ಡಿ. 3ರಂದು 'ವಚನ- ದಾಸ -ಸಂಭ್ರಮ' ಪುಸ್ತಕ ಬಿಡುಗಡೆ ಹಾಗೂ ದಾಸಸಾಹಿತ್ಯ ವಿಚಾರಗೋಷ್ಠಿ

Upayuktha
0

ಬೆಂಗಳೂರು: ನಗರದ ಸಾಹಿತ್ಯ ವಿಚಾರ ವೇದಿಕೆ ಮತ್ತು ವಿಜಯ ಸಂಜೆ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ 67ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಪ್ರಾಧ್ಯಾಪಕ ಸಂಶೋಧಕ ಡಾ. ಆರ್. ವಾದಿರಾಜು ಸಂಪಾದಿಸಿರುವ 'ವಚನ -ದಾಸ -ಸಂಭ್ರಮ' ಕೃತಿ ಲೋಕಾರ್ಪಣೆ ಹಾಗೂ ದಾಸ ಸಾಹಿತ್ಯ ವಿಚಾರಗೋಷ್ಠಿಯನ್ನು ಬೆಂಗಳೂರಿನ ಜಯನಗರ 4ನೇ ಬ್ಲಾಕ್ ವಿಜಯ ಸಂಜೆ ಪದವಿಪೂರ್ವ ಕಾಲೇಜಿನ ಆವರಣದ ರಾಮಸ್ವಾಮಿ ಸಭಾಂಗಣದಲ್ಲಿ ಡಿಸೆಂಬರ್ 3 ಶನಿವಾರ ಸಂಜೆ 4:30ಕ್ಕೆ ಆಯೋಜಿಸಲಾಗಿದೆ.


ಹಿರಿಯ ದಾಸ ಸಾಹಿತ್ಯ ಸಂಶೋಧಕ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಕೃತಿ ಲೋಕಾರ್ಪಣೆ ಮಾಡುವರು .ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ,ಕಾಲೇಜಿನ ಪ್ರಾಂಶುಪಾಲ ಪಿ.ಸಿ ನಾಗರಾಜು ,ಕೆಕೆ ಪ್ರಿಂಟರ್ಸ್ ಅಂಡ್ ಪಬ್ಲಿಷರ್ಸ್ ಶಿವರಾಮ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕನ್ನಡ ಪ್ರಾಧ್ಯಾಪಕ ಡಾ.ಎಸ್ ಎಲ್ ಮಂಜುನಾಥ ಕೃತಿ ಕುರಿತು ಮಾತನಾಡುವರು .ನಿವೃತ್ತ ಪ್ರಾಂಶುಪಾಲ ಪ್ರೊ.ಚಂದ್ರಶೇಖರ್ ರವರಿಗೆ ಇದೇ ಸಂದರ್ಭದಲ್ಲಿ ಅಭಿನಂದನೆಯನ್ನು ಹಮ್ಮಿಕೊಳ್ಳಲಾಗಿದೆ.


ನಂತರ ನಡೆಯುವ ದಾಸ ಸಾಹಿತ್ಯ ವಿಚಾರಗೋಷ್ಠಿಯಲ್ಲಿ ಡಾ. ವಿದ್ಯಾ ಕಸಬೇರವರ ಅಧ್ಯಕ್ಷತೆಯಲ್ಲಿ ಡಾ.ವಾದಿರಾಜ ಅಗ್ನಿ ಹೋತ್ರಿರವರು 'ಹರಿದಾಸರ ಛಂದೋ ಮಾಲಿಕೆ' ಕುರಿತು, ಡಾ.ವಿದ್ಯಾ ರಾವ್ ರವರು 'ಶ್ರೀ ವ್ಯಾಸರಾಯರ ಸುಳಾದಿಯ ಅಂಕಿತ ಸಂದಿಗ್ಧ ಸ್ಪಷ್ಟೀಕರಣ' ಬಗ್ಗೆ, ಡಾ.ಎಲ್ ಸುಧಾ ಅವರು' ಪಾಠ ಪರಿಷ್ಕರಣೆ 'ವಿಷಯ ಮಂಡನೆ ಮಾಡುವರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top