ಯಕ್ಷ ಲೋಕದ ಮಿನುಗುತಾರೆ ಕುಂಬ್ಳೆ ಸುಂದರ್ ರಾವ್ : ಎ.ಎಸ್ ಭಟ್

Upayuktha
0

ಮಂಗಳೂರು: ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ದಿನಾಂಕ 30- 11 -2022ನೇ ಬುಧವಾರದಂದು ಇಹಲೋಕ ತ್ಯಜಿಸಿದ ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದ ಶ್ರೀ ಕುಂಬ್ಳೆ ಸುಂದರ್ ರಾವ್ ಅವರಿಗೆ ಮಂಗಳೂರು ಕನ್ನಡ ಸಾಹಿತ್ಯ ಪರಿಷತ್ ಘಟಕದ ವತಿಯಿಂದ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.


ಕುಂಬ್ಳೆ ಸುಂದರ್ ರಾವ್ ಅವರು ಯಕ್ಷಗಾನ ರಂಗದಲ್ಲಿ ಶೇಣಿಯವರ ನಂತರದ ಅತ್ಯಂತ ಮೇರು ಕಲಾವಿದರು, ಅವರ ಸಾವಿನಿಂದ ಯಕ್ಷ ಲೋಕಕ್ಕೆ ತುಂಬಲಾರದ ನಷ್ಟ ಆಗಿದೆ, ಅವರು ಹಾಕಿ ಕೊಟ್ಟ ದಾರಿಯಲ್ಲಿ ಯುವ ಕಲಾವಿದರು ನಡೆದರೆ ಯಕ್ಷ ಲೋಕದಲ್ಲಿ ಇನ್ನಷ್ಟು ಹೊಸ ಸಾಧಕರು ಬರಲು ಸಾಧ್ಯ. ಅವರ ಸಾವಿನಿಂದ ಯಕ್ಷಗಾನ ಲೋಕ ನಿಜವಾಗಿಯೂ ಬಡವಾಗಿದೆ ಎಂದು ಯಕ್ಷ ಅಭಿಮಾನಿ ಶ್ರೀ ಎ.ಎಸ್ ಭಟ್ ಅವರು ನುಡಿದರು.


ಈ ಸಂದರ್ಭದಲ್ಲಿ ಕ.ಸಾ.ಪ ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಮಂಜುನಾಥ್ ರೇವಣಕರ್, ಕಾರ್ಯದರ್ಶಿಗಳಾದ ಡಾ|| ಮುರಲೀ ಮೋಹನ್ ಚೂಂತಾರು, ಶ್ರೀ ಗಣೇಶ್ ಪ್ರಸಾದ್‌ಜೀ, ಕೋಶಾಧಿಕಾರಿಗಳಾದ ಶ್ರೀ ಸುಬ್ರಾಯ ಭಟ್. ಕ.ಸಾ.ಪ ದಲ್ಲಿ ಸದಸ್ಯರಾದ ಶ್ರೀ ಕೆ. ಶಶಿಧರ್, ಶ್ರೀ ಅನಂತ್ ಶರ್ಮ, ಸುರೇಶ್ ನಾಥ್, ದಿವಾಕರ್ ಮುಂತಾದವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top