ಪ್ರಣವಾಂಜಲಿ ಮಕ್ಕಳ ನೃತ್ಯ ಹಬ್ಬ ನಾಳೆ ಮಲ್ಲೇಶ್ವರದಲ್ಲಿ

Upayuktha
0

ಬೆಂಗಳೂರು: ಪ್ರಣವಾಂಜಲಿ ಅಕಾಡೆಮಿ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸಂಸ್ಥೆಯು ಮಕ್ಕಳಿಗಾಗಿ ನಡೆಸುತ್ತಿರುವ ವಿಶಿಷ್ಟ ವಿನೂತನ ವೈವಿಧ್ಯಮಯ ನೃತ್ಯ ಹಬ್ಬವನ್ನು ನಗರದ ಮಲ್ಲೇಶ್ವರದ 14ನೇ ಅಡ್ಡರಸ್ತೆಯಲ್ಲಿರುವ ಸೇವಾ ಸದನದಲ್ಲಿ ಡಿಸೆಂಬರ್ 31 ರಂದು, ಶನಿವಾರ ಬೆಳಗ್ಗೆ 9 ಗಂಟೆಗೆ ಏರ್ಪಡಿಸಲಾಗಿದೆ.

ಕಾರ್ಯಕ್ರಮದಲ್ಲಿ ಜತಿನ್ ಅಕಾಡೆಮಿ ಆಫ್ ಡಾನ್ಸ್ ಸಂಸ್ಥೆಯಿಂದ ಕೂಚಿಪುಡಿ, ವೈಷ್ಣವಿ ನಾಟ್ಯ ಶಾಲಾ ಸಂಸ್ಥೆಯಿಂದ ಭರತನಾಟ್ಯ, ನೃತ್ಯ ಧಾಮ ಟೆಂಪಲ್ ಆಫ್ ಫೈನ್ ಆರ್ಟ್ಸ್ ಸಂಸ್ಥೆಯಿಂದ ಮೋಹಿನಿಅಟ್ಟಂ, ಕಪರ್ಧಿನಿ ಸ್ಕೂಲ್ ಆಫ್ ಡಿವೈನ್ ಡ್ಯಾನ್ಸಿಂಗ್ ಸಂಸ್ಥೆಯಿಂದ ಭರತನಾಟ್ಯ, ನಾಟ್ಯ ತರಂಗ ನೃತ್ಯಾಲಯ ಸಂಸ್ಥೆಯಿಂದ ಭರತನಾಟ್ಯ, ತಮೋಹ ಆರ್ಟ್ಸ್ ಸಂಸ್ಥೆಯ ವತಿಯಿಂದ ಕುಮಾರಿ ಪಿ ಆದ್ಯ ಮಯ್ಯ ಭರತನಾಟ್ಯವನ್ನು ಹಾಗೂ ಪ್ರಣವಾಂಜಲಿ ಅಕಾಡೆಮಿ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸಂಸ್ಥೆಯ ಮಕ್ಕಳಿಂದ ಭರತನಾಟ್ಯ ನೃತ್ಯ ಪ್ರದರ್ಶನಗಳಿವೆ.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಆರ್ ಚಂದ್ರಶೇಖರ್, ಬೆಂಗಳೂರು ನಗರ ಜಿಲ್ಲೆ, ವಿದುಷಿ ಶ್ರೀಮತಿ ಪದ್ಮಿನಿ ಅಚ್ಚಿ, ನಿರ್ದೇಶಕಿ ಅಚ್ಚಿ ಕ್ಲಾಸಿಕಲ್ ಡಾನ್ಸ್ ಸೆಂಟರ್ ಹಾಗೂ ವಿದುಷಿ ಶ್ರೀಮತಿ ಸ್ನೇಹ ಕಪ್ಪಣ, ನಿರ್ದೇಶಕಿ ಭ್ರಮರಿ ಡಾನ್ಸ್ ತಂಡದವರು ಆಗಮಿಸಲಿದ್ಧಾರೆ ಎಂದು ಪ್ರಣವಾಂಜಲಿ ಸಂಸ್ಥೆಯ ನಿರ್ದೇಶಕಿ ವಿದುಷಿ ಶ್ರೀಮತಿ ಪವಿತ್ರ ಪ್ರಶಾಂತ್ ರವರು ತಿಳಿಸಿದ್ಧಾರೆ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top