ವಿಕಲಚೇತನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

Upayuktha
0


ಮಂಗಳೂರು: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ಕೇಂದ್ರ ಸರ್ಕಾರದಿಂದ 2022ನೇ ಸಾಲಿಗೆ ನ್ಯಾಷನಲ್ ಇ-ಸ್ಕಾಲರ್‍ಶಿಪ್ ಯೋಜನೆಯಡಿ, ಪ್ರಿ ಮೆಟ್ರಿಕ್ ಹಾಗೂ ಟಾಪ್ ಕ್ಲಾಸ್ ವಿಕಲಚೇತನ ವಿದ್ಯಾರ್ಥಿ ವೇತನಕ್ಕೆ ಆನ್‍ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ.

ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ವಿಕಲಚೇತನ ವಿದ್ಯಾರ್ಥಿಗಳು ಶಾಲಾ ಕಾಲೇಜು, ಶಿಕ್ಷಣ ಸಂಸ್ಥೆಗಳ ಮೂಲಕ ವೆಬ್‍ಸೈಟ್ https://ssp.prematric.karnataka.gov.in ಇಲ್ಲಿ ಆಯಾ ತಾಲೂಕಿನ ವಿ.ಆರ್.ಡಬ್ಲ್ಯೂ ಎಂ.ಆರ್.ಡಬ್ಲೂ ಹಾಗೂ ಯು.ಆರ್. ಡಬ್ಲೂಗಳ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು ಅಥವಾ ತಾವೇ ನೇರವಾಗಿ ಕಚೇರಿಯಲ್ಲಿ 2023ನೇ ಜನವರಿ 15 ರೊಳಗೆ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ, ಮಂಗಳೂರು ತಾಲೂಕಿನ ಜಯಪ್ರಕಾಶ್ ಮೊ.ಸಂಖ್ಯೆ: 9110897458, ಬಂಟ್ವಾಳ ತಾಲೂಕಿನ ಗೀರೀಶ್ ಮೊ.ಸಂಖ್ಯೆ: 9164645616, ಪುತ್ತೂರು ತಾಲೂಕಿನ ನವೀನ್ ಮೊ.ಸಂಖ್ಯೆ: 9686682251, ಸುಳ್ಯ ತಾಲೂಕಿನ ಚಂದ್ರಶೇಖರ ಮೊ.ಸಂಖ್ಯೆ: 815300057, ಕಡಬ ತಾಲೂಕಿನ ಅಕ್ಷತಾ ಮೊ.ಸಂಖ್ಯೆ: 7899579773, ಬೆಳ್ತಂಗಡಿ ತಾಲೂಕಿನ ಜಾನ್ ಮೊ.ಸಂಖ್ಯೆ: 7975199473 ಹಾಗೂ 0824-2455999 ಮೂಲಕ ಆಯಾ ತಾಲೂಕಿನ ಎಂ.ಆರ್ ಡಬ್ಲ್ಯೂಗಳು ಅಥವಾ ಇಲಾಖೆಯ ವೆಬ್‍ಸೈಟ್ www.disabilityaffairs.gov.in ಇಲ್ಲಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ವಿಕಲಚೇತನರ ಬಸ್ ಪಾಸ್ ಫೆಬ್ರವರಿ 28ರ ವರೆಗೆ ಮಾನ್ಯ:

ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದಿಂದ 2022ನೇ ಸಾಲಿಗೆ ವಿತರಿಸಿರುವ ವಿಕಲಚೇತನರ ಬಸ್ ಪಾಸುಗಳನ್ನು 2023ರ ಫೆಬ್ರವರಿ 28ರ ವರೆಗೆ ಮಾನ್ಯ ಮಾಡಲಾಗಿದೆ.

ಪ್ರಸಕ್ತ ಸಾಲಿನಲ್ಲಿ ವಿಕಲಚೇತನರ ಪಾಸ್ ನವೀಕರಣ ಹಾಗೂ ಹೊಸ ಪಾಸ್ ಪಡೆಯುವ ಫಲಾನುಭವಿಗಳು ಸೇವಾಸಿಂಧು ಪೋರ್ಟಲ್ https://serviceonline.gov.in/karnataka/ ಮೂಲಕ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ.

ಸೇವಾಸಿಂಧುವಿನಲ್ಲಿ ಅರ್ಜಿ ಸಲ್ಲಿಸುವಾಗ ವಾಸ್ತವ್ಯದ ದೃಢೀಕರಣ, ಆಧಾರ್ ಕಾರ್ಡ್ ಪ್ರತಿ, ಪಾಸ್ ಪೋರ್ಟ್ ಸೈಜ್ ಫೋಟೋ ಹಾಗೂ ಯು.ಡಿ.ಐ.ಡಿ, ಗುರುತಿನ ಚೀಟಿಯನ್ನು ಆನ್‍ಲೈನ್‍ನಲ್ಲಿ ಅಪ್ ಲೋಡ್ ಮಾಡಿ ಆಯಾ ತಾಲೂಕಿನ ಘಟಕದಲ್ಲಿ ಪಾಸ್‍ಗಳನ್ನು ಪಡೆಯಬೇಕು.

ಹೊಸದಾಗಿ ಪಾಸ್ ಪಡೆಯುವವರು ಸಲ್ಲಿಸಿರುವ ಅರ್ಜಿಯ ಪ್ರತಿ, ವಾಸ್ತವ್ಯದ ದೃಢೀಕರಣ, ಆಧಾರ್ ಕಾರ್ಡ್ ಪ್ರತಿ, ಪಾಸ್ ಪೋರ್ಟ್ ಸೈಜ್ ಫೋಟೋ 2, ಅಂಚೆ ಚೀಟಿ ಗಾತ್ರದ ಫೋಟೋ 1 ಹಾಗೂ ಯು.ಡಿ.ಐ.ಡಿ, ಗುರುತಿನ ಚೀಟಿ ಹಾಗೂ 660 ರೂ. ಪಾವತಿಸಿ ಪುತ್ತೂರಿನ ವಿಭಾಗೀಯ ಕಚೇರಿಯಿಂದ ಪಾಸ್ ಪಡೆಯುವಂತೆ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top