ಕುವೆಂಪು ಸಾಹಿತ್ಯ ಮರು ಓದಿಗೆ ಒಳಗಾಗಲಿ: ಪ್ರೊ. ತಾಳ್ತಜೆ

Upayuktha
0

ಮಂಗಳೂರು ವಿವಿಯಲ್ಲಿ ಆಗು ನೀ ಅನಿಕೇತನ ಕಾರ್ಯಕ್ರಮ


ಮಂಗಳಗಂಗೋತ್ರಿ: ಕುವೆಂಪು ಅವರು ಕುಪ್ಪಳ್ಳಿಯಲ್ಲಿಯೇ ಕುಳಿತು ಜಗತ್ತಿನ ಆಗುಹೋಗುಗಳನ್ನು ಗಮನಿಸುತ್ತಾ ವಿಶ್ವಕ್ಕೆ ಮಾನವೀಯ ದರ್ಶನವನ್ನು ತಮ್ಮ ಕೃತಿಗಳ ಮೂಲಕ ಮಾಡಿದವರು. ಅವರ ಆಧ್ಯಾತ್ಮಿಕ, ಸಾಮಾಜಿಕ ಮತ್ತು ವೈಚಾರಿಕ ಚಿಂತನೆಗಳು ಇಂದಿಗೂ ಪ್ರಸ್ತುತ. ವರ್ತಮಾನದ ಕಣ್ಣಿನಿಂದ ಕುವೆಂಪು ಅವರ ಸಾಹಿತ್ಯದ ಮರು ಓದು ನಡೆಯಬೇಕು, ಎಂದು ಮುಂಬಯಿ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಪಕ ಪ್ರೊ.ತಾಳ್ತಜೆ ವಸಂತ ಕುಮಾರ್ ಹೇಳಿದರು.


ಗುರುವಾರ ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿ ಪಿ ಕನ್ನಡ ಅಧ್ಯಯನ ಕೇಂದ್ರ ದ ವತಿಯಿಂದ ವಿಭಾಗದ ಸಭಾಂಗಣದಲ್ಲಿ ನಡೆದ ಕುವೆಂಪು ಜನ್ಮದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಆಗು ನೀ ಅನಿಕೇತನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ವಿವಿಗಳಲ್ಲಿ ಪ್ರಸಾರಾಂಗ ಇರಬೇಕೆಂಬ ಕಲ್ಪನೆ ಕುವೆಂಪು ಅವರದ್ದು. ಈಗ ಎಲ್ಲಾ ವಿವಿಗಳಲ್ಲೂ ಪ್ರಸಾರಾಂಗ ರೂಪುಗೊಂಡಿದೆ. ಕುವೆಂಪು ಅವರಿಗೆ ಕನ್ನಡ ಮಾಧ್ಯಮದ ಕುರಿತು ಅಪಾರ ಕಾಳಜಿಯಿತ್ತು, ಎಂದರು.


ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್ ಯಡಪಡಿತ್ತಾಯ ಮಾತನಾಡಿ, ವಿಶ್ವ ಮಾನವತೆಯ ಆಶಯವು ನಮ್ಮ ಸುತ್ತಮುತ್ತಲಿನವರನ್ನೂ ಒಳಗೊಂಡು ಮಾನವ ಧರ್ಮವನ್ನು ಪ್ರತಿಪಾದಿಸುವುದೇ ಆಗಿದೆ. ಕುವೆಂಪು ಅವರ ಕನ್ನಡಾಭಿಮಾನ ನಮಗೆಲ್ಲಾ ಆದರ್ಶವಾಗಬೇಕು, ಎಂದರು. ಅಧ್ಯಕ್ಷತೆ ವಹಿಸಿದ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ.ಸೋಮಣ್ಣ ಮಾತನಾಡಿ, ಕುವೆಂಪು ಶ್ರೀಸಾಮಾನ್ಯನ ಬದುಕಿಗೂ ಘನತೆಯಿದೆ ಎಂಬುದನ್ನು ತೋರಿಸಿಕೊಟ್ಟವರು ಎಂದರು.


ಸಮಾರಂಭದಲ್ಲಿ ವಿಭಾಗದ ಪ್ರಾಧ್ಯಾಪಕ ಪ್ರೊ.ಅಭಯ ಕುಮಾರ್, ಡಾ.ಧನಂಜಯ ಕುಂಬ್ಳೆ ಉಪಸ್ಥಿತರಿದ್ದರು.


ಡಾ.ಯಶುಕುಮಾರ್ ಸ್ವಾಗತಿಸಿದರು. ಚಂದನಾ ಕೆ ಎಸ್ ವಂದಿಸಿದರು. ವಿದ್ಯಾರ್ಥಿನಿ ರಶ್ಮಿ ಕಾರ್ಯಕ್ರಮ ನಿರೂಪಿಸಿದರು.


ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳು ಕುವೆಂಪು ಗೀತೆಗಳ ಗಾಯನ, ಕವಿತಾ ವಾಚನ, ವಿಶ್ವಮಾನವ ಸಂದೇಶವನ್ನು ಪ್ರಸ್ತುತಪಡಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top