ಮೂಡುಬಿದಿರೆ: ರೇಡಿಯೋ ಹಾಗೂ ಸಾಮಾಜಿಕ ಜಾಲತಾಣಗಳು ಇಂದು ಜತೆಯಾಗಿ ಸಾಗುವ ಮಾಧ್ಯಮಗಳಾಗಿವೆ ಎಂದು ದುಬೈಯ ಫನ್ ಏಷ್ಯಾ ನೆಟ್‌ವರ್ಕ್ ಕಾರ್ಯಕ್ರಮ ನಿರ್ಮಾಪಕ ಅರ್‌ಜೆ ಎರೋಲ್ ಹೇಳಿದರು.
ಆಳ್ವಾಸ್ ಕಾಲೇಜಿನ ಸ್ನಾತಕೊತ್ತರ ಪತ್ರಿಕೋದ್ಯಮ ವಿಭಾಗದ ಅಭಿವ್ಯಕ್ತಿ ಫೊರಂ ವತಿಯಿಂದ ನಡೆದ `ರೇಡಿಯೋ ಮತ್ತು ಸಾಮಜಿಕ ಜಾಲತಾಣ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಪ್ರಸ್ತುತ ಸಾಮಾಜಿಕ ಜಾಲತಾಣಗಳಿಗೆ ಜನರು ಹೆಚ್ಚು ಮಾರುಹೋಗುತ್ತಿದ್ದರೂ, ನಗರ ಪ್ರದೇಶದಲ್ಲಿ ರೇಡಿಯೊ ಕೇಳುಗರ ಸಂಖ್ಯೆ ಹೆಚ್ಚಿದೆ. ಸಾಮಾಜಿಕ ಜಾಲತಾಣವು ಮನುಷ್ಯನ ಜೀವನದ ಭಾಗ ಮಾತ್ರ, ಇದರಲ್ಲಿ ಬರುವ ಎಲ್ಲಾ ಅಂಶಗಳನ್ನು ಸತ್ಯ ಎಂದು ಪರಿಗಣಿಸಬಾರದು. ಎರಡೂ ಮಾಧ್ಯಮಗಳು ಜತೆಯಾಗಿ ಸಾಗಿದಾಗ ಮಾತ್ರ ಪರಿಣಾಮಕಾರಿಯಾಗಿರುತ್ತವೆ” ಎಂದರು.
ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಆರ್.ಜೆಗಳು ರೇಡಿಯೊಗಳಿಗೆ ಮರು ಜೀವ ಕೊಟ್ಟಿದ್ದಾರೆ, ಯುವ ಜನತೆಯನ್ನು ರೇಡಿಯೊ ಕೇಳುಗರಾಗಿ ಪರಿವರ್ತಿಸುವಲ್ಲಿ ಆರ್‌ಜೆಗಳ ಪಾತ್ರ ಹೆಚ್ಚಿದೆ ಎಂದರು.
ಕಾರ್ಯಕ್ರಮದಲ್ಲಿ ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕವನ ದೇವಾಡಿಗ ಸ್ವಾಗತಿಸಿ, ನಿರೂಪಿಸಿದರು, ಶಿಲ್ಪ ಕುಲಾಲ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ