ಆರೋಗ್ಯ ಭಾಗ್ಯಕ್ಕೆ ಬೇಕು ಯೋಗ - ಶರವು ರಾಘವೇಂದ್ರ ಶಾಸ್ತ್ರಿ

Upayuktha
0



ಮಂಗಳೂರು: ಮಂಗಳಾದೇವಿಯ ಶ್ರೀ ರಾಮಕೃಷ್ಣ ಮಠದಲ್ಲಿ ಡಿಸೆಂಬರ್‌ 7 ರಿಂದ ನಡೆಯುವ ಸಂಜೆಯ ಯೋಗ ಶಿಬಿರದ ಉದ್ಘಾಟನೆಯನ್ನು ಸ್ವಾಮಿ ರಘುರಾಮನಂದಜೀ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡುತ್ತಾ ರಾಮಕೃಷ್ಣ ಮಠದಲ್ಲಿ ಹಲವಾರು ವರ್ಷಗಳಿಂದ ನಿರಂತರ ಯೋಗ ಜರುಗುತ್ತಿದೆ. ಯೋಗವನ್ನು ನಿತ್ಯ ನಿರಂತರ ಅಭ್ಯಾಸ ಮಾಡಿದಾಗ ಹಲವಾರು ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು. ಯೋಗ ಎನ್ನುವ ಪದ ಸಂಸ್ಕೃತ ಮೂಲಧಾತುವಾದ “ಯುಜ್” ಎನ್ನುವ್ಯದರಿಂದ ಬಂದಿದ್ದು “ಕೂಡಿಸು ಚಿತ್ತವನ್ನು ನಿರ್ದೇಶಿಸಿ ಕೇಂದ್ರೀಕರಿಸು” ಎನ್ನುವ ಆಜ್ಞೆಗಳನ್ನು ಕೊಡುತ್ತದೆ. ನಿತ್ಯ ಸತ್ಯದೊಂದಿಗೆ ಆತ್ಮದ ಸಂಯೋಗ, ದ್ವಂದ್ವಗಳ ಗೆಲುವಿನಿಂದ ಏಳುವ ಕಲಬೆರಕೆಯಿಲ್ಲದ ಒಟ್ಟಾರೆ ಪರಮಾನಂದದ ಸ್ಥಿತಿಯ ಸಂಯೋಜನೆಯೇ ಯೋಗವಾಗಿದೆ. ಇತ್ತೀಚಿನ ದಿನಗಳಲ್ಲಿ ಯೋಗ ವಿದ್ಯೆಯನ್ನು ಅಭ್ಯಾಸ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಹೊಸತಾಗಿ ಯೋಗ ಕಲಿಯುವರ ಸಂಖ್ಯೆಯು ಹೆಚ್ಚಾಗುತ್ತಿದೆ. ಇದು ತುಂಬಾ ಹರ್ಷದಾಯಕವಾದ ವಿಷಯವಾಗಿದೆ.

ಮುಖ್ಯ ಅತಿಥಿಯಾಗಿ ಶರವು ಶ್ರೀ ರಾಘವೇಂದ್ರ ಶಾಸ್ತ್ರಿ [ಅನುವಂಶಿಕ ಆಡಳಿತ ಮೊಕ್ತೇಸರರು] ಮಾತನಾಡುತ್ತಾ ಹಲವಾರು ಕಾಯಿಲೆಗಳ ನಿಯಂತ್ರಣಕ್ಕೆ ಹಾಗೂ ಹತೋಟಿಗೆ ಯೋಗ ಸಹಕಾರಿ. ಯೋಗವು ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಆದ್ದರಿಂದ ಇದು ಒಂದು ಕಲೆ. ಜೀವನದ ಅತಿ ಕಷ್ಟಕರವಾದ ಸ್ಥಿತಿಯಗಳಲ್ಲೂ ಸಂತೋಷವಾಗಿ ಸಮಾನತೆಯಿಂದ ಎದುರಿಸುವಂತೆ ಜನರ ಯೋಚನೆಗಳನ್ನು ಉನ್ನತಗೊಳಿಸುತ್ತದೆ. ಜೀವನದಲ್ಲಿ ಸ್ನೇಹವನ್ನು ವೃದ್ಧಿಸಲು, ಏಕಾಗ್ರತೆ, ಭಕ್ತಿ, ತೃಪ್ತಿ, ಸಂತೋಷದ ಗುರಿಯನ್ನು ಸಾಧಿಸಲು ಹಾಗೂ ಆವಶ್ಯವಲ್ಲದವುಗಳನ್ನು ತೆಗೆದುಹಾಕಲು ಪ್ರಯತ್ನಿಸುವಂತೆ ಕಲಿಸುತ್ತದೆ. ಉತ್ತಮ ಹವ್ಯಾಸಗಳನ್ನು ವೃದ್ಧಿಸುವುದು ಹಾಗೂ ಸರಿಯಾದ ಜೀವನವನ್ನು ನಡೆಸುವುದು. ಯಾವುದೇ ಪ್ರತಿಫಲದ ಆಸೆಯಿಲ್ಲದೆ ತನ್ನ ಕರ್ತವ್ಯವನ್ನು ಮಾಡಬೇಕೆಂದು ಯೋಗವು ಬೋಧಿಸುತ್ತದೆ. ಜೀವನದ ಪ್ರಕ್ಷಬ್ಧತೆಯಲ್ಲಿ ಇದ್ದರೂ ನಿರಾಳವಾಗಿರುವಂತೆ  ಹಾಗೂ ಜೀವನದ ಪ್ರತಿದಿನದ ಒತ್ತಡ ಮತ್ತು ಘರ್ಷಣೆಯಿಂದ ಮುಕ್ತವಾಗಿ ಸೂಕ್ತವಾದ ರೀತಿಯಲ್ಲಿ ವರ್ತಿಸುವಂತೆ ಕಲಿಸುತ್ತದೆ. ಈಗಾಗಲೇ ನಮಗೆಲ್ಲಾ ತಿಳಿದಂತೆ ಯೋಗದಿಂದ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕವಾಗಿ ವಿಕಸನಗೊಳ್ಳಲು  ಸಹಕಾರಿಯಾಗುತ್ತದೆ ಮತ್ತು ಮನಸ್ಸಿಗೆ ಮುದ, ನೆಮ್ಮದಿ, ಶಾಂತಿ ದೊರಕುತ್ತದೆ. ನಿತ್ಯ ಯೋಗ ಅಭ್ಯಾಸದಿಂದ ಪದೇ ಪದೇ ಆರೋಗ್ಯ ಕೆಡುವುದು ತುಂಬಾ ಕಡಿಮೆಯಾಗುತ್ತದೆ. ದಿನಪೂರ್ತಿ ಮನಸ್ಸು ಉಲ್ಲಾಸದಿಂದಿರುತ್ತದೆ ಹಾಗೂ ಮನಸ್ಸು ಸಮಸ್ಥಿತಿಯಲ್ಲಿ ನೆಲೆಸಲು ಸಹಕಾರಿಯಾಗುತ್ತದೆ.

ಶಿಬಿರವನ್ನು ನಡೆಸುವ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರು ಪ್ರಸ್ತಾವಿಕ ನುಡಿಗಳನ್ನಾಡಿದರು. ಶಿಬಿರಕ್ಕೆ ಸುಮಾ, ಭಾರತೀ, ಕಾರ್ತಿಕ್, ಸುಭದ್ರ ಸಹಕರಿಸಿದರು. ಪ್ರಾರ್ಥನೆಯನ್ನು ಶ್ರೀ ಚಂದ್ರಹಾಸ ನೆರವೇರಿಸಿದರು. ನಿರೂಪಣೆಯನ್ನು ನಿವೃತ್ತ ಬ್ಯಾಂಕ್ ಮಾನೇಜರ್ ಶ್ರೀ ನಾಮ್‌ದೇವ್ ನಡೆಸಿದರು. ಸುಮಾರು 66 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದರು. ಶಿಬಿರದಲ್ಲಿ ಸರಳ ವ್ಯಾಯಾಮ, ಸೂರ್ಯನಮಸ್ಕಾರ, ಆಸನಗಳು, ಪ್ರಾಣಾಯಾಮ, ಧ್ಯಾನ ಹಾಗೂ ಮಂತ್ರ ಮುದ್ರೆಗಳನ್ನು ತಿಳಿಸಿಕೊಡಲಾಗುವುದು.

ಆಸಕ್ತರು ಸಂಜೆ 05:45 P.M. ರಿಂದ ನಡೆಸುವ ರಾಮಕೃಷ್ಣ ಮಠದ ಯೋಗ ಹಾಲ್‌ನಲ್ಲಿ ಭಾಗವಹಿಸಲು ಹೆಸರು ನೊಂದಾಯಿಸಿಕೊಳ್ಳಬಹುದು. ಆಸಕ್ತರು ಶಿಬಿರದಲ್ಲಿ ಭಾಗವಹಿಸಲು ಮಠವನ್ನು ಸಂಪರ್ಕಿಸಿರಿ.


-ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ

ನಿವೃತ್ತ ಸೀನಿಯರ್ ಹೆಲ್ತ್ ಇನ್ಸ್ಪೆಕ್ಟರ್, ಅಂತರರಾಷ್ಟೀಯ ಯೋಗ ತೀರ್ಪುಗಾರರು.

“ಪಾರಿಜಾತ”, ಸಂಖ್ಯೆ: 2-72/5,

ಬಿಷಪ್ ಕಾಂಪೌಂಡ್, 

ಯೆಯ್ಯಾಡಿ ಪದವು, ಅಂಚೆ: ಕೊಂಚಾಡಿ, 

ಮಂಗಳೂರು - 575 008 

ಮೊಬೈಲ್: 9448394987


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top