'ಧನುರ್ಮಾಸ ಸಂಗೀತೋತ್ಸವ' ಸಂಪನ್ನ

Upayuktha
0

ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಹಾಗೂ ಸಾಹಿತಿ- ಸಂಘಟಕ ಡಾ.ಸಿಸಿರಾ ರವರಿಗೆ 'ದತ್ತ ಸಾಮ್ರಾಟ್' ಪ್ರಶಸ್ತಿ ಪ್ರದಾನ


ಬೆಂಗಳೂರು: ನಗರದ ರಾಜರಾಜೇಶ್ವರಿನಗರದ ಬಾಲಕೃಷ್ಣ ಬಯಲು ರಂಗಮಂದಿರದಲ್ಲಿ ದತ್ತಶ್ರೀ ಸಾಂಸ್ಕೃತಿಕ ವೇದಿಕೆ ವತಿಯಿಂದ ಧನುರ್ಮಾಸ ಸಂಗೀತೋತ್ಸವ - ದತ್ತ ಸಾಮ್ರಾಟ್ ಪ್ರಶಸ್ತಿ ಪ್ರದಾನ- ನೃತ್ಯ ವೈಭವ ಕಾರ‍್ಯಕ್ರಮ ಆಯೋಜಿಸಲಾಗಿದೆ.


ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆಡ ಈ ಕಲಾ ಸಮ್ಮಿಲನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಭಾರತ ವಿಕಾಸ ಪರಿಷತ್ ಅಧ್ಯಕ್ಷ ರಘುನಾಥ್, ಪತ್ರಕರ್ತ ನ.ಶ್ರೀ. ಸುಧೀಂದ್ರರಾವ್, ಕನ್ನಡ ಸಾಹಿತ್ಯ ಪರಿಷತ್ತು ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಮಾಜಿ ಅಧ್ಯಕ್ಷ ರ.ನರಸಿಂಹಮೂರ್ತಿ, ಜನಪದ ಸಂಶೋಧಕ ಡಾ.ಕೆ.ಎನ್.ನಾಗೇಶ್ ವೇದಿಕೆಯ ಆಧ್ಯಕ್ಷ ಭಾಸ್ಕರ್ ಮೂರ್ತಿ ಮೊದಲಾದ ಗಣ್ಯರ ಸಮ್ಮುಖದಲ್ಲಿ ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಹಾಗೂ ಸಾಹಿತಿ- ಸಂಘಟಕ ಡಾ.ಸಿಸಿರಾ ರವರಿಗೆ ‘ದತ್ತ ಸಾಮ್ರಾಟ್’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕರ್ನಾಟಕ ರಾಜ್ಯ ಸಾಹಿತಿ ಕಲಾವಿದರ ಒಕ್ಕೂಟದ ಅಧ್ಯಕ್ಷ ಕೆ.ಹೆಚ್. ಕುಮಾರ್ ರವರು ಪ್ರತಿ ಬಡಾವಣೆಯಲ್ಲೂ ಇಂತಹದೊಂದು ಸಾಂಸ್ಕೃತಿಕ ವೇದಿಕೆ ಮೂಲಕ ಎಲೆಮರೆಕಾಯಂತಿರುವ ಪ್ರತಿಭೆಗಳಿಗೆ ಅವಕಾಶ ನೀಡಿ ಶ್ರೀಮಂತ ಪರಂಪರೆಯನ್ನು ಉಳಿಸಿಸುವ ನಿಟ್ಟಿನಲ್ಲಿ ಕರ‍್ಯಪ್ರವೃತ್ತ ರಾಗಬೇಕು ಎಂದು ಅಭಿಪ್ರಾಯಪಟ್ಟರು.


ಗುರು ಶ್ರೀಮತಿ ಮೋನಿಷಾ ನವೀನ್ ರವರ ನಾಟ್ಯ ಸನ್ನಿಧಿ ಭರತನಾಟ್ಯ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ವೈಭವ, ಸಂತವಾಣಿ ಸುಧಾಕರ್, ರಾಜೇಶ್ ಆನೇಕಲ್, ದತ್ತಶ್ರೀ, ರವಿ ಇಗ್ಗಲೂರು, ಚೈತ್ರ ಹೆಬ್ಬಗೋಡಿ, ವೀರೇಶ್, ನರಸಿಂಹ, ವಾಸುಕಿ ಪ್ರಸಾದ್, ಭಾಗ್ಯಲಕ್ಷ್ಮಿ, ಸಾಯಿ ಪವನ್ ಹಾಗು ಸತ್ಯವತಿ ರವೀಂದ್ರ ರವರ ತಂಡದಿಂದ ಸುಮಧುರ ಗಾಯನ ಸಂಜೆ ಏರ್ಪಡಿಸಲಾಗಿತ್ತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top