ಡಿ.18ರಂದು ಮುಡಿಪು ಭಾರತಿ ಶಾಲೆಯಲ್ಲಿ “ಜೀವ ರಕ್ಷಣಾ ಕೌಶಲ್ಯ” ಉಚಿತ ಕಾರ್ಯಾಗಾರ

Upayuktha
0


ಮುಡಿಪು: ಮುಡಿಪು ಶ್ರೀ ಭಾರತಿ ಶಾಲೆ ಹಳೆ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ಶಾಲೆಯ ಹಿರಿಯ ಹಳೆ ವಿದ್ಯಾರ್ಥಿ ಜಗದೀಶ ಅಡಪ ಅವರ ನೇತೃತ್ವದಲ್ಲಿ ಕೌಟುಂಬಿಕ ಸುರಕ್ಷತೆಯ ಕುರಿತು ಮಾಹಿತಿ ನೀಡುವ ಸುರಕ್ಷತೆಯ ಪಾಲನೆ ಜೀವನದ ಲಾಲನೆ: ಜೀವ ರಕ್ಷಣಾ ಕೌಶಲ್ಯ” ಕಾರ್ಯಾಗಾರ ಡಿ.18ರಂದು ಆದಿತ್ಯವಾರ ಅಪರಾಹ್ನ 2.30ರಿಂದ ಸಂಜೆ 5.30ರ ತನಕ ಮುಡಿಪು ಭಾರತಿ ಶಾಲೆಯಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಭಾರತಿ ಶಾಲೆಯ ಎಲ್ಲ ಹಳೆ ವಿದ್ಯಾರ್ಥಿಗಳುಹಳೆ ವಿದ್ಯಾರ್ಥಿಗಳ ಕುಟುಂಬದವರುಪೋಷಕರುಹಾಗೂ ಎಲ್ಲ ವಿದ್ಯಾಭಿಮಾನಿಗಳಿಗೆ ಪಾಲ್ಗೊಳ್ಳಲು ಅವಕಾಶ ಇದೆ. ನಿತ್ಯ ಬದುಕಿನಲ್ಲಿ ಎದುರಾಗುವ ಬೆಂಕಿ ಆಕಸ್ಮಿಕಗಳ ನಿರ್ವಹಣೆ, ಆರೋಗ್ಯ ಸಂಬಂಧಿ ಪ್ರಥಮ ಚಿಕಿತ್ಸೆಗಳು, ಮುಂಜಾಗ್ರತೆ, ಆತ್ಮವಿಶ್ವಾಸ ವೃದ್ಧಿಯಂತಹ ಜೀವನಾಶ್ಯಕ ವಿಚಾರಗಳ ಕುರಿತು ಪ್ರಾತ್ಯಾಕ್ಷಿಕೆ ಸಹಿತ ಈ ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಗುತ್ತದೆ. ಜೀವನ ರಕ್ಷಣಾ ಕೌಶಲ್ಯ ತರಬೇತಿದಾರರಾಗಿರುವ ಜಗದೀಶ ಅಡಪ ಅವರು ಚೆನ್ನೈಯಲ್ಲಿ ನೆಲೆಸಿದ್ದು, ಈ ತನಕ ನೂರಾರು ಇಂತಹ ಕಾರ್ಯಾಗಾರಗಳನ್ನು ಸಾಮಾಜಿಕ ಕಳಕಳಿಯಿಂದ ನಡೆಸಿಕೊಟ್ಟಿದ್ದು, ಅವರು ಚೆನ್ನೈಯ ಉಷಾ ಫೈರ್ ಸೆಫ್ಟಿ ಎಕ್ವಿಪ್ಮೆಂಟ್ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.


ಡಿ.18ರಂದು ನಡೆಯುವ ಕಾರ್ಯಾಗಾರ ಸಂಪೂರ್ಣ ಉಚಿತವಾಗಿದ್ದು, ಎಲ್ಲ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಭಾರತಿ ಶಾಲೆ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಿಶ್ಚಲ್ ಶೆಟ್ಟಿ, ಮುಖ್ಯೋಪಾಧ್ಯಾಯ ಕೆ.ರಾಮಕೃಷ್ಣ ಭಟ್ ಹಾಗೂ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಕೆ.ಆರ್.ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top