ಆಳ್ವಾಸ್ ಕಾಲೇಜು: ಪ್ರಜ್ಞಾ- ಸಂಸ್ಕೃತ ವೇದಿಕೆಯ ಉದ್ಘಾಟನೆ

Upayuktha
0

ಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜು ಹಾಗೂ ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಸಹಯೋಗದಲ್ಲಿ ಪ್ರಜ್ಞಾ- ಸಂಸ್ಕೃತ ವೇದಿಕೆಯನ್ನು ಮಿಜಾರಿನ ಕಾಲೇಜಿನ ಆವರಣದಲ್ಲಿ ಉದ್ಘಾಟಿಸಲಾಯಿತು.


ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಎಸ್‌ ವ್ಯಾಸ, ಡೀಮ್ಡ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವ ಡಾ ಶ್ರೀಧರ್ ಎಂ. ಕೆ ಮಾತನಾಡಿ ‘ಪ್ರಜ್ಞೆ ಎಂದರೆ ಚೈತನ್ಯ. ಅಪಾರವಾದ, ಅದಮ್ಯ ಶಕ್ತಿಯನ್ನು ಹೊಂದಿರುವಂತಹದ್ದು. ಅದರಿಂದ ಸೃಜನಶೀಲತೆಯನ್ನು ಹಾಗೂ ಪ್ರತಿಭೆಯನ್ನು ಕ್ರೋಡಿಕರಿಸಬಹುದು. ಈ ಪ್ರಜ್ಞೆ ಅಂತರ್ಗತವಾಗಿರುತ್ತದೆ. ಅದನ್ನು ಪ್ರಕಟಗೊಳಿಸಲು ಹಲವಾರು ಮಾರ್ಗಗಳಿದ್ದು, ಅವುಗಳಲ್ಲಿ ಮುಖ್ಯವಾದುದ್ದು, ಅಂತರ್‌ಮೌನ, ಶ್ರವಣ ಮನನ, ನಿಧಿದ್ಯಾಸನ, ಧ್ಯಾನ ಹಾಗೂ ಧಾರಣ ಎಂದರು.


ಪ್ರಜ್ಞೆ ಎನ್ನುವ ಪದದ ಅರ್ಥ ಉಪನಿಷತ್ತುಗಳಲ್ಲಿ ಹೇಗೆ ವರ್ಣಿತವಾಗಿದೆ, ವೇದಗಳಲ್ಲಿ ಈ ಶಬ್ದದ ವಿವೇಚನೆ ಹಾಗೂ ಅಮರ ಕೋಶವೇ ಮೊದಲಾದ ಕೋಶಗಳಲ್ಲಿ ಪ್ರಜ್ಞಾ ಎನ್ನುವಂತಹ ಪರಿಕಲ್ಪನೆ ಹೇಗೆ ಬೆಳೆದು ಬಂತು ಎಂಬುದನ್ನು ವಿವರಿಸಿದರು.


ಪ್ರಾಸ್ತಾವಿಕ ಮಾತುಗಳನ್ನಾಡಿದ ಪ್ರಜ್ಞಾ ವೇದಿಕೆಯ ಸಂಯೋಜಕ ಡಾ. ವಿನಾಯಕ ಭಟ್ ಗಾಳಿಮನೆ, ಎಲ್ಲ ಬಾಷೆಗಳಿಗೆ ಮಾತೃ ಸ್ವರೂಪದಲ್ಲಿರುವ ಭಾಷೆ ಅದು ಸಂಸ್ಕೃತ ಭಾಷೆ. ಈ ಭಾಷೆ ನಾಲಿಗೆಯ ಮೇಲೆ ಕುಣಿದಾಡುವ ಅಕ್ಷರಗಳ ಸರಮಾಲೆಯಲ್ಲ. ಅದು ಭಾವನೆಗಳಿಗೆ ರೂಪ ಕೊಟ್ಟಂತ ಭಾವ ಭಾಷೆ. ದೇವ ಭಾಷೆ. ದೇಶ ಭಾಷೆ. ಇಂತಹ ಭಾಷೆಯನ್ನು ಉಳಿಸಿ, ಬೆಳೆಸಿ, ಕಟ್ಟುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರಜ್ಞಾ ಎಂಬ ಈ ವೇದಿಕೆ ಸಂಸ್ಕೃತದ ಉಳಿವಿಗೆ ಕಾರಣವಾಗಬೇಕು ಎಂದು ತಿಳಿಸಿದರು.


ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಭಾರತದ ಪ್ರಾಚೀನ ಬಾಷೆಗಳಲ್ಲೊಂದಾದ ಸಂಸ್ಕೃತ ಬಾಷೆಯನ್ನು ಬಳಸಿ ಬೆಳಸೋಣ ಎಂದರು.


ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ.ಪೀಟರ್ ಫೆರ್ನಾಂಡೀಸ್, ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ರಮಾನಂದ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕುಮಾರಿ ಅನಘ ಎಂ ನಿರೂಪಿಸಿ. ಸಿಂಧೂ ಭಟ್ ಸ್ವಾಗತಿಸಿದರು. ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ. ರಮಾನಂದ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top