ಜಾಂಬೂರಿಯ ವೈಭವ : ಶಂಕರ್ ಮಹಾದೇವನ್‌ ಗಾಯನ ಸಂಗೀತ ಪ್ರಿಯರಿಗೆ ರಸದೌತಣ

Upayuktha
0



ಮೂಡುಬಿದಿರೆ : ಐವತ್ತು ಸಾವಿರಕ್ಕೂ ಅಧಿಕ ಮಂದಿ . ಸತತ 2 ಘಂಟೆಗಳ ಕಾಲ ನಡೆದ ಕಾರ್ಯಕ್ರಮ. ಬಿಡುವಿಲ್ಲದೇ ಹರಿದು ಬಂದ ಚಪ್ಪಾಳೆ ಸದ್ದು ಜಾಂಬೂರಿಯ ವೈಭವಕ್ಕೆ ಮತ್ತಷ್ಟು ಮೆರಗು ತಂದಿತು.


ಇದು ಜಾಂಬೂರಿ ಎರಡನೇ ದಿನ ವನಜಾಕ್ಷಿ ಕೆ .ಶ್ರೀಪತಿ ಭಟ್ ವೇದಿಕೆಯಲ್ಲಿ ಶಂಕರ ಮಹಾದೇವನ್ ಮತ್ತು ಬಳಗ ಮುಂಬೈ, ನೀಡಿದ ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಕಂಡು ಬಂದ ಕ್ಷಣ. ಕನ್ನಡ, ಹಿಂದಿ, ತಮಿಳು ಸೇರಿ ಕೆಲವು ಹಾಡುಗಳನ್ನು ಹಾಡಿ ಸಂಗೀತ ಪ್ರಿಯರಿಗೆ ರಸದೌತಣವನ್ನು ನೀಡಿದರು.


ಗಣನಾಯಕಯಾ ಗಣದೈವತಾಯ ಎಂದು ವಿಘ್ನವಿನಾಶಕ ಗಣಪತಿಯನ್ನು  ತಮ್ಮ ಸುಮಧುರ ಗಾಯನದ ಮೂಲಕ ಸ್ಮರಿಸುತ್ತಾ ಸಂಗೀತ ರಸಸಂಜೆ ಕಾರ್ಯಕ್ರಮ ಪ್ರಾರಂಭಿಸಿದರು.


ತಥ್ ಕ್ಷಣವೇ ವಿರಾಮ ನೀಡದೇ ಅತಿರಥಾ ಮಹಾ ರಥಾ ಸಾರಥಿ ಎನ್ನುತ್ತಾ ಸೇರಿರುವ 50 ಸಾವಿರಕ್ಕೂ ಅಧಿಕ ಪ್ರೇಕ್ಷಕರೊಂದಿಗೆ ಸಂಗೀತ ಜುಗಲ್-ಬಂದಿ ನಡೆಸಿದರು.  ಮುಂದಿನ ಹಾಡಿನ ಯಾವುದೆಂದೂ ನಿರೀಕ್ಷಿಸುತ್ತಿದವರಿಗೆ ಯಾವುದೇ ಕುರುಹೂ ನೀಡದೆ ಮಹಿಳಾ ಮಣಿಯರಿಗಾಗಿಯೇ ಈ ಹಾಡು ಎನ್ನುತ್ತಲೇ ಪ್ರೀಟಿ ವುಮೆನ ಹಾಡಿದರು.


ಮಹಾದೇವನ್ ನುಡಿದಂತೆ ಸ್ಸೆಕ್ಸೋಪೋನ್ ನುಡಿಸಿದ ಅಧ್ಬುತ ಕಲಾವಿದ ವೇದಿಕೆಯಲ್ಲಿ ಎಲ್ಲರ ಗಮನ ಸೆಳೆದರು.


ಇದಲ್ಲದೆ ಅತಿರಥಾ ಮಹಾ ರಥಾ ಸಾರಥಿ ಎನ್ನುತ್ತಾ ಸೇರಿರುವ 50 ಸಾವಿರಕ್ಕೂ ಅಧಿಕ ಪ್ರೇಕ್ಷಕರೊಂದಿಗೆ ಸಂಗೀತ ಜುಗಲ್-ಬಂದಿ ನಡೆಸಿದರು.


ಇನ್ನೂ  ಇಸ್ ದ್ ಟೈಮ್ ಟು  ಡಿಸ್ಕೋ  ಏನ್ನುತ್ತಾ ವೇದಿಕೆ ಮೇಲೆ ಹೆಜ್ಜೆ ಹಾಕುತ್ತಿದ್ದರೆ. ವೇದಿಕೆ ಮುಂಭಾಗದಲ್ಲಿ ಕುಳಿತ ಪ್ರೇಕ್ಷಕರೆಲ್ಲಾ  ಒನ್ಸ್ ಮೋರ್ ಎಂದು ಕೇಕೇ ಹಾಕಿದರು. ನೋಡುಗರನ್ನು ಭಾವನಾತ್ಮಕ ಲೋಕಕ್ಕೆ ಕೊಂಡೊಯ್ಯೂದ್ದಿದ್ದು  ಟ್ರಿಬ್ಯುಟ್ ಟು ಪುನೀತ್ ಹಾಡು , ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್   ಕಲ್ ಹೋ ನ ಹೋ ಗಾಯನದ  ಮುಖೇನ  ಗೌರವ ಅರ್ಪಣೆ ಮಾಡುತ್ತಿದ್ದರೆ ಪ್ರೇಕ್ಷಕರು  ಮೊಬೈಲ್ ಟಾರ್ಚ ಆನ್ ಮಾಡಿ ಗಾಯನದ ಸಾಹಿತ್ಯಕೆ  ಮೂಕವಿಸ್ಮಿತರಾಗಿ ತಲೆದೂಗುತ್ತಿದ್ದರು.


ಮೌನ ಆವರಿಸಿದ ವೇದಿಕೆಗೆ ಮತ್ತದೆ ಕಳೆ  ತಂದಿದ್ದು ಹಿಂದೂಸ್ತಾನಿ ಹಾಡು. ಹಾಡನ್ನು ಅತ್ಯಂತ ಸೊಗಸಾಗಿ ಹಾಡುತ್ತಿದ್ದರೆ  ಮಕ್ಕಳು ವೇದಿಕೆ ಕೆಳಗೆ ಇಂಡಿಯಾ ಇಂಡಿಯಾ ಎಂದು ಕೇಕೆ ಹಾಕುತ್ತಿರುವುದು ಸಾಕಷ್ಟು  ಜೋಶ್ ನೀಡಿತು. ಇದಲ್ಲದೆ ಜೈ ಜೈ ಭಜರಂಗಿ, ಕ್ಯಾಕರೆಂಗೆ, ಕಜರಾರೇ ಹಾಡನ್ನು ಹಾಡಿ ಜನರನ್ನು ರಂಜಿಸಿದರು.


ಹೀಗೆ ಒಂದೂವರೆ ಗಂಟೆಗಳ ಕಾಲ ನೇರವೇರಿದ ಕಾರ್ಯಕ್ರಮವು ಪ್ರೇಕ್ಷಕರಿಗೆ ಸಂಗೀತದ ರಸದೌತಣ ನೀಡುತ್ತ ಒತ್ತಡವನ್ನು ತಣಿಸಿದರು. ಉಲ್ಲಾಸ ಭರಿತರಾಗಿ ಜನರು ಕಾರ್ಯಕ್ರಮ ಕಣ್ತುಂಬಿಕೊಂಡಿದ್ದು, ಕಾರ್ಯಕ್ರಮ ನೀಡಿದ ತಂಡಕ್ಕೂ ಮನೋಲ್ಲಾಸ ನೀಡಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top