ವೈವಿಧ್ಯಮಯ ಪ್ರದರ್ಶನಗಳ ಅಪೂರ್ವ ಸಂಗಮ – ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ

Upayuktha
0

ಮೂಡುಬಿದಿರೆ: 2022 ದಶಂಬರ 21ರಿಂದ 27ರವರೆಗೆ ಪೂರ್ವಾಹ್ನ 9.30ರಿಂದ ರಾತ್ರಿ 9.00ರವರೆಗೆ ಜನಮನ ತಣಿಸುವ ಅಪೂರ್ವ ಕಾರ್ಯಕ್ರಮಗಳೊಂದಿಗೆ ಕಂಡು ಕೇಳರಿಯದ 5 ಬೃಹತ್ ಮೇಳಗಳು.


ಕೃಷಿಮೇಳ :


● ಎ.ಜಿ.ಕೊಡ್ಡಿ ಆವರಣದಲ್ಲಿ 12 ಎಕರೆ ವಿಸ್ತಾರದ ಪಾರಂಪರಿಕ ತರಕಾರಿ ತೋಟ.


● 100 ವಿಧ ತರಕಾರಿಗಳ ಅತ್ಯಾಕರ್ಷಕ ನೈಜ ತೋಟ.


● ದೇಶ-ವಿದೇಶಗಳ ಬಾಳೆ, ತೆಂಗು, ಧಾನ್ಯ, 530 ವಿಧ ಭತ್ತ, ವಿವಿಧ ಗೆಡ್ಡೆ ಗೆಣಸುಗಳು.


● ವಿಶಾಲ ನೈಜ ಪುಷ್ಪಾಲಂಕಾರದಿಂದ ಸುತ್ತುವರಿದ ಕೃಷಿ ಸಿರಿ ಆವರಣ.


ವಿಜ್ಞಾನ ಮೇಳ:


●ಪ್ರಾಥಮಿಕದಿಂದ ಸ್ನಾತಕೋತ್ತರದವರೆಗಿನ ವಿದ್ಯಾರ್ಥಿಗಳು ಅಗತ್ಯವಾಗಿ ನೋಡಲೇ ಬೇಕಾದ ವಿವಿಧ ವಿಜ್ಞಾನ ಮಾದರಿಗಳ ಪ್ರದರ್ಶನ


● ವೈಜ್ಞಾನಿಕ ಆಟಿಕೆಗಳ ಪ್ರದರ್ಶನ ಮತ್ತು ಮಾರಾಟ


● ಮತ್ಸ್ಯ ಪ್ರದರ್ಶನ, ಏರೋಪ್ಲೇನ್ ಎಕ್ಸಿಬಿಶನ್


ಪುಸ್ತಕಮೇಳ:


● ಪ್ರಾದೇಶಿಕ, ಪ್ರಾಂತೀಯ, ದೇಶೀಯ ಮತ್ತು ಅಂತಾರಾಷ್ಟ್ರೀಯ ಭಾಷೆಗಳ ಅಸಂಖ್ಯ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ.


● ವಿವಿಧ ಅಕಾಡೆಮಿಗಳು, ವಿಶ್ವವಿದ್ಯಾನಿಲಯದ ಪ್ರಸರಾಂಗಗಳು ಭಾಗಿ


ಕಲಾಮೇಳ:


● ದೇಶ-ವಿದೇಶಗಳ ಪ್ರತಿಭಾನ್ವಿತ ಕಲಾವಿದರ ಸಂಗಮದ ಚಿತ್ರಕಲೆ, ಶಿಲ್ಪಕಲೆ, ವ್ಯಂಗ್ಯ ಚಿತ್ರ ಹಾಗೂ ಫೋಟೋಗ್ರಫಿ ರಚನೆ ಮತ್ತು ಪ್ರದರ್ಶನ.


ಆಹಾರ ಮೇಳ:


● ಸಾಂಪ್ರದಾಯಿಕ ಮತ್ತು ಆಧುನಿಕ ವೈವಿಧ್ಯಮಯ ಸಸ್ಯಹಾರಿ ಮತ್ತು ಮಾಂಸಾಹಾರಿ ಆಹಾರಗಳು


● ಹಣ್ಣು ಹಂಪಲುಗಳ ಪ್ರದರ್ಶನ ಮತ್ತು ಮಾರಾಟ


ಪ್ರತಿನಿತ್ಯ 5 ವೇದಿಕೆಗಳಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು


● ಆಳ್ವಾಸ್ ನುಡಿಸಿರಿ ವೇದಿಕೆ, ಡಾ| ವಿ.ಎಸ್. ಆಚಾರ್ಯ ವೇದಿಕೆ, ಕೃಷಿಸಿರಿ ವೇದಿಕೆಗಳಲ್ಲಿ ಪೂರ್ವಾಹ್ನ 10.00 ರಿಂದ ರಾತ್ರಿ 6.00ರವರೆಗೆ ಕಾರ್ಯಕ್ರಮ.


● ಕೆ.ವಿ.ಸುಬ್ಬಣ್ಣ ವೇದಿಕೆಯಲ್ಲಿ ಸಂಜೆ 5.30ರಿಂದ ರಾತ್ರಿ 9.00ರವರೆಗೆ.


● ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಸ್ಕೌಟ್ಸ್-ಗೈಡ್ಸ್ ಪ್ರತಿನಿಧಿಗಳಿಗೆ ಮಾತ್ರವೇ ಕಾರ್ಯಕ್ರಮ ನೇರವಾಗಿ ನೋಡಲು ಅವಕಾಶ, ಉಳಿದಂತೆ ಸಂಪೂರ್ಣ ಕಾರ್ಯಕ್ರಮದ ನೇರಪ್ರಸಾರ ಇರುವುದು.


ವಿದೇಶಿ ಪ್ರತಿನಿಧಿಗಳು:


● ಮಲೇಶಿಯಾದಿಂದ 24, ದಕ್ಷಿಣ ಕೊರಿಯಾದಿಂದ 7 ಪ್ರತಿನಿಧಿಗಳು


● 800 ಜಾಂಬೂರಿ ಆ್ಯಕ್ಟಿವಿಟಿ ಲೀಡರ್ಸ್, 1000 ರೋವರ್ಸ್ ರೇಂಜರ್ಸ್ ಸ್ವಯಂಸೇವಕರು


● ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಒಡಿಶಾ, ತಮಿಳು ನಾಡು ರಾಜ್ಯಗಳಿಂದ ಹಾಗೂ ದಕ್ಷಿಣ ರೈಲ್ವೇ ಪ್ರತಿನಿಧಿಗಳು


ಹೊರೆಕಾಣಿಕೆ:


● ಮೂಲ್ಕಿ, ಕಿನ್ನಿಗೋಳಿ, ಬಜ್ಪೆ, ಬಂಟ್ವಾಳ, ಬಿಸಿರೋಡು, ಉಳ್ಳಾಲ, ಬೆಳ್ತಂಗಡಿ, ಉಡುಪಿ ಹಾಗೂ ಮಂಡ್ಯ ಭಾಗಗಳಿಂದ ಅಕ್ಕಿ, ತೆಂಗಿನಕಾಯಿ, ತರಕಾರಿಗಳು, ಸಕ್ಕರೆ ಬೆಲ್ಲ ಸೇರಿದಂತೆ ಅಗತ್ಯ ವಸ್ತುಗಳ ಬೃಹತ್ ಹೊರೆಕಾಣಿಕೆ


● ಮೂಡುಬಿದಿರೆ ವಲಯ ಮುಸ್ಲಿಂ ಸೌಹಾರ್ದ ಸಮಿತಿಯ ವತಿಯಿಂದ 20 ವಾಹನಗಳಲ್ಲಿ 5 ಲಕ್ಷ ಬೆಲೆಬಾಳುವ ಹೊರೆಕಾಣಿಕೆ, ದಫ್ ಕುಣಿತದ ಮೂಲಕ ಹೊರೆಕಾಣಿಕೆಯ ಆಗಮನ, ಸಮಿತಿಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಕಾರ್ಯದರ್ಶಿ ಶಫಿ ಸೇರಿದಂತೆ 1000 ಜನರು ಭಾಗಿ


ಜಾಂಬೂರಿಯ ಇನ್ನಿತರ ಆಕರ್ಷಣೆಗಳು:


● 35 ಸಾಹಸಮಯ ಕ್ರೀಡೆಗಳು


● ಅರಣ್ಯ ಸಂಪತ್ತಿನ ಜಾಗೃತಿ ಮೂಡಿಸಲು ಜಂಗಲ್ ಟ್ರಯಲ್


● ಪ್ರತಿ ದಿನ ತಂಡ ತಂಡವಾಗಿ 5 ಕಿಮೀನಷ್ಟು ಸ್ವಚ್ಚತಾ ಕಾರ್ಯ (168ಕಿಮೀ ಸ್ವಚ್ಚಗೊಳಿಸುವ ಗುರಿ)


● ಕೈಮಗ್ಗ, ಖಾದಿ, ರೇಷ್ಮೆ, ಕರಕುಶಲ ವಸ್ತುಗಳು, ತಿಂಡಿತಿನಿಸುಗಳ ದೇಸಿ ಮಳಿಗೆಗಳು


● 1000ಕ್ಕೂ ಮಿಕ್ಕಿದ ವೈವಿಧ್ಯಮಯ ಮತ್ತು ದಿನವಹಿ ಅಗತ್ಯವಸ್ತುಗಳ ಮಾರಾಟ ಮಳಿಗೆಗಳು


● ಬೇರೆಲ್ಲೂ ದೊರೆಯದ, ಪ್ರತಿಯೊಬ್ಬರೂ ಕುಟುಂಬ ಸಮೇತ ಅಗತ್ಯವಾಗಿ ನೋಡಲೇಬೇಕಾದ ಜಾಂಬೂರಿ ಉತ್ಸವ.


● ಆಬಾಲ ವೃದ್ಧರಾಗಿ ಎಲ್ಲರಿಗೂ ಅಗತ್ಯದ ಮತ್ತು ಅನುಕೂಲದ ಆಕರ್ಷಕ ಸಾಂಸ್ಕೃತಿಕ ಜಾಂಬೂರಿ.


● ಮಧ್ಯಾಹ್ನ ಮತ್ತು ರಾತ್ರಿಯ ಉಚಿತ ಊಟೋಪಚಾರದ ಆತಿಥ್ಯ.


● ಶುಲ್ಕರಹಿತವಾಗಿ ಎಲ್ಲರಿಗೂ ಉಚಿತ ಮತ್ತು ಮುಕ್ತ ಪ್ರವೇಶ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top