ಮಳೆ ಕೊಯ್ಲು, ಸಾವಯವ ಗೊಬ್ಬರ ತಯಾರಿ ಪ್ರಾತ್ಯಕ್ಷಿಕೆ

Upayuktha
0


ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಉಜಿರೆಯ ಎಸ್.ಡಿ.ಎಂ ಪದವಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಮೋಹನ ನಾರಾಯಣ ಅವರ ಮನೆಯಲ್ಲಿ ಮಳೆ ಕೊಯ್ಲು, ಸಾವಯವ ಗೊಬ್ಬರ ತಯಾರಿಕೆ, ಸೌರಶಕ್ತಿ ಬಳಕೆ ಹಾಗೂ ಎರೆಹುಳ ಗೊಬ್ಬರ ತಯಾರಿ ವಿಧಾನದ ಕುರಿತು ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು.

 

ಡಾ. ಮೋಹನ ನಾರಾಯಣ ಅವರು ತಾವು ಮಾಡಿಕೊಂಡ ಮಳೆಕೊಯ್ಲು ವಿಧಾನ ಹಾಗೂ ಸಾವಯವ ಗೊಬ್ಬರಗಳ ಬಗ್ಗೆ ಮಾಹಿತಿ ನೀಡಿದರು. ಸೌರಶಕ್ತಿ ಬಳಕೆ ಹಾಗೂ ವಿಧಾನದ ಬಗ್ಗೆ ಪೂರ್ಣಿಮಾ ಮೋಹನ ನಾರಾಯಣ ಮಾಹಿತಿ ನೀಡಿದರು. ಎಸ್.ಡಿ.ಎಂ ಸ್ನಾತಕೋತರ ಕೇಂದ್ರದ ಬಯೋಟೆಕ್ನಾಲಜಿ ವಿಭಾಗದ ಪ್ರಾಧ್ಯಾಪಕ ಡಾ. ಮನೋಜ್ ಗೋಡಬೋಲೆ ಅವರು ಸಾವಯವ ಹಾಗೂ ಎರೆಹುಳ ಗೊಬ್ಬರ ತಯಾರಿಕೆಯ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

 

ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಡಾ.ಪ್ರಸನ್ನಕುಮಾರ ಐತಾಳ್ ಹಾಗೂ ಚೇತನಾ ಕುಮಾರಿ ಅಭ್ಯಾಗತರನ್ನು ಗೌರವಿಸಿದರು.

ನಾಯಕರಾದ ವಂಶಿ ಭಟ್, ವರ್ಧಿನಿ, ಜಯಂತ್ ಹಾಗೂ ಪ್ರಣಮ್ಯಾ ಜೈನ್ ಕಾರ್ಯಕ್ರಮ ಸಂಘಟಿಸಿದರು.

ಸ್ವಯಂಸೇವಕಿ ಮಹಾಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


إرسال تعليق

0 تعليقات
إرسال تعليق (0)
To Top