ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಂಬೂರಿಯಲ್ಲಿ ನೀರಡಿಕೆಗೆ 'ಮಡಿಕೆ ಸೋಡಾ..!'

Upayuktha
0

ಒಂದೆಡೆ ಉರಿ ಬಿಸಿಲು, ಮತ್ತೊಂದೆಡೆ ಆಗಮಿಸಿದ ಜನತೆಗೆ ಎಲ್ಲಾ ಮಳಿಗೆಗಳಿಗೂ ಭೇಟಿ ನೀಡಿ ಆನಂದಿಸಬೇಕೆಂಬುವ ಹಂಬಲ. ಇಂತಹ ರಣ ಬಿಸಿಲಲ್ಲಿ ಆರೋಗ್ಯಕರವಾಗಿರುವ ತಂಪು ಪಾನೀಯವೊಂದು ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಂಬೂರಿಯಲ್ಲಿ ಜನರ ನೀರಡಿಕೆಯನ್ನು ತೀರಿಸುತ್ತಿತ್ತು. ನೈಸರ್ಗಿಕ ಹಾಗೂ ಅರೋಗ್ಯಕರವಾದ ಪದಾರ್ಥಗಳನ್ನು ಬಳಸಿ ಮಣ್ಣಿನ ಮಡಿಕೆಯಲ್ಲಿ ಮಾಡಿದ ಪಾನೀಯ ಗ್ರಾಹಕರನ್ನು ದಣಿವನ್ನು ಹೋಗಲಾಡಿಸುತ್ತಿತ್ತು.


ಆಹಾರ ಮೇಳದಲ್ಲಿ ಬಹಳ ಡಿಮ್ಯಾಂಡ್ ಪಡೆದ 'ಭುವಿ ನ್ಯಾಚುರಲ್ ಮಡಿಕೆ ಸೋಡಾ ಶರಬತ್’ ಮಳಿಗೆಯಲ್ಲಿ ಸಣ್ಣ ಮಡಿಕೆಯೊಳಗೆ ಕರಿಮೆಣಸು, ಶುಂಠಿ, ಪುದೀನಾ, ಲಿಂಬೆ, ಹಸಿಮೆಣಸು, ಉಪ್ಪು ಹಾಗೂ ಸಕ್ಕರೆಯನ್ನು ಹಾಕಿ, ಆ ಮಿಶ್ರಣಕ್ಕೆ ಸೋಡಾವನ್ನು ಬೆರೆಸಿ ಕುಡಿಯಲು ನೀಡುತ್ತಾರೆ. ಸೋಡಾದ ಬಾಟಲಿಯನ್ನು ತೆರೆಯುವ ಪರಿಯನ್ನು ನೋಡುವಾಗ ಬಹಳ ಬೆರಗು ಉಂಟಾಗುತ್ತದೆ. ಚುರುಕಿನಿಂದ ವೇಗವಾಗಿ ಮಡಿಕೆಯಲ್ಲಿ ಪಾನೀಯ ಸಿದ್ಧಗೊಳ್ಳುವಾಗ ಕುಡಿಯುದೇ ಇರಲು ಮನಸ್ಸಾದಿತೇ..! ಈ ಶರಬತ್ತು ಬಾಯಾರಿಕೆಯನ್ನು ತಣಿಸುವುದರ ಜತೆಗೆ ಆರೋಗ್ಯದ ದೃಷ್ಠಿಯಲ್ಲಿಯೂ ಪ್ರಯೋಜನಕಾರಿ.


- ಕವಿತಾ 

ಆಳ್ವಾಸ್ ಪತ್ರಿಕೋದ್ಯಮ ವಿದ್ಯಾರ್ಥಿನಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top