ಪುತ್ತೂರು: AU Creations ನಿರ್ಮಾಣದಲ್ಲಿ ಹಾಗೂ ಅಚಲ್ ಉಬರಡ್ಕ ಅವರ ಸಾಹಿತ್ಯ ಮತ್ತು ನಿರ್ದೇಶನದಲ್ಲಿ ಹೊಸ ಆಲ್ಬಮ್ ಸಾಂಗ್ ಮೂಡಿಬಂದಿದ್ದು, ಇದರ ಸಂಗೀತವನ್ನು ಅಶ್ವಿನ್ ಬಾಬಣ್ಣ ಮಾಡಿದ್ದು ಶರತ್ ಕೆ ಎನ್ ಇವರು ಹಾಡಿರುತ್ತಾರೆ.
ಈ ಆಲ್ಬಮ್ ಸಾಂಗ್ ನ ಛಾಯಾಗ್ರಹಣ ಮತ್ತು ಸಂಕಲನವನ್ನು ಪ್ರಸೀದ ಕೃಷ್ಣ ಇವರು ಮಾಡಿದ್ದು, ಈ ಆಲ್ಬಮ್ ಸಾಂಗ್ ನಲ್ಲಿ ಗುರು ಉಬರಡ್ಕ ಮತ್ತು ಶ್ವೇತ ಲಕ್ಷ್ಮಿ ಕೆ, ಮುಖ್ಯಪಾತ್ರದಲ್ಲಿ ಮಿಂಚಿದ್ದಾರೆ ಮಾತ್ರವಲ್ಲದೆ, ರಾಮನಾಥ ಶೆಣೈ, ಜಗತ್ ಶಾಸ್ತ್ರಿ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.
ಕೀರ್ತನ ಶ್ರೀ ಮಣಿಮುಂಡ ಇವರು ಕಾಸ್ಟ್ಯೂಮ್ ಡಿಸೈನ್ ಮಾಡಿದ ಸಾಂಗ್ ನ ಚಿತ್ರೀಕರಣ ಪೂರ್ಣಗೊಂಡಿದ್ದು, ಟೈಟಲ್ ಪೋಸ್ಟರನ್ನು ಶಾಂತಿನಗರದ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಯು ಜಿ ರಾಧ ಇವರು ಬಿಡುಗಡೆಗೊಳಿಸಿದ್ದು ನವೆಂಬರ್ 24 ರಂದು ಟೀಸರ್ ಬಿಡುಗಡೆಯಾಗಿದ್ದು ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ. ಡಿಸೆಂಬರ್ 02 ರಂದು ಆಲ್ಬಮ್ ಸಾಂಗ್ ನ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ಗುರು ಉಬರಡ್ಕ ಅವರ ಸ್ವಗೃಹದಲ್ಲಿ ನಿನ್ನ ಸಂಜೆ 'ಧನರಾಜ್ ಆಚಾರ್' ಯುಟುಬ್ ಚಾನಲ್ ಮೂಲಕ ಜನರನ್ನು ನಗಿಸುತ್ತಾ ಕರ್ನಾಟಕದದ್ಯಾಂತ ಚಿರ ಪರಿಚಿತವಾದ ಕುಟುಂಬದವರದ ಜಗದೀಶ್ ಆಚಾರ್ಯ, ಕಿಶೋರ್ ಕುಮಾರ್, ರಾಜೇಶ್ ಕಲ್ಲೇಗ, ಸೂರಜ್ ಆಚಾರ್ಯ, ಶ್ರವಣ್ ಕುಮಾರ್ ಅವರು ರಿಲೀಸ್ ಮಾಡಿದರು.
ಈ ಸಂದರ್ಭದಲ್ಲಿ ಕುಟುಂಬಸ್ಥರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಮಂಜುನಾಥ್ ಜೋಡುಕಲ್ಲು ಹಾಗೂ ಸ್ವಾಗತ ಮತ್ತು ಧನ್ಯವಾದವನ್ನು ಸಂದೀಪ್ ಎಸ್ ಮಂಚಿಕಟ್ಟೆ ಇವರು ಮಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ