ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾನವಹಕ್ಕುಗಳ ದಿನಾಚರಣೆ

Upayuktha
0

ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಐಕ್ಯೂಎಸಿ ಆಶ್ರಯದಲ್ಲಿ ರಾಜಕೀಯ ಶಾಸ್ತ್ರ ವಿಭಾಗ ಮತ್ತು ಮಾನವಹಕ್ಕುಗಳ ಸಮಿತಿಯಿಂದ ಮಾನವಹಕ್ಕುಗಳ ದಿನಾಚರಣೆ ಆಚರಿಸಲಾಯಿತು.

ವಿಶೇಷ ಉಪನ್ಯಾಸ ನೀಡಿದ ರಾಜಕೀಯ ಶಾಸ್ತ್ರ ಸಹಾಯಕ ಪ್ರಾಧ್ಯಾಪಕ, ಪ್ರಶಾಂತ ಎನ್. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ವಿವಿಧ ಮಾನವಹಕ್ಕುಗಳ ಕುರಿತಾದ ಕಲ್ಪನೆಗಳಿದ್ದರೂ ವಿಸ್ತೃತ ಮತ್ತು ಸಮಗ್ರವಾದ ಪರಿಕಲ್ಪನೆಯನ್ನು ವಿಶ್ವಸಂಸ್ಥೆಯ ವಿಶ್ವ ಮಾನವಹಕ್ಕುಗಳ ಫೋಷಣೆಯಲ್ಲಿ ಮಾಡಲಾಗಿದ್ದು ಇದೆಲ್ಲವೂ ನಮ್ಮ ಸಂವಿಧಾನ ಮೂರನೇ ಭಾಗವಾದ ಮೂಲಭೂತ ಹಕ್ಕುಗಳಲ್ಲಿ ವ್ಯಕ್ತವಾಗಿದೆ. ಸಾಂಸ್ಥಿಕ, ಸಂವಿಧಾನಾತ್ಮಕ ಹಾಗೂ ಕಾನೂನಾತ್ಮಕ ರಕ್ಷಣೆಗಳಿದ್ದರೂ ಭಾರತದಲ್ಲಿ ವಿವಿಧ ರೀತಿಯಲ್ಲಿ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿರುವುದು ಕಳವಳಕಾರಿ ಮತ್ತು ನಮ್ಮ ಪ್ರಜಾಪ್ರಭುತ್ವಕ್ಕೆ ಸವಾಲಾಗಿದೆ ಎಂದರು. 

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ ಸುರೇಶ್ ರೈ. ಕೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾನವಹಕ್ಕುಗಳ ಉಗಮ ಮತ್ತು ಬೆಳವಣಿಗೆಯನ್ನು ಸೂಕ್ಷ್ಮವಾಗಿ ಪರಿಚಯಿಸುತ್ತಾ ಜಾಗೃತಿಯ ಅಗತ್ಯತೆಯನ್ನು ತಿಳಿಸಿದರು. ಐ.ಕ್ಯೂ.ಎ.ಸಿ ಸಂಚಾಲಕರಾದ ಡಾ. ಮೇಮಿ ಮಿರಾಂದ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಾಧಾಕೃಷ್ಣ, ರಾಜ್ಯಶಾಸ್ತ್ರ ಉಪನ್ಯಾಸಕರಾದ ರವಿ ಚಿತ್ರಾಪುರ, ಬೋಧಕ-ಬೊಧಕೇತರ ವೃಂದದವರು ಉಪಸ್ಥಿತರಿದ್ದರು.

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top