ಸ್ಪರ್ಧಾತ್ಮಕ ಪರೀಕ್ಷೆಗೆ ಅಲ್ಪಸಂಖ್ಯಾತರು ಪ್ರಯತ್ನಿಸಬೇಕು: ಸುಹಾನ ಸಯ್ಯದ್

Upayuktha
0

ಮಂಗಳೂರು: ರಾಷ್ಟ್ರೀಯ ಭಾವೈಕ್ಯತಾ ಸಪ್ತಾಹ- 2022ರ ಭಾಗವಾಗಿ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಲ್ಲಿ ಶುಕ್ರವಾರ ವಾಣಿಜ್ಯ ಸಂಘ ಮತ್ತು ಗ್ರಾಹಕ ವೇದಿಕೆ ವತಿಯಿಂದ ʼಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮʼ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. 


ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮಂಗಳೂರಿನ ಬರಾಕ ಇಂಟರ್ನ್ಯಾಷನಲ್ ಕಾಲೇಜಿನ ಉಪನ್ಯಾಸಕಿ ಸುಹಾನ ಸಯ್ಯದ್ ಎಂ ರವರು ಪ್ರಧಾನಿಯವರ ಯೋಜನೆಯ ಬಗ್ಗೆ ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ  ತಿಳಿ ಹೇಳಿದರು. ವಿದ್ಯಾರ್ಥಿ ವೇತನ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಹಾಗೂ ಅದರ ಅನುಕೂಲಗಳ  ಬಗ್ಗೆ ಮಾಹಿತಿ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ. ಅನಸೂಯ ರೈ ಮಾತನಾಡಿ, ಸಂವಿಧಾನ ಆಚರಣೆಯ ಅಂಗವಾಗಿ ನವಂಬರ್ 26ರಂದು ವಿದ್ಯಾರ್ಥಿಗಳಿಂದ ಪ್ರಮಾಣ ವಚನ ಮಾಡಿಸುವ ಮೂಲಕ  ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿಸುವ ಪ್ರಯತ್ನ ನಡೆದಿದೆ. ಅಲ್ಲದೆ ಕಾಲೇಜಿನಲ್ಲಿ ಹಲವಾರು  ಕಾರ್ಯಕ್ರಮಗಳನ್ನು ಸರಳವಾಗಿ ನೆರೆವೆರಿಸಿದ್ದೇವೆ, ಎಂದರು. 


ಕಾರ್ಯಕ್ರಮದ ಸಂಯೋಜಕ, ವಾಣಿಜ್ಯ ಸಂಘ ಮತ್ತು ಗ್ರಾಹಕ ವೇದಿಕೆಗಳ ಸಹಾಯಕ ನಿರ್ದೇಶಕ ಡಾ. ಎ ಸಿದ್ಧಿಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ನಿಧಿಶ್ರೀ ಪ್ರಾರ್ಥಿಸಿ, ವಿಭಾಗದ ಉಪನ್ಯಾಸಕಿ ಡಾ. ಸೌಮ್ಯ ಪ್ರವೀಣ್.ಕೆ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕಿ ಪೂಜಾರಿ ಜಯಶ್ರೀ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿಗಳು, ಬೋಧಕ- ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top