ವಿವಿ ಕಾಲೇಜು: ವಿಜ್ಞಾನಿ ಲೂಯಿಸ್ ಪಾಶ್ಚರ್ ಜನ್ಮದಿನಾಚರಣೆ

Upayuktha
0

ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಐಕ್ಯೂಎಸಿ ಸಹಯೋಗದೊಂದಿಗೆ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ವಿಜ್ಞಾನಿ ಲೂಯಿಸ್ ಪಾಶ್ಚರ್ ಅವರ ಜನ್ಮದಿನವನ್ನು ಮಂಗಳವಾರ ಸಂಜೆ ಆನ್‌ಲೈನ್‌ನಲ್ಲಿ ಆಚರಿಸಲಾಯಿತು.


ಸಸ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಾದ ವರ್ಷಾ, ಅಶ್ನಾ ಮತ್ತು ಲೇಖನ್, ಪಾಶ್ಚರ್‌ ಅವರ ಇತಿಹಾಸ ಮತ್ತು ಕೊಡುಗೆಗಳ ಕುರಿತು ಮಾತನಾಡಿದರು. ಸೂಕ್ಷ್ಮಾಣುಜೀವಿಗಳು ವಸ್ತುಗಳು ಕೊಳೆಯುವಂತೆ ಮಾಡುತ್ತವೆ ಮತ್ತು ರೋಗವನ್ನು ಉಂಟುಮಾಡಬಲ್ಲವು, ಎಂದು ಕಂಡುಕೊಂಡರು. ಅವರು ಪಾಶ್ಚರೀಕರಣ ಪ್ರಕ್ರಿಯೆಯನ್ನು ಹುಟ್ಟುಹಾಕಿದರು. ಈ ಮೂಲಕ ಅವರು ಫ್ರಾನ್ಸ್‌ನಲ್ಲಿ ಬಿಯರ್, ವೈನ್ ಮತ್ತು ರೇಷ್ಮೆ ಉದ್ಯಮಗಳನ್ನು ಉಳಿಸಿದರು ಮತ್ತು ಆಂಥ್ರಾಕ್ಸ್ ಮತ್ತು ರೇಬೀಸ್ ವಿರುದ್ಧ ಲಸಿಕೆಗಳನ್ನು ಅಭಿವೃದ್ಧಿಪಡಿಸಿದರು, ಎಂದರು.


ಐಕ್ಯೂಎಸಿ ಸಂಯೋಜಕ ಡಾ.ಸಿದ್ದರಾಜು ಎಂ.ಎನ್ ಅವರು ಮಾತನಾಡಿ, ವಿಶ್ವದ ಎಲ್ಲ ವಿಜ್ಞಾನಿಗಳ ಪೈಕಿ ಮಾನವಕುಲಕ್ಕೆ ಕೊಡುಗೆ ನೀಡಿದ ವಿಜ್ಞಾನಿಗಳ ಪಟ್ಟಿಯಲ್ಲಿ ಪಾಶ್ಚರ್ ಮೊದಲ ಸ್ಥಾನದಲ್ಲಿದ್ದಾರೆ. ಈ ದಿನ ಅವರಿಗೆ ಕೃತಜ್ಞತೆ ಸಲ್ಲಿಸಲು ಒಂದು ಅವಕಾಶವಾಗಿದೆ ಎಂದರು.


ಕಾರ್ಯಕ್ರಮ ಅರುಣಾ ಅವರ ಸ್ವಾಗತ, ಪ್ರಗತಿ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಮೆಲ್ರೀನ್ ಮತ್ತು ಸಾರಿಕಾ ಕಾರ್ಯಕ್ರಮ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top