
ಹೂವಿನ ಹಡಗಲಿ: ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ ಇವರು ಕೊಡಮಾಡುವ ರಾಜ್ಯಮಟ್ಟದ ಕಾವ್ಯಶ್ರೀ 2023 ಪ್ರಶಸ್ತಿಗೆ 32 ಬರಹಗಾರರು ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ. ವಿವರ ಇಂತಿದೆ:
ಗುರುಗೌತಮ ಹಳೇಪುರ, ಶ್ರೀಮತಿ ಶಾಂತಾ ಕುಂಟಿನಿ, ಮುತ್ತು ಯ ವಡ್ಡರ, ಹರೀಶ ಸಿ ಹಂಸ, ಶ್ರೀಮತಿ ಶೋಭಾದೇವಿ ಚೆಕ್ಕಿ ಸೇಡಂ, ಶ್ರೀಮತಿ ಭಾರತಿ ಕೇದಾರಿ ನಲವಡೆ, ಸಾಲಿಗ್ರಾಮ ಗಣೇಶ ಶೆಣೈ, ಸೋ ದಾ ವಿರೂಪಾಕ್ಷಗೌಡ, ಡಾ.ವಾಣಿಶ್ರೀ ಕಾಸರಗೋಡು, ವಿ ಸು ಭ ಬಂಟ್ವಾಳ, ಡಾ.ಸುರೇಶ ನೆಗಳಗುಳಿ, ಎಮ್ ಎಸ್ ಪುರುಷೊತ್ತಮ ಗೌರಿಬಿದನೂರು, ವಿಜಯಕುಮಾರ್ ಹೆಚ್ ಎಸ್, ಶಿವಾನಂದ ಫ ಭಜಂತ್ರಿ, ಶ್ರೀಮತಿ ಯಶೋಧ ಎಮ್ ಎನ್, ಜಯಾನಂದ ಪೆರಾಜೆ, ಶ್ರೀಮತಿ ಪುಷ್ಪ ಹಿರೇಮಠ, ಸಿದ್ಧಾರೂಢ ಗದಗ, ಹೆಚ್ ವೈ ರಾಠೋಡ್, ರವಿ ಎಸ್ ಕೊಡಾವತ್, ಅರುಣಕುಮಾರ ಎಂ, ನಟರಾಜ ದೊಡ್ಡಮನಿ, ಮಂಜಪ್ಪ ಎಲ್, ವೀರಭದ್ರಯ್ಯ ಟಿ ಎಮ್, ಕೃಷ್ಣಪ್ಪ ಸೊಪ್ಪಿನ, ಹೊನ್ನಪ್ಪಯ್ಯ ಗುನಗ, ಶ್ರೀಮತಿ ರತ್ನ ಚಂದ್ರಶೇಖರ, ರಾಮಣ್ಣ ಮಸರಕಲ್, ಶ್ರೀಮತಿ ಅಂಜನಾದೇವಿ ಕಲ್ಲೂರ್ಕರ್, ಅನಂತರಾಜು ಗೋರೂರು, ಸುಂದರೇಶ ಡಿ ಉಡುವೇರೆ, ರವಿ ಹ ತಿರುಕಣ್ಣನವರ.
ದಿನಾಂಕ 26.02.2023 ರಂದು ಹಂಪಿಯಲ್ಲಿ ನಡೆಯುವ ಸಾವಿರಗೋಷ್ಠಿಯ ಸಂಭ್ರಮ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಕಾರ್ಯಕ್ರಮವು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ವಿಜಯನಗರ ಜಿಲ್ಲಾ ಘಟಕದ ಸಹಯೋಗದೊಂದಿಗೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿಯ ರಾಜ್ಯಾಧ್ಯಕ್ಷ ಮಧುನಾಯ್ಕ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ