ಚೆಸ್ ಪಂದ್ಯಾಟದಲ್ಲಿ ವಿವೇಕಾನಂದ ಪ.ಪೂ. ಕಾಲೇಜ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Chandrashekhara Kulamarva
0



ಪುತ್ತೂರು: ಅಸ್ಸಾಂ ನ ಚಂದ್ರಪುರದಲ್ಲಿ ನಡೆದ 33ನೇ ವಿದ್ಯಾಭಾರತಿ ರಾಷ್ಟ್ರ ಮಟ್ಟದ ಚೆಸ್ ಪಂದ್ಯಾಟದಲ್ಲಿ ದಕ್ಷಿಣ ಮಧ್ಯ ಕ್ಷೇತ್ರವನ್ನು ಪ್ರತಿನಿಧಿಸಿದ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಕೈಝೆನ್‍ ಎಸ್(ಬಂಟ್ವಾಳದ ದೇವಸ್ಯ ಸೂರ್ಯನಾರಾಯಣ ಎನ್ ಕೆ ಮತ್ತು ಸುಮನ ಎಸ್‍ ಎನ್‍ ದಂಪತಿ ಪುತ್ರ) ಹಾಗೂ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಋತ್ವಿಕ್ ಸಾಯಿ ಗಣೇಶ್ (ಕುಂದಾಪುರ ತಾಲೂಕಿನ ಸಿದ್ದಾಪುರದ ಜ್ಯೋತಿ ಕೆ.ಸಿ ರವರ ಪುತ್ರ) ಇವರು ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ಗಳಿಸಿ ಸ್ಕೂಲ್‍ಗೇಮ್ಸ್ ಫೆಡರೇಷನ್‍ ಆಫ್‍ ಇಂಡಿಯಾ ನಡೆಸುವ ರಾಷ್ಟ್ರಮಟ್ಟದ ಚೆಸ್ ಪಂದ್ಯಾಟಕ್ಕೆ ಆಯ್ಕೆ ಆಗಿದ್ದಾರೆ.  




ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ|| ಜ್ಯೋತಿ ಮತ್ತು ಯತೀಶ್‍ ಇವರ ನೇತೃತ್ವದಲ್ಲಿ ಈ ವಿದ್ಯಾರ್ಥಿಗಳು ತರಬೇತಿಯನ್ನು ಪಡೆದಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.





إرسال تعليق

0 تعليقات
إرسال تعليق (0)
To Top