ಶ್ರೀನಿವಾಸ ಕಲ್ಯಾಣೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Upayuktha
0

ಮಂದಾರಬಯಲು ಶ್ರೀ ದುರ್ಗಾಪರಮೇಶ್ವರಿ ವೆಂಕಟರಮಣ ದೇವಸ್ಥಾನ


ಮಂಗಳೂರು:  ಶ್ರೀ ಮಂದಾರಬೈಲ್ ದುರ್ಗಾಪರಮೇಶ್ವರೀ ವೆಂಕಟರಮಣ ದೇವಸ್ಥಾನದಲ್ಲಿ ಬರುವ ಫೆಬ್ರವರಿ 11 ರಂದು ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ  ನಿನ್ನೆ ಸಂಜೆ  (ಡಿ.4 ಭಾನುವಾರ)  ಶ್ರೀ ದುರ್ಗಾಪರಮೇಶ್ವರೀ ವೆಂಕಟರಮಣ ದೇವಸ್ಥಾನ, ಮಂದಾರಬೈಲ್ ನ ಆವರಣದಲ್ಲಿ ನಡೆಯಿತು.


ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ  ಬ್ರಹ್ಮಶ್ರೀ ದೇರೆಬೈಲು ವಿಠ್ಠಲದಾಸ ತಂತ್ರಿ,  ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ. ಮೂ. ಶ್ರೀ ಕಮಲಾದೇವಿ ಪ್ರಸಾದ್ ಆಸ್ರಣ್ಣ,  ಶಾರದಾ  ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷಎಂ.ಬಿ ಪುರಾಣಿಕ್,. ಮಣಿಪಾಲ ಬಳಗದ ಸಹ ಉಪಾಧ್ಯಕ್ಷ ಆನಂದ್ ಕೆ,  ದೇರೆಬೈಲು ಕಾರ್ಪೊರೇಟರ್ ಶ್ರೀಮತಿ ರಂಜಿನಿ ಕೋಟ್ಯಾನ್,  ಪ್ರಕಾಶ್ ಪಂಡಿತ್, ಧರ್ಮದರ್ಶಿ, ಮಂತ್ರದೇವತೆ ಕ್ಷೇತ್ರ ಮಂದಾರಬೈಲ್ ಮತ್ತಿತರ ಗಣ್ಯರು ಆಗಮಿಸಿದ್ದರು. 

ಈ ಸಂಧರ್ಭದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸೇವಾ ಸಮಿತಿಯ ಅಧ್ಯಕ್ಷರಾದ ದುರ್ಗಾದಾಸ್ ಇರ್ವತ್ರಾಯ, ಕಾರ್ಯಾಧ್ಯಕ್ಷರಾದ ಲಕ್ಷ್ಮಣ್ ದೇವಾಡಿಗ, ಪ್ರದಾನ ಕಾರ್ಯದರ್ಶಿ ಗುರುಪ್ರಸಾದ್ ಕಡಂಬಾರ್, ಉಪದ್ಯಕ್ಷರುಗಳಾದ ಪ್ರಸನ್ನ ರಾವ್, ಗೋಪಾಲಕೃಷ್ಣ ಭಟ್, ಕೋಶಾಧಿಕಾರಿಗಳಾದ ಪ್ರಕಾಶ್ ಕುಮಾರ್, ಸಹ ಕೋಶಾಧಿಕಾರಿಗಳಾದ ವೆಂಕಟರಮಣ ಶೆಟ್ಟಿಗಾರ್, ಹಿಮಕರ್ ರಾವ್, ಸಹ ಕಾರ್ಯದರ್ಶಿಗಳಾದ ಜೆ.ಎ ಜಗದೀಶ್, ರೋಹನ್ ರಾಜ್, ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಗೋಪಾಲಕೃಷ್ಣ ಭಟ್ ಮತ್ತು ಶ್ರೀಮತಿ ಜ್ಯೋತಿ ಪ್ರವೀಣ್ ಮತ್ತಿತರ ಗಣ್ಯರು ಹಾಗೂ ಊರ ಪರಊರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು. ಉಮೇಶ್ ದಂಡಕೇರಿ  ಕಾರ್ಯಕ್ರಮ ನಿರೂಪಿಸಿದರು. 

ಕಳೆದ ಮೂರು ವರ್ಷಗಳಿಂದ ಪ್ರತಿ ಭಾನುವಾರ ಈ ಕ್ಷೇತ್ರದಲ್ಲಿ ವಿಪ್ರ  ಬಂಧುಗಳಿಂದ ಕೋಟಿ ತುಳಸಿ ಅರ್ಚನೆಯ ಸಂಕಲ್ಪದೊಂದಿಗೆ ತುಳಸಿ ಅರ್ಚನೆ ನಡೆಯುತ್ತಿದೆ. ನಿರಂತರವಾಗಿ ನಡೆದು ಬಂದಿರುವ ಈ ಸೇವೆಯ ಮುಕ್ತಾಯವಾಗಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಸಲು ತೀರ್ಮಾನಿಸಲಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top