ವಿವೇಕಾನಂದ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ ಕೈಗಾರಿಕಾ ಭೇಟಿ

Upayuktha
0

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ‘ಕೈಗಾರಿಕಾ ಭೇಟಿ’ ಕಾರ್ಯಕ್ರಮ ನಡೆಯಿತು. ಪದವಿ ಪೂರ್ವ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಮಂಗಳೂರಿನ ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳ ಘಟಕ ಮಂಗಳೂರು ಡೇರಿಗೆ ಭೇಟಿ ನೀಡಿದರು.


ಅದೇ ರೀತಿ ಮಂಗಳೂರಿನ ಬೈಕಂಪಾಡಿಯ ಗೇರುಬೀಜ ಸಂಸ್ಕರಣೆ ಹಾಗೂ ರಫ್ತು ಘಟಕವಾದ ಅಚಲ್ ಇಂಡಸ್ಟ್ರೀಸ್, ವಾಹನಗಳ ಸಸ್ಪೆಷನ್ಸ್ ತಯಾರಿಕಾ ಘಟಕ ಲಾಮಿನಾ ಸಸ್ಪೆಷನ್ಸ್ ಮತ್ತು ಒಡ್ಡೂರು ಫಾರ್ಮ್ಸ್ ಭೇಟಿ ಮಾಡಿ ಮಾಹಿತಿ ಪಡೆದರು. ಘಟಕದಲ್ಲಿ ಉತ್ಪಾದಿಸಿದ ವಿವಿಧ ಬಗೆಯ ಉತ್ಪನ್ನಗಳನ್ನು ದೇಶದ ವಿವಿಧೆಡೆ ವಿತರಣೆ ಹಾಗೂ ಹೊರ ರಾಷ್ಟ್ರಗಳಿಗೆ ರಫ್ತು ಮಾಡಲಾಗುವ ವಿಧಾನಗಳ ಬಗ್ಗೆ ಮಾಹಿತಿಯನ್ನು ಪಡೆದರು.


ಸುಮಾರು 70 ವಿದ್ಯಾರ್ಥಿಗಳೊಂದಿಗೆ ವಾಣಿಜ್ಯ ಸಂಘದ ಸಂಯೋಜಕಿ ಉಷಾ ಎ. ಎಂ., ವಾಣಿಜ್ಯ ವಿಭಾಗದ ಮುಖ್ಯಸ್ಥ ಶ್ರೀಧರ ಶೆಟ್ಟಿಗಾರ್ ಹಾಗೂ ವಿಭಾಗದ ಉಪನ್ಯಾಸಕರು ಭೇಟಿ ನೀಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top