ಎಸ್.ಡಿ.ಎಂ. ಕಾನೂನು ಕಾಲೇಜು: ಕುಂಬ್ಳೆ ಸುಂದರರಾವ್ ನುಡಿನಮನ

Upayuktha
0

ಮಹಾನಗರ: ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ಯಕ್ಷ ಲೋಕದ ಅಗ್ರಮಾನ್ಯ ಕಲಾವಿದ, ಇತ್ತೀಚೆಗೆ ನಿಧನರಾದ ದಿ. ಕುಂಬ್ಳೆ ಸುಂದರರಾವ್‌ ರವರಿಗೆ ನುಡಿ ನಮನ ಕಾರ‍್ಯಕ್ರಮ ನಡೆಯಿತು.


ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಾಲೇಜಿನ ಯಕ್ಷೋತ್ಸವ ಸಮಿತಿ ವತಿಯಿಂದ ನಡೆದ ಈ ಕಾರ‍್ಯಕ್ರಮದಲ್ಲಿ ವಿವಿಧ ಗಣ್ಯರು ನುಡಿನಮನ ಸಲ್ಲಿಸಿದರು.


ಮಾತಿನ ಲೋಕದ ಮಾಣಿಕ್ಯ:

 

ದಿ. ಸುಂದರರಾಯರು ಅಪೂರ್ವ ಮಾತುಗಾರ. ತಮ್ಮ ಮಾತಿನಿಂದಲೇ ಯಕ್ಷ ಪ್ರೇಮಿಗಳನ್ನು ಮೋಡಿ ಮಾಡಬಲ್ಲ ಶಕ್ತಿ ಹೊಂದಿದ್ದ ಶ್ರೀಯುತರು ಮಾತಿನ ಲೋಕದ ಮಾಣಿಕ್ಯ ಎಂದು ಯಕ್ಷ ಕಲಾವಿದ, ನಿರೂಪಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು.


ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ, ಕಾಲೇಜಿನ ಪ್ರಾಂಶುಪಾಲರಾದ ಡಾ.ತಾರಾನಾಥ, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಸದಸ್ಯ ಡಾ. ಮಾಧವ ಮೂಡು ಕೊಣಾಜೆ, ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಂಜುನಾಥ ರೇವಣ್ಕರ್, ಯಕ್ಷ ಕಲಾವಿದರ ವಿ ಅಲೆವೂರಾಯ, ಯಕ್ಷೋತ್ಸವ ಸಮಿತಿ ಸಂಚಾಲಕ ಪ್ರೊ. ನರೇಶ್ ಮಲ್ಲಿಗೆ ಮಾಡು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕರಾದ ಪ್ರೊ. ಪುಷ್ಪರಾಜ್ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top