ಗುಜರಾತ್‌ನಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು

Upayuktha
0



ಗುಜರಾತ್‌ : ಗುಜರಾತ್‌ ವಿಧಾನಸಭಾ ಚುನಾವಣೆ 2022ರಲ್ಲಿ ಬಿಜೆಪಿ ಪಕ್ಷ ಸತತ ಏಳನೇ ಬಾರಿಗೆ ಐತಿಹಾಸಿಕ ಜಯ ಸಾಧಿಸಿದೆ. ರಾಜ್ಯದ ಒಟ್ಟು 182 ಕ್ಷೇತ್ರಗಳ ಪೈಕಿ ಬಿಜೆಪಿಯು ಒಟ್ಟು 156 ಕ್ಷೇತ್ರವನ್ನು ಬಾಚಿಕೊಂಡು ತನ್ನದಾಗಿಸಿಕೊಂಡಿದೆ. 


ಈ ಕುರಿತು ಭಾರತೀಯ ಚುನಾವಣೆ ಆಯೋಗ ಮಾಹಿತಿ ನೀಡಿದ್ದು ಗುಜರಾತಿನಲ್ಲಿ ಕಾಂಗ್ರೆಸ್ ಭಾರಿ ಹಿನ್ನಡೆ ಅನುಭವಿಸಿದೆ. ಕೇವಲ 17 ಸ್ಥಾನ ಪಡೆಯುವ ಮೂಲಕ ಸೋಲು ಅನುಭವಿಸಿದೆ. ಚುನಾವಣೆಯ ಮತ ಎಣಿಕೆಯ ಪ್ರಾರಂಭವಾದ ಬಳಿಕ ನಿರಂತರವಾಗಿ ಮುನ್ನಡೆ ಕಾಯ್ದುಕೊಂಡಿದ್ದನ್ನು ಕಂಡು ಬಿಜೆಪಿ ನಾಯಕರು ಹರ್ಷ ವ್ಯಕ್ತಪಡಿಸಿದರು. ಸಂಜೆಯ ವೇಳೆ ರಾಷ್ಟ್ರ ರಾಜಧಾನಿ ದೆಹಲಿಯ ಪಕ್ಷದ ಕಚೇರಿಯಲ್ಲಿ ಮುಖಂಡರು, ಕಾರ್ಯಕರ್ತರ ಸಂಭ್ರಮಾಚರಣೆ ಕಂಡು ಬಂತು. ಪ್ರಧಾನಿ ನರೇಂದ್ರ ಮೋದಿಯವರ ಪರ ಘೋಷಣೆಗಳು ಮೊಳಗಿದವು.ಬ


ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಎಲ್ಲಾ ಮೂಖಂಡರು ಬೃಹತ್‌ ಹಾರದ ಮುಖಾಂತರ ಪ್ರಧಾನಿಗಳನ್ನು ಅಭಿನಂದಿಸಿದರು. 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top