ಬೆಂಗಳೂರಿನಲ್ಲಿ ವಿಶೇಷವಾಗಿ ಕ್ರಿಸ್ಮಸ್‌ ಆಚರಿಸಿದ ಆರ್ಕಿಡ್ಸ್ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು

Upayuktha
0

 


ಬೆಂಗಳೂರು : ಕ್ರಿಸ್ಮಸ್‌, ಪರಸ್ಪರ  ಸಂಭ್ರಮ  ಹಾಗೂ ಖುಷಿಯನ್ನು ಹಂಚುವ ಹಬ್ಬ . ಇದರ ಅಂಗವಾಗಿ ಆರ್ಕಿಡ್ಸ್‌ ಅಂತಾರಾಷ್ಟ್ರೀಯ ಶಾಲೆ, ಕಾಡುಗೋಡಿ ಶಾಖೆಯ ವಿದ್ಯಾರ್ಥಿಗಳು  ಸೇವಾ ಕೈಂಕರ್ಯದಲ್ಲಿ ಪಾಲ್ಗೊಂಡರು. ಆರ್ಕಿಡ್ಸ್‌ ವಿದ್ಯಾರ್ಥಿಗಳು  ಸರಕಾರಿ ಪ್ರಾಥಮಿಕ ಶಾಲೆ ಸೀಗೇಹಳ್ಳಿಯ ವಿದ್ಯಾರ್ಥಿಗಳಿಗೆ ಔತಣಕೂಟವನ್ನು ಆಯೋಜಿಸಿ, ಫ್ರೆಂಡ್‌ಶಿಪ್ ಬ್ಯಾಂಡ್ ಕಟ್ಟಿ ಸ್ವಾಗತಿಸಿದರು. ಹಲವು ಚಟುವಟಿಕೆಗಳಲ್ಲಿ ಪಾಲ್ಗೊಂಡ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ, ಆರ್ಕಿಡ್ಸ್‌ ವಿದ್ಯಾರ್ಥಿಗಳು ನೋಟುಪುಸ್ತಕ, ಆಟಿಕೆಗಳನ್ನು ಕ್ರಿಸ್ಮಸ್‌ ಉಡುಗೊರೆಯಾಗಿ ನೀಡಿದರು.


ಕೆ.ಆರ್.ಪುರಂನಲ್ಲಿರುವ ಸಾಯಿಕೃಪಾ ಚಾರಿಟೇಬಲ್‌ ಟ್ರಸ್ಟ್‌ ನಡೆಸುವ ವೃದ್ಧಾಶ್ರಮಕ್ಕೆ ಭೇಟಿ ನೀಡಿದ ಆರ್ಕಿಡ್ಸ್‌ ವಿದ್ಯಾರ್ಥಿಗಳು, ಅಲ್ಲಿರುವ ಹಿರಿಯ ನಿವಾಸಿಗಳಿಗೆ ಕಂಬಳಿ, ಸ್ವೆಟರ್‌, ದೈನಂದಿನ ಬಳಕೆಯ ಸಾಮಾಗ್ರಿಗಳು ಹಾಗೂ ಆಹಾರ ಪೊಟ್ಟಣಗಳನ್ನು ವಿತರಿಸಿದರು.


ಈ ಸಂದರ್ಭದಲ್ಲಿ ಸಾಯಿಕೃಪಾ ಚಾರಿಟೇಬಲ್‌ ಟ್ರಸ್ಟ್‌ನ ಮೇಲ್ವಿಚಾರಕ ಶಶಿ, ಕಾಡೋಗೋಡಿ ಶಾಖೆಯ ಪ್ರಾಂಶುಪಾಲೆ ಅಮಿತಾ ಭಾನು, ವಿದ್ಯಾರ್ಥಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. 


إرسال تعليق

0 تعليقات
إرسال تعليق (0)
To Top