ಮಂಗಳೂರು : ಕಾಸರಗೋಡಿನ ಬದಿಯಡ್ಕದಲ್ಲಿರುವ ಸುಪ್ರಸಿದ್ಧ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ವಾರ್ಷಿಕ ಧನು ಸಂಕ್ರಮಣ ಮಹೋತ್ಸವವು ದಶಂಬರ 16 ತಾರೀಕಿನಂದು ಬಹಳ ವಿಜೃಂಭಣೆಯಿಂದ ವೈಭವಪೂರಿತವಾಗಿ ಜರುಗಿತು. ಸಹಸ್ರಾರು ಭಕ್ತರು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾದರು.
ಮಧ್ಯರಾತ್ರಿ 12.30 ಕ್ಕೆ ಶ್ರೀ ದೇವರಿಗೆ ಬೆಡಿ ಸೇವೆ ಬಹಳ ಅದ್ದೂರಿಯಾಗಿ ಭಕ್ತಾಭಿಮಾನಿಗಳ ಸಮ್ಮುಖದಲ್ಲಿ ನಡೆಯಿತು. ಶ್ರೀ ದೇವರ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 9.00 ರಿಂದ 1.00 ರ ತನಕ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಸಂಸ್ಥೆಯ ವತಿಯಿಂದ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮವು ನಯನ ಮನೋಹರವಾಗಿ ನಡೆಯಿತು .
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರತಿಭಾನ್ವಿತ ಕಲಾವಿದರಾದ ಗುರುರಾಜ್ ಕಾಸರಗೋಡು, ಡಾ ವಾಣಿಶ್ರೀ ಕಾಸರಗೋಡು, ಸನುಷ ಸುನಿಲ್, ಸನುಷಾ ಸುಧಾಕರನ್, ಭಾಸ್ಕರ್ ಅಡೂರ್, ಚುಕ್ಕಿ ವಿಟ್ಲ, ಅಹನಾ ಎಸ್ ರಾವ್, ಹರೀಶ್ ಪಂಜಿಕಲ್ಲು, ತನ್ವಿ ಶೆಟ್ಟಿ, ಸ್ವಾತಿ, ಪೂಜಾ ಶ್ರೀ,ಕೀರ್ತಿ,ಧನ್ವಿತ್ ಕೃಷ್ಣ, ಧನ್ಯ ಬೆಳ್ಳಿಗೆ, ಪ್ರದ್ಯುಮ್ನ ಶರ್ಮಾ, ಶ್ರದ್ಧಾ ಎ ಎಸ್, ಕೃತ್ತಿಕಾ, ಲಾವಣ್ಯ,ವರ್ಷಾ ಬಿ, ನಿರೀಕ್ಷಾ ಸಿ ಎಚ್, ಲಿಕಿತಾ, ವಿಜಿತಾ ಕೇಶವನ್, ಪ್ರಭಾವತಿ ಕೆದಿಲಾಯ, ಉಮಾವತಿ, ಸಂಧ್ಯಾ, ತೇಜಸ್ವಿನಿ, ಕೃಪೇಶ್, ಜೋಸ್ನಾ, ಶರಣ್ಯ, ಉಷಾ ಸುಧಾಕರನ್,ಕಾವ್ಯ, ರೇವತಿ, ರಾಧಿಕಾ, ಭುವನ, ರಚಿತಾ, ಪ್ರಖ್ಯಾತ್ ಭಟ್ , ಅರ್ಚನಾ, ವಿಷ್ಣು ಸುಧಾಕರನ್, ಅರ್ಜುನ್, ಕೃಷ್ಣ ಕಿಶೋರ್,ಭುವನ್, ಅತುಲ್, ರಕ್ಷಿತಾ ಹಾಗೂ ಸದಾಶಿವ ಪೈಕ ಮುಂತಾದವರು ತಮ್ಮ ಪ್ರತಿಭಾ ಕೌಶಲ್ಯವನ್ನು ಪ್ರದರ್ಶಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು.
ಡಾ ವಾಣಿಶ್ರೀ ಕಾಸರಗೋಡು ಇವರು ಸಂಪೂರ್ಣ ಕಾರ್ಯಕ್ರಮದ ನಿರೂಪಣೆ ಮಾಡಿದರು. ದೇವಸ್ಥಾನದ ವತಿಯಿಂದ ಶ್ರೀ ದೇವರ ಪ್ರಸಾದವನ್ನು ನೀಡಿ ಸಂಸ್ಥೆಯನ್ನು ಗೌರವಿಸಿದರು.