ಜೀವನದಲ್ಲಿ ಕಟ್ಟುನಿಟ್ಟಾಗಿ ನಿಮ್ಮತನವನ್ನು ರೂಪಿಸಿಕೊಳ್ಳಿ : ರುಚಿ ಘನಶ್ಯಾಮ

Chandrashekhara Kulamarva
0


ಪುತ್ತೂರು : ಪ್ರಸ್ತುತ ಕಾಲಘಟ್ಟದಲ್ಲಿ ಎಲ್ಲಾ ಮಾಹಿತಿಗಳು ನಮ್ಮ ಬೆರಳ ತುದಿಯಲ್ಲಿ ಲಭಿಸುತ್ತದೆ. ಹಾಗಿರುವಾಗ ಮಾಹಿತಿಗಳ ಮೂಲಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಯಶಸ್ಸಿನತ್ತ ಸಾಗಬೇಕು. ಅದರೊಂದಿಗೆ ಉತ್ತಮ ಅಭ್ಯಾಸ ಹಾಗೂ ಗೆಲ್ಲಬೇಕೆಂಬ ಛಲ ಮನಸ್ಸಲ್ಲಿ ಇದ್ದರೆ ಗುರಿ ಎಷ್ಟೇ ದೂರದಲ್ಲಿದ್ದರೂ ಕ್ರಮಿಸಬಹುದು. ಅದರೊಂದಿಗೆ ಬರವಣಿಗೆಯ ಕೌಶಲ್ಯವನ್ನು, ಓದುವ ಹವ್ಯಾಸವನ್ನೂ ಬೆಳೆಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳಬೇಕು. ಆಗ ಮಾತ್ರ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು ಎಂದು ಭಾರತದ ವಿದೇಶಾಂಗ ಸಚಿವಾಲಯದ ಮಾಜಿ ಕಾರ್ಯದರ್ಶಿ  ರುಚಿ ಘನಶ್ಯಾಮ ಅಭಿಪ್ರಾಯ ಪಟ್ಟರು.


ಅವರು ಇಲ್ಲಿನ ಪುತ್ತೂರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾಲಯ(ಸ್ವಾಯತ್ತ) ದಲ್ಲಿ ವಾಣಿಜ್ಯ ಮತ್ತು ಕಲಾ ವಿಭಾಗ ಹಾಗೂ ಐಕ್ಯುಎಸಿ ಘಟಕದ ಆಶ್ರಯದಲ್ಲಿ ನಡೆದ ಒಂದು ದಿನದ ಭಾರತೀಯ ರಾಜತಾಂತ್ರಿಕತೆ ಎನ್ನುವ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.


ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್ , ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ರವಿಕಲಾ ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಡಾ.ಶ್ರೀಶ ಭಟ್, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ. ಎಸ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಜ್ಯೋತಿಕಾ ಕಾರ್ಯಕ್ರಮವನ್ನು ನಿರ್ವಹಿಸಿದರು.


إرسال تعليق

0 تعليقات
إرسال تعليق (0)
To Top