ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರಿಗೆ 'ಭಾರತ ರತ್ನ ಪ್ರಣಬ್ ಮುಖರ್ಜಿ ಭಾರತದ ದೂರದೃಷ್ಟಿಯ ಕುಲಪತಿ: 2022' ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿನ ಅವರ ಕೊಡುಗೆಗಳನ್ನು ಗುರುತಿಸಿ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳನ್ನು ಗಮನಿಸಿ 'ರಿಥಿಂಕ್ ಇಂಡಿಯಾ- ರಾಷ್ಟ್ರೀಯ ಉತ್ಕೃಷ್ಟತೆಗಾಗಿ ಶೈಕ್ಷಣಿಕ, ಕೈಗಾರಿಕೆ ಮತ್ತು ಸರ್ಕಾರದ ಸಹಯೋಗದಲ್ಲಿ ಅಸಂಖ್ಯಾತ ಕ್ರಿಯಾಶೀಲ ಸಮುದಾಯಗಳನ್ನು ಪೋಷಿಸುವ ವೇದಿಕೆ' ಮಂಗಳೂರು ವಿವಿಯ ಕುಲಪತಿಗೆ ಈ ಗೌರವ ಸಲ್ಲಿಸಿದೆ.
ಡಿಸೆಂಬರ್ 15, 2022 ರಂದು ಸಿವಿಲ್ ಸರ್ವಿಸಸ್ ಆಫೀಸರ್ಸ್ ಇನ್‌ಸ್ಟಿಟ್ಯೂಟ್, ವಿನಯ್ ಮಾರ್ಗ್, ಚಾಣಕ್ಯಪುರಿ, ನವದೆಹಲಿಯಿಂದ ಡ್ಯುಯಲ್ ಮೋಡ್‌ನಲ್ಲಿ (ಆನ್‌ಲೈನ್ ಮತ್ತು ಭೌತಿಕ) ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು.
ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಆನ್‌ಲೈನ್ ಮೋಡ್‌ನಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ.