ಆಳ್ವಾಸ್ ಅಂಗಳದಲಿ ಬೆಳಕಿನ ವೈಭವ

Upayuktha
0

ಮೂಡುಬಿದರೆ: ಆಳ್ವಾಸ್ ಆವರದಣವು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಕಾರಣಕ್ಕಾಗಿ ಏಳು ದಿನಗಳ ಕಾಲ ವರ್ಣಬೆಳಕಿನ ಚಿತ್ತಾರದಿಂದ ಕಂಗೊಳಿಸಿತು. ಎತ್ತ ನೋಡಿದರೂ ಮಿನುಗುತ್ತಿರುವ ವಿದ್ಯುತ್ ದೀಪಾಲಂಕಾರಗಳು ವಿದ್ಯಾಗಿರಿಗೆ ಉತ್ಸವದ ರಂಗು ತುಂಬಿದ್ದವು.


ಆಳ್ವಾಸ್ ಆವರಣದ ಮುಂಭಾಗದಿಂದ ಜಾಂಬೂರಿ ಪ್ರವೇಶದವರೆಗೆ ಕಾಲೇಜಿನ ಪ್ರವೇಶ ದ್ವಾರ ಸೇರಿದಂತೆ ವಿವಿಧ ಮುಖ್ಯದ್ವಾರ, ಸುತ್ತಲಿನ ಪರಿಸರ, ಕಟ್ಟಡಗಳನ್ನು ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತ್ತು. ಹಲವುಕಡೆ ಬೆಳಕಿನ ಅಕ್ಷರಗಳು ಸ್ವಾಗತಕೋರುತ್ತಿರುವ ದೃಶ್ಯ ಅತ್ಯಾಕರ್ಷಕವಾಗಿದ್ದು ನೋಡುಗರ ಕಣ್ಮನಸೆಳೆಯುತ್ತಿತ್ತು.


ಮುಖ್ಯ ಬೀದಿಗಳ ತುಂಬ ಹಲವು ಆಕೃತಿಗಳ ಮೇಲೆ ಕಂಗೂಳಿಸುವ ವಿದ್ಯುತ್ ದೀಪದ ಬೆಳಕು ಎಲ್ಲರ ಗಮನ ಸೆಳಯುವಲ್ಲಿ ಯಶಸ್ವಿಯಾಯಿತು. ಸಂಪಿಗೆ ರಸ್ತೆಯಿಂದ ಕ್ಯಾಂಪಸ್ ಪ್ರವೇಶಿಸುವ ದಾರಿಯುದ್ದಕ್ಕೂ ಪಿರಮಿಡ್ ಮಾದರಿಯಲ್ಲಿ ಸಾಲಾಗಿ ನಿಂತಿರುವ ವಿದ್ಯುತ್ ದೀಪಾಲಂಕಾರಗಳ ಗೋಪುರಗಳ ನೋಟ ವಿಶೇಷವೆನ್ನಿಸಿತ್ತು. ಅಷ್ಟೇ ಅಲ್ಲದೇ ಕ್ಯಾಂಪಸ್ ಆವರಣದಲ್ಲಿ ಬೆಳಕಿನಿಂದ ಕಂಗೊಳಿಸುತ್ತಿದ್ದ ಹಲವು ಪ್ರಾಣಿಗಳ ಪ್ರತಿಕೃತಿಗಳು ನೋಡುಗರನ್ನು ಆಕರ್ಷಿಸಿದವು.


ಚಿತ್ರ-ವರದಿ: ತೇಜಶ್ವಿನಿ ಕಾಂತರಾಜ್

ದ್ವಿತೀಯ ವರ್ಷ 

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ

ಉಜಿರೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top