ಕಾಸರಗೋಡು: ಬದಿಯಡ್ಕ ಸಮೀಪದ ಸುಪ್ರಸಿದ್ಧ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ವಾರ್ಷಿಕ ಧನು ಸಂಕ್ರಮಣ ಮಹೋತ್ಸವವು ಡಿ.16 ಮತ್ತು 17ರಂದು ವಿಜೃಂಭಣೆಯಿಂದ ಜರುಗಲಿದೆ. ಶ್ರೀ ದೇವರ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಡಿ.16ರಂದು ರಾತ್ರಿ 8.30 ರಿಂದ 11.30ರ ತನಕ ಡಾ. ವಾಣಿಶ್ರೀ ಕಾಸರಗೋಡು ಗಡಿನಾಡ ಕನ್ನಡತಿ ಸಾರಥ್ಯದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ) ಕಾಸರಗೋಡು ಸಂಸ್ಥೆಯ ವತಿಯಿಂದ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರತಿಭಾನ್ವಿತ ಕಲಾವಿದರಾದ ಗುರುರಾಜ್ ಕಾಸರಗೋಡು, ಡಾ ವಾಣಿಶ್ರೀ ಕಾಸರಗೋಡು, ಸನುಷ ಸುನಿಲ್, ಸನುಷಾ ಸುಧಾಕರನ್, ಭಾಸ್ಕರ್ ಅಡೂರ್, ಚುಕ್ಕಿ ವಿಟ್ಲ, ಅಹನಾ ಎಸ್ ರಾವ್, ಹರೀಶ್ ಪಂಜಿಕಲ್ಲು, ತನ್ವಿ ಶೆಟ್ಟಿ, ಸ್ವಾತಿ, ಪೂಜಾ ಶ್ರೀ, ಕೀರ್ತಿ, ಧನ್ವಿತ್ ಕೃಷ್ಣ, ಧನ್ಯ ಬೆಳ್ಳಿಗೆ, ಪ್ರದ್ಯುಮ್ನ ಶರ್ಮಾ, ಶ್ರದ್ಧಾ ಎ ಎಸ್, ಕೃತ್ತಿಕಾ, ಲಾವಣ್ಯ, ವರ್ಷಾ ಬಿ, ನಿರೀಕ್ಷಾ ಸಿ ಎಚ್, ಲಿಕಿತಾ, ವಿಜಿತಾ ಕೇಶವನ್, ಪ್ರಭಾವತಿ ಕೆದಿಲಾಯ, ಉಮಾವತಿ, ಸಂಧ್ಯಾ, ತೇಜಸ್ವಿನಿ, ಕೃಪೇಶ್, ಜೋಸ್ನಾ, ಶರಣ್ಯ, ಉಷಾ ಸುಧಾಕರನ್, ಕಾವ್ಯ, ರೇವತಿ, ರಾಧಿಕಾ, ಭುವನ, ರಚಿತಾ, ಚಿತ್ತರoಜನ್, ಭಾಗ್ಯಲಕ್ಷ್ಮಿ, ವಿಷ್ಣು ಸುಧಾಕರನ್, ಅರ್ಜುನ್, ಕೃಷ್ಣ ಕಿಶೋರ್, ಪ್ರದ್ಯುಮ್ನ ಶರ್ಮ, ಭುವನ್, ಅತುಲ್, ರಕ್ಷಿತಾ, ಪ್ರಥಮ್ಯ ಯು ವೈ ಹಾಗೂ ಮುಂತಾದವರು ಪಾಲ್ಗೊಳ್ಳುವರು.
ಜನಪದ ಸಾಹಿತ್ಯ, ಭರತನಾಟ್ಯ, ಭಕ್ತಿಗೀತೆ, ದೇಶಭಕ್ತಿಗೀತೆ, ಹರಿಕಥೆ, ಶ್ರೀ ಉದನೇಶ್ವರ ದೇವರ ಕುರಿತಾದ ಸಾಹಿತ್ಯ ಹೀಗೆ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳು ಸಂಸ್ಥೆಯ ವತಿಯಿಂದ ಶ್ರೀ ದೇವರ ಸಾನಿಧ್ಯದಲ್ಲಿ ನಡೆಯುವುದು. ಭಾಗವಹಿಸಿದ ಎಲ್ಲಾ ಪ್ರತಿಭಾನ್ವಿತ ಕಲಾವಿದರಿಗೆ ಸಂಸ್ಥೆಯ ವತಿಯಿಂದ ಗೌರವ ಸ್ಮರಣಿಕೆ ಕೊಟ್ಟು ಪುರಸ್ಕರಿಸಲಾಗುವುದು ಎಂದು ಸಂಸ್ಥೆಯ ಕಾರ್ಯದರ್ಶಿ ಗುರುರಾಜ್ ಕಾಸರಗೋಡು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ