಟೇಬಲ್ ಟ್ರಸ್ಟ್ (ರಿ), ಮತ್ತು ಉಪನ್ಯಾಸಕರಾಗಿ ಡಾ. ವಿಜಯದೇವೀ ಹಿರಿಯ ಸಾಹಿತಿ, ಸಂಘಟಕಿ, ಎಮಿರೇಟಸ್ ಪ್ರಾಧ್ಯಾಪಕರು, ಅಕ್ಕಮಹಾದೇವಿ ಮ.ವಿ.ವಿ. ವಿಜಾಪುರ ಸಭಾ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ಶ್ರೀಮತಿ ಸುಮಾ ಅರುಣ್ ಮಾನ್ವಿ , ಅತಿಥಿಗಳಾಗಿ ಶ್ರೀಮತಿ ಸುಮಂಗಲಾ ಕೃಷ್ಣಾಪುರ, ನಿರ್ದೇಶಕರು ಸ್ವರೂಪ ಅಧ್ಯಯನ ಕೇಂದ್ರ ಮಂಗಳೂರು ವಹಿಸಿದ್ದರು.


ಡಾ. ವಿಜಯ ದೇವಿಯವರು ವಚನ ಸಾಹಿತ್ಯದ ಮಹತ್ವದ ಬಗ್ಗೆ ಮತ್ತು ಶರಣರ ಸಿದ್ಧಾಂತಗಳು ಸಾಮಾಜಿಕ ಬದಲಾವಣೆಗೆ ಕಾರಣ ಆಗಿವೆ ಎಂದು ತಿಳಿಸಿದರು. ಪ್ರಥಮ ಕವಯತ್ರಿಯೆಂದು ಹೆಸರು ಗಳಿಸಿದ ಅಕ್ಕ ಮಹಾದೇವಿ ಆತ್ಮ ವಿಶ್ವಾಸದ ಪ್ರತೀಕ ಎಂದು ತಿಳಿಸಿದ್ದಾರು. ಡಾ. ಮಂಜನಾಥ್ ರೇವಣಕರ್ ಮಹಿಳೆ ಸಾಮಾಜಿಕ ಶಕ್ತಿ ಮತ್ತು ಕುಟುಂಬದ ಶಕ್ತಿ. ಇಂದು ಮಹಿಳೆಯರು ದೊಡ್ಡ ಹುದ್ದೆಗಳನ್ನು ಅಲಂಕರಿಸಿ, ಸಮಾಜಸೇವೆ ಮಾಡುತಿದ್ದರೆ ಸಂಘಟನೆ ಇನ್ನು ಹೆಚ್ಚಿನ ಸಾಧನೆಯನ್ನು ಮಾಡಲಿ ಎ೦ದು ಶುಭ ಹಾರೈಸಿದರು.


ಶ್ರೀಮತಿ ಸುಮಂಗಳ ಕೃಷ್ಣಾಪುರ ಇವರು ವಚನಗಳಿಂದ ಮಕ್ಕಳಿಗೆ ಜೀವನ ಮೌಲ್ಯಗಳನ್ನು ಕಲಿಸಬಹುದು ಎ೦ದು ಹೇಳಿದರು. ಶ್ರೀಮತಿ ಸುಮ ಅರುಣ ಮಾನ್ವಿಯವರು ಇಂದು ನಾವು ಕಾಣುವ ಸಾಮಾಜಿಕ ಬದಲಾವಣೆಗೆ ಮೂಲ ತಳಪಾಯವನ್ನು 12ನೇ ಶತಮಾನದಲ್ಲಿ ಶರಣರು ಹಾಕಿದರು. ಜೀವನ ಸತ್ಯವನ್ನು ಬಹಳ ಸರಳವಾದ ಭಾಷೆಯಲ್ಲಿ ವಚನಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಮಾಡಿದರು. ವಚನಗಳು ನೆಮ್ಮ ಜೀವನಕ್ಕೆ ಮಾರ್ಗದರ್ಶಕದಂತೆ ಸಹಕರಿಸುತ್ತವೆ. ಇಂತಹ ಅಮೂಲ್ಯವಾದ ವಚನಗಳು ಜನರ ಮನಸಿಗೆ ಮತ್ತು ಮನೆಗೆ ಮುಟ್ಟಿಸುವ ಅಳಿಲು ಸೇವೆಯನ್ನು ನಾವು ಮಾಡುತ್ತಿದ್ದೇವೆ ಎ೦ದು ಹೇಳಿದರು.


ಎಚ್.ಐ.ವಿ ಮಕ್ಕಳ ಪಾಲನೆಯನ್ನು ಮಾಡುತ್ತಿರುವ 'ಸ್ನೇಹ ದೀಪ 'ಆಶ್ರಮದ ವ್ಯವಸ್ಥಾಪಕಿ ಶ್ರೀಮತಿ ತಬಸ್ಸುಮ್ ಅವರ ವಿಶೇಷ ಸಾಧನೆಗಾಗಿ ಸಂಘದ ವತಿಂದ ಸೇವಾ ರತ್ನ ಪ್ರಶಸ್ತಿಯ ಗೌರವ ಸಮ್ಮಾನ ನೀಡಲಾಯಿತು ಮತ್ತು ಪ್ರೊ ವಿಜಯದೇವಿ ಅವರ ಸಾಹಿತ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಸಾಹಿತ್ಯರತ್ನ ಪ್ರ ಶಸ್ತಿಯನ್ನು ನೀಡಿ ಗೌರವಿಸಲಾಯಿತು.


ಅಮೃತ ಪ್ರಕಾಶ ಪತ್ರಿಕೆಯ ವ್ಯಸ್ಥಾಪಕರು ಮತ್ತು ಸಂಪಾದಕಿ ಶ್ರಿಮತಿ ಮಾಲತಿ ಶೆಟ್ಟಿ, ಮಂಗಳೂರು ತಾಲುಕ ಮಹಿಳಾ ಮಂಡಲಗಳ ಓಕೂಟದ ಸ್ಥಾಪಕಾದ್ಯಕ್ಷೆ ಶ್ರಿಮತಿ ಕೆ. ಎ.ರೋಹಿಣಿ ಅವರು ಉಪಸ್ಥಿತರಿದ್ದರು.


ಶ್ರೀಮತಿ ಅನುಪಮ ಸ್ವಾಗತಿಸಿ, ಶ್ರೀಮತಿ ನಿರ್ಮಲ ಧನ್ಯವಾದ ಸಮರ್ಪಿಸಿದರು. ಶ್ರೀಮತಿ ಆಶಾ ಪ್ರಾಸ್ತವಿಕ ಭಾಷಣವನ ಮಾಡಿದರು. ಶ್ರೀಮತಿ ಸುರೇಖಾ ಯಲವಾರ ಕಾರ್ಯಕ್ರಮ ನಿರೂಪಣೆ ಮಾಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top