ಮಂಗಳೂರು ವಿವಿ: ಎನ್ಇಪಿ ಮೊದಲ ಸೆಮಿಸ್ಟರ್‌ ಫಲಿತಾಂಶ ಪ್ರಕಟ

Upayuktha
0

ಮಂಗಳೂರು: ವಿಶ್ವವಿದ್ಯಾನಿಲಯವು ಎನ್‌ಇಪಿ ಮೊದಲ ಸೆಮಿಸ್ಟರ್‌ ಪರೀಕ್ಷೆಯ ಫಲಿತಾಂಶವನ್ನು ಡಿಸೆಂಬರ್‌ 24, 2022 ರಂದು ಯುಯುಸಿಎಂಎಸ್‌ ಪೋರ್ಟಲ್‌ನಲ್ಲಿ ಪ್ರಕಟಿಸಿದೆ. ಸಮಸ್ಯೆಯಿರುವ ಉಳಿಕೆಯಾದ ಫಲಿತಾಂಶವನ್ನು ಡಿಸೆಂಬರ್‌ 29 ರಂದು ಪ್ರಕಟಿಸಲಾಗುವುದು.


ಮೌಲ್ಯಮಾಪನ ಕಾರ್ಯವು ಹಂತಹಂತವಾಗಿ ಪೂರ್ಣಗೊಳ್ಳುತ್ತಿದ್ದು ಈಗಾಗಲೇ ಸ್ನಾತಕ ಪದವಿಯ ಆರನೇ ಸೆಮಿಸ್ಟರ್‌ನ ಫಲಿತಾಂಶ ನೀಡಲಾಗಿದ್ದು, ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಅನುಕೂಲ ಮಾಡಿಕೊಡಲಾಗಿದೆ. ತರಗತಿಗಳ ನಡುವೆಯೇ ಎರಡನೇ ಹಾಗೂ ನಾಲ್ಕನೇ ಸೆಮಿಸ್ಟರ್‌ನ ಮೌಲ್ಯಮಾಪನ ಕಾರ್ಯ ನಡೆಸಲಾಗುತ್ತಿದ್ದು ಸದರಿ ಸೆಮಿಸ್ಟರ್‌ಗಳ ಫಲಿತಾಂಶವನ್ನು ಜನವರಿ 20, 2023 ರ ಒಳಗೆ ಪ್ರಕಟಿಸಲಾಗುವುದು, ಎಂದು ಕುಲಸಚಿವರ (ಪರೀಕ್ಷಾಂಗ) ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
To Top