ಹತ್ತು ದಿನಗಳ ಒಳಗೆ ಮಂಗಳೂರು ವಿವಿ ಫಲಿತಾಂಶ ಬಿಡುಗಡೆ: ಸಚಿವ ಅಶ್ವತ್ಥ ನಾರಾಯಣ್

Upayuktha
0

ಬೆಳಗಾವಿ: ಹತ್ತು ದಿನಗಳ ಒಳಗಾಗಿ ಮಂಗಳೂರು ವಿವಿ ಫಲಿತಾಂಶ ಬಿಡುಗಡೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ತಿಳಿಸಿದರು.


ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಪ್ರಶ್ನೆಗೆ ಸದನದಲ್ಲಿ ಉತ್ತರ ನೀಡಿದ ಸಚಿವರು, ಫಲಿತಾಂಶ ವಿಳಂಬದಿಂದಾಗಿ ವಿದ್ಯಾರ್ಥಿಗಳಿಗೆ ತನ್ನ ಹಿಂದಿನ ವರ್ಷದ ಫಲಿತಾಂಶ ತಿಳಿಯದೆ ಮುಂದಿನ ವರ್ಷಕ್ಕಾಗಿ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಗೊಂದಲ ಉಂಟಾಗಿದೆ. ಅದೇ ರೀತಿ ಹಾಸ್ಟೆಲ್ ಗಳಲ್ಲಿ ಗೊಂದಲ ಮುಂತಾದ ವಿಚಾರಗಳ ಬಗ್ಗೆ ಸದನದಲ್ಲಿ ವಿವರಿಸಿ ಆದಷ್ಟು ಬೇಗನೇ ಫಲಿತಾಂಶ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಒತ್ತಾಯಿಸಿದರು.


“ಎ” ಗ್ರೇಡ್ ನಲ್ಲಿದ್ದ ಮಂಗಳೂರು ವಿವಿ ಈಗ “ಬಿ” ಗ್ರೇಡ್ ಗೆ ಬಂದು ನಿಂತಿದ್ದು, ಹೀಗೆಯೇ ಮುಂದುವರಿದರೆ ಮುಂದೆ “ಸಿ” ಗ್ರೇಡ್ ಗೆ ಬಂದು ತಲುಪಬಹುದು. ಆದುದರಿಂದ ಈ ಬಗ್ಗೆ ಕೂಲಂಕಷ ತನಿಖೆ ನಡೆಸಿ ಫಲಿತಾಂಶ ವಿಳಂಬಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.


ಈ ಬಗ್ಗೆ ಉತ್ತರ ನೀಡಿದ ಉನ್ನತ ಶಿಕ್ಷಣ ಸಚಿವರಾದ ಅಶ್ವತ್ಥ ನಾರಾಯಣ್, ಮುಂದಿನ ಹತ್ತು ದಿನಗಳ ಒಳಗಾಗಿ ಫಲಿತಾಂಶ ಬಿಡುಗಡೆ ಮಾಡುತ್ತೇವೆಂದು ಭರವಸೆ ನೀಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
To Top