• ನಮ್ಮ ಸಂಸ್ಕೃತಿ ಸ್ವಚ್ಛ ಸಂಸ್ಕೃತಿ ಆಂದೋಲನ ಆರು ದಿನಗಳ ಕಾಲ ನಡೆಯಿತು.
• 30,000 ಸಾವಿರ ಶಿಬಿರಾರ್ಥಿಗಳು 8 ತಂಡಗಳಾಗಿ ಆದೊಂಲನದಲ್ಲಿ ಭಾಗವಹಿಸಿ ಮೂಡುಬಿದಿರೆ ಆಸುಪಾಸಿನ 250ಕಿಮೀ ವ್ಯಾಪ್ತಿ ಪ್ರದೇಶದಲ್ಲಿ ಸ್ವಚ್ಛತೆ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡರು.
ಮೂಡುಬಿದಿರೆ: ಸ್ಚಚ್ಛತೆ ಮಾನವನ ಬದುಕಿನ ಮುಖ್ಯ ಭಾಗ. ಪ್ರತಿಯೊಬ್ಬರು ಸ್ವಚ್ಛತೆಗೆ ಆದ್ಯತೆ ನೀಡಿದಾಗ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ ಎಂದು ಮೂಡುಬಿದಿರೆ ಪುರಸಭೆ ಮುಖ್ಯ ಅಧ್ಯಕ್ಷ ಪ್ರಸಾದ್ ಕುಮಾರ್ ಹೇಳಿದರು.
ಮೂಡುಬಿದಿರೆಯ ಸ್ವರಾಜ್ ಮೈದಾನದಲ್ಲಿ " ನಮ್ಮ ಸಂಸ್ಕೃತಿ ಸ್ವಚ್ಛ ಸಂಸ್ಕೃತಿ "ಎಂಬ ಧ್ಯೇಯದೊಂದಿಗೆ ನಡೆದ ಸೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಜಾಂಬೂರಿಯ ಸ್ವಚ್ಛತಾ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತ ಈ ಹಿಂದೆ ಸ್ವಚ್ಛತೆಯಲ್ಲಿ ಮುಂಚೂಣಿಯಲ್ಲಿತ್ತು. ಇತ್ತೀಚೆಗೆ ಜನರು ಪ್ಲಾಸ್ಟಿಕ್ ಬಳಕೆ ಹೆಚ್ಚಿಸಿರುವುದರಿಂದ ಪರಿಸರ ಮಲಿನಗೊಳ್ಳುತ್ತದೆ. ಹೀಗಾಗಿ ಸಾಧ್ಯವಾದಷ್ಟು ಅಜೈವಿಕ ತ್ಯಾಜ್ಯ ಉತ್ಪಾದಿಸುವುದಕ್ಕೆ ಕಡಿವಾಣ ಹಾಕಬೇಕು. ಆಗ ಮಾತ್ರ ಸ್ವಚ್ಛತಾ ಆಂದೋಲನಗಳು ಸಾರ್ಥಕತೆ ಪಡೆದು, ಸ್ವಚ್ಛ ಪರಿಸರ ಕಾಣಸಿಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ ಆಳ್ವ, ಸ್ಚಚತೆ ನಮ್ಮ ಕರ್ತವ್ಯ.
ಇದು ಮಾನವನ ದಿನಚರಿಯ ಭಾಗ ಹೀಗಾಗಿ ಸ್ವಚ್ಛತೆ ದಿನಂಪ್ರತಿ ನಡೆಯಬೇಕು. ಆಂದೋಲನದಲ್ಲಿ ಮಕ್ಕಳ ಭಾಗವಹಿಸುವಿಕೆ ನಾಗರೀಕ ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮೂಡುಬಿದ್ರೆ ಪುರಸಭೆಯ ಮುಖ್ಯ ಅಧಿಕಾರಿ ಇಂದು, ಸ್ವಚ್ಛತಾ ಆಂದೋಲನದ ಎಂಟು ಪ್ರಮುಖರು ಇದ್ದರು. ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ