ರಾಷ್ಟ್ರೀಯ ಸೀನಿಯರ್ ಬಾಲ್‍ಬ್ಯಾಡ್ಮಿಂಟನ್ – ಕರ್ನಾಟಕ ಪುರುಷರಿಗೆ ಕಂಚು : ಮಹಿಳೆಯರು ರನ್ನರ್ಸ್‍ಅಪ್

Upayuktha
0


ಬೆಂಗಳೂರು : ಬಾಲ್‍ಬ್ಯಾಡ್ಮಿಂಟನ್ ಫೆಡರೇಶನ್‍ ಆಫ್‍ ಇಂಡಿಯಾ ಹಾಗೂ ಕೇರಳ ಬಾಲ್‍ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಶ್ರಯದಲ್ಲಿ ಕೇರಳದ ಕೊಲ್ಲಂನಲ್ಲಿ ಡಿ.24ರಿಂದ 28ರವರೆಗೆ ನಡೆದ 68ನೇ ರಾಷ್ಟ್ರೀಯ ಸೀನಿಯರ್ ಬಾಲ್‍ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಕರ್ನಾಟಕ ಮಹಿಳೆಯರ ತಂಡ ರನ್ನರ್ಸ್‍ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು ಹಾಗೂ ಡಬಲ್ಸ್‍ನಲ್ಲಿ ಚಿನ್ನದ ಪದಕವನ್ನುಪಡೆದುಕೊಂಡಿತು. ಕರ್ನಾಟಕ ಪುರುಷರ ತಂಡಕಂಚಿನ ಪದಕವನ್ನು ಪಡೆದುಕೊಂಡಿತು.


ಕರ್ನಾಟಕ ಪುರುಷರ ತಂಡ ಕೇರಳ ತಂಡವನ್ನು 35-29, 35-26 ಅಂಕಗಳಿಂದ ಮಣಿಸಿ ಕಂಚಿನ ಪದಕವನ್ನು ಪಡೆದುಕೊಂಡಿತು.ಪುರುಷರ ವಿಭಾಗದ ಸೆಮಿ ಫೈನಲ್ಸ್‍ನಲ್ಲಿ ಕರ್ನಾಟಕ ಪುರುಷರತಂಡ ತಮಿಳುನಾಡು ತಂಡದೊಂದಿಗೆ 35-30, 26-35, 31-35 ಅಂಕಗಳಿಂದ ಪರಾಭವಗೊಂಡಿತು.ಇಂಡಿಯನ್‍ ರೈಲ್ವೇಸ್‍ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.


ಮಹಿಳೆಯರ ವಿಭಾಗದ ಸೆಮಿ ಫೈನಲ್ಸ್‍ನಲ್ಲಿ ಕರ್ನಾಟಕ ಮಹಿಳೆಯರ ತಂಡ ಆಂಧ್ರಪ್ರದೇಶ ತಂಡವನ್ನು 35-11, 35-24 ಅಂಕಗಳಿಂದ ಸೋಲಿಸಿ ಫೈನಲ್ಸ್‍ಗೆ ಅರ್ಹತೆಯನ್ನು ಪಡೆದುಕೊಂಡಿತ್ತು.ಫೈನಲ್ಸ್‍ನಲ್ಲಿ ಕರ್ನಾಟಕ ಮಹಿಳಾ ತಂಡ ತಮಿಳುನಾಡು ತಂಡದೊಂದಿಗೆ 38-36, 28-35, 32-35 ಅಂಕಗಳಿಂದ ಪರಾಭವಗೊಂಡುರನ್ನರ್ಸ್‍ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು.


ಮಹಿಳೆಯರ ಡಬಲ್ಸ್‍ನಲ್ಲಿ ಕರ್ನಾಟಕ ಮಹಿಳೆಯರ ತಂಡ ತಮಿಳುನಾಡು ತಂಡವನ್ನು 36-34, 35-32 ಅಂಕಗಳಿಂದಪರಾಭವಗೊಳಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.


ಪುರುಷರ ವಿಭಾಗದಲ್ಲಿ ಚೇತನ್.ಬಿ.ಕೆ. ಹಾಗೂ ಮಹಿಳೆಯರ ವಿಭಾಗದಲ್ಲಿ ಜಯಲಕ್ಷ್ಮಿ.ಜಿ. “ಸ್ಟಾರ್‍ ಆಫ್‍ಇಂಡಿಯಾ” ಪ್ರಶಸ್ತಿಯನ್ನು ಪಡೆದುಕೊಂಡರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top